ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ 29 ವರ್ಷ ಸೇವೆ ಸಲ್ಲಿಸಿದ ಬಾರ್ಕೂರಿನ ಉದಯ್ ಕುಮಾರ್ ಗಾಣಿಗ ನಿವೃತ್ತಿ ಆತ್ಮೀಯ ಬೀಳ್ಕೊಡುಗೆ

ಉಡುಪಿಯ ಎಂ.ಜಿ.ಎಂ ಕಾಲೇಜಿನಲ್ಲಿ 29 ವರ್ಷ ಸೇವೆ ಸಲ್ಲಿಸಿದ ಬಾರ್ಕೂರಿನ ಉದಯ್ ಕುಮಾರ್ ಗಾಣಿಗ ನಿವೃತ್ತಿ ಆತ್ಮೀಯ ಬೀಳ್ಕೊಡುಗೆ
0Shares

*ಉಡುಪಿಯ ಪ್ರತಿಷ್ಠಿತ *ಮಹಾತ್ಮ ಗಾಂಧಿ ಮೆಮೋರಿಯಲ್ (ಎಂ ಜಿ.ಎಂ) ಕಾಲೇಜಿನಲ್ಲಿ* ಗುಮಾಸ್ತರಾಗಿ 29 ವರ್ಷಗಳ ಸುದೀರ್ಘ ಸೇವೆ ಸಲ್ಲಿಸಿ ನಿವೃತ್ತರಾದ ಬಾರ್ಕೂರಿನ ಉದಯ್ ಕುಮಾರ್ ಗಾಣಿಗ ಅವರನ್ನು ಕಾಲೇಜಿನ ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ವರ್ಗದ ವತಿಯಿಂದ ಆತ್ಮೀಯವಾಗಿ ಅಭಿನಂದಿಸಿ ಗೌರವಿಸಲಾಯಿತು

ದಿನಾಂಕ 29-09-2026 ರಂದು ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಉದಯ್ ಕುಮಾರ್ ಗಾಣಿಗ ಅವರನ್ನು ಸಂಸ್ಥೆಯವತಿಯಿಂದ ಶಾಲು ಹೊದಿಸಿ, ಹಾರ ಹಾಕಿ, ಫಲಪುಷ್ಪ ಸ್ಮರಣಿಕೆ ನೀಡಿ ಗೌರವಿಸಲಾಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲರು, ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉದಯ್ ಕುಮಾರ್ ಅವರ ಪ್ರಾಮಾಣಿಕ ಸೇವೆ, ಶಿಸ್ತು ಮತ್ತು ವಿದ್ಯಾರ್ಥಿಗಳೊಂದಿಗಿನ ಸ್ನೇಹಪರ ನಡವಳಿಕೆಯನ್ನು ಸ್ಮರಿಸಿ ಶ್ಲಾಘಿಸಿದರು. ಅವರ ನಿವೃತ್ತ ಜೀವನ ಸುಖಕರವಾಗಿರಲಿ ಎಂದು ಹಾರೈಸಿದರು*.

ಕಾರ್ಯಕ್ರಮದಲ್ಲಿ ಕಾಲೇಜಿನ ಹಿರಿಯ ಉಪನ್ಯಾಸಕರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now