ಉಡುಪಿ ಜಿಲ್ಲಾ ಆಸ್ಪತ್ರೆಯನ್ನು ಆರಂಭಿಸುವ ಬೇಡಿಕೆ : ಅಹೋರಾತ್ರಿ ಪ್ರತಿಭಟನಾ ಸಭೆ ಆರಂಭ

ಉಡುಪಿ ಜಿಲ್ಲಾ ಆಸ್ಪತ್ರೆಯನ್ನು ಆರಂಭಿಸುವ ಬೇಡಿಕೆ : ಅಹೋರಾತ್ರಿ ಪ್ರತಿಭಟನಾ ಸಭೆ ಆರಂಭ
0Shares

ಉಡುಪಿ : ನಗರದ ಅಜ್ಜರಕಾಡಿನಲ್ಲಿ ಜಿಲ್ಲಾಸ್ಪತ್ರೆಗೆಂದು ನೂತನವಾಗಿ ಕಟ್ಟಡವೊಂದನ್ನು ಕಟ್ಟಿ ಒಂದು ವರ್ಷ ಕಳೆದರೂ ಜನರ ಸೇವೆಗೆ ಬಿಟ್ಟು ಕೊಟ್ಟಿಲ್ಲ. ಆಸ್ಪತ್ರೆಗೆ ಬೇಕಾಗಿರುವ ಯಂತ್ರೋಪಕರಣ, ವೈದ್ಯರು ಹಾಗೂ ದಾದಿಯರನ್ನು ವ್ಯವಸ್ಥೆಗೊಳಿಸಿ ಎಂದು ಕರ್ನಾಟಕ ರಕ್ಷಣಾ ವೇದಿಕೆ (ಪ್ರವೀಣ್ ಶೆಟ್ಟಿ ಬಣ) ನೀಡಿದ ಗಡುವು ಮುಕ್ತಾಯಗೊಂಡಿದ್ದು, ಜನರ ಸೇವೆಗೆ ಜಿಲ್ಲಾಸ್ಪತ್ರೆಯನ್ನು ಬಿಟ್ಟು ಕೊಡಬೇಕೆಂಬ ಬೇಡಿಕೆಯೊಂದಿಗೆ ಇಂದಿನಿಂದ ಒಂದು ವಾರ ಕಾಲ ಅಹೋರಾತ್ರಿ ಪ್ರತಿಭಟನಾ ಸಭೆಗೆ ಇಂದು ಚಾಲನೆ ದೊರಕಿದೆ.

ಸೆಪ್ಟೆಂಬರ್ 30 ರೊಳಗೆ ಆಸ್ಪತ್ರೆ ಕಾರ್ಯಚರಿಸುವ ಬಗ್ಗೆ ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಹಲವು ಬಾರಿ ಮನವಿ ಮಾಡಿದ್ದರೂ, ಪ್ರಯೋಜನವಾಗದ ಹಿನ್ನೆಲೆಯಲ್ಲಿ ಅಹೋರಾತ್ರಿ ಪ್ರತಿಭಟನಾ ಸಭೆಗೆ ಚಾಲನೆ ದೊರಕಿದೆ. ಒಂದು ವಾರದೊಳಗೆ ಸರಕಾರ ಯಾ ಸಂಬಂಧಪಟ್ಟ ಇಲಾಖೆಯಿಂದ ಯಾವುದೇ ಸಕಾರಾತ್ಮಕವಾಗಿ ಸ್ಪಂದನೆ ಬರದೇ ಇದ್ದ ಪಕ್ಷದಲ್ಲಿ ಇದೇ ಹೋರಾಟವನ್ನು ಅನಿರ್ದಿಷ್ಟಾವಧಿಗೆ ಮುಂದುವರೆಸುವ ಬಗ್ಗೆ ಯಾ ಮುಂದಿನ ದಿನಗಳಲ್ಲಿ ಬೇರೆ ರೀತಿಯ ಹೋರಾಟ ಕೈಗೊಳ್ಳುವ ಬಗ್ಗೆ ನಿರ್ಧಾರ ಕೈಗೊಳ್ಳಲಾಗುವುದು ಪ್ರವೀಣ್ ಶೆಟ್ಟಿ ಬಣದ ಕರ್ನಾಟಕ ರಕ್ಷಣಾ ವೇದಿಕೆ ಗೌರವಾಧ್ಯಕ್ಷರಾದ ಅನ್ಸರ್ ಅಹಮದ್ ತಿಳಿಸಿದ್ದಾರೆ.

ರಾಜ್ಯ ಸಂಚಾಲಕರಾದ ಪ್ರಸನ್ನ ಕುಮಾರ್ ಶೆಟ್ಟಿ ಅವರು ಗಂಟೆ ಬಾರಿಸುವ ಮೂಲಕ ಹೋರಾಟಕ್ಕೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಹಲವು ಪದಾಧಿಕಾರಿಗಳು ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now