
ಕಲ್ಯಾಣಪುರ: ಪ್ಲಾನೆಟ್ ಮಾರ್ಸ್ ಫೌಂಡೇಶನ್ (ರಿ.), ಕಲ್ಯಾಣಪುರ, ಉಡುಪಿ ಸಂಸ್ಥೆಯ ದಶಮಾನೋತ್ಸವ ಸಂಭ್ರಮಾಚರಣೆಯು ನವೆಂಬರ್ 11ರಂದು ಬುಧವಾರ ಸಂಜೆ ವಿಜೃಂಭಣೆಯಿಂದ ನಡೆಯಿತು.


ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸಂಸ್ಥೆಯ ಅಧ್ಯಕ್ಷರಾದ ಶ್ರೀ ಬಿ.ಕೆ. ನಾರಾಯಣ ಅವರು ವಹಿಸಿದ್ದರು. ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ಶ್ರೀಮತಿ ವೆರೋನಿಕಾ ಕರ್ನೇಲಿಯಾ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುಖ್ಯ ಅತಿಥಿಗಳಾಗಿ ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷರಾದ ಅಡ್ವೊಕೇಟ್ ಶ್ರೀಮತಿ ಜೂಹಿ ದಾಮೋದರ್, ಮಹಿಳಾ ಪೊಲೀಸ್ ಠಾಣೆಯ ಆರಕ್ಷಕ ನಿರೀಕ್ಷಕರಾದ ಶ್ರೀ ರಾಘವೇಂದ್ರ ಸಿ. ಜಿಲ್ಲಾ ಬಾಲ ನ್ಯಾಯ ಮಂಡಳಿಯ ಸದಸ್ಯರಾದ ಸಿಸ್ಟರ್ ಲಿಲ್ಲಿ ಪುಷ್ಪ ಹಾಗೂ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದೀಪ್ತಿ ಸಚಿನ್ ಸುವರ್ಣ ಉಪಸ್ಥಿತರಿದ್ದರು. ಸಭಾ ಕಾರ್ಯಕ್ರಮದಲ್ಲಿ ಸ್ವಾಗತ ಉಪಾಧ್ಯಕ್ಷರಾದ ಹರೀಶ್ ಕೋಟ್ಯಾನ್ ಮತ್ತು ವಂದನಾರ್ಪಣೆ ಕಾರ್ಯದರ್ಶಿಯಾದ ರೋಸ್ಲಿಂಗ್ ಕ್ರಾಸ್ತ ಇವರು ನೆರವೇರಿಸಿದರು

ಸಂಸ್ಥೆಯ ಹತ್ತು ವರ್ಷಗಳ ಸೇವಾ ಪಯಣ ಹಾಗೂ ಸಾಧನೆಗಳನ್ನು ಒಳಗೊಂಡ ಸ್ಮರಣ ಸಂಚಿಕೆಯನ್ನು ಅಡ್ವಕೇಟ್ ಜೂಹಿ ದಾಮೋದರ್ ಅವರೊಂದಿಗೆ ಗಣ್ಯರು ಬಿಡುಗಡೆಗೊಳಿಸಿದರು. ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ದೀಪ್ತಿ ಸಚಿನ್ ಸುವರ್ಣ ಅವರು ಪ್ರಾಸ್ತಾವಿಕವಾಗಿ ಮಾತನಾಡಿ, ಹೆಣ್ಣುಮಕ್ಕಳಿಗೆ ಆಶ್ರಯ, ಶಿಕ್ಷಣ ಮತ್ತು ಉತ್ತಮ ಭವಿಷ್ಯ ಒದಗಿಸುವ ನಿಟ್ಟಿನಲ್ಲಿ ಸಂಸ್ಥೆ ನಡೆದುಬಂದ ಹಾದಿಯನ್ನು ವಿವರಿಸಿದರು. ಅತಿಥಿಗಳು ಸಂಸ್ಥೆಯ ಸೇವಾ ಕಾರ್ಯಗಳನ್ನು ಶ್ಲಾಘಿಸಿ ಶುಭ ಹಾರೈಸಿದರು.

ವಿದ್ಯಾರ್ಥಿನಿಯರಾದ ಕಾವೇರಿ ಮತ್ತು ಮಂಗಲ್ ಅವರು ಸಂಸ್ಥೆಯಿಂದ ದೊರೆತ ಪ್ರೀತಿ, ಶಿಕ್ಷಣ ಹಾಗೂ ಪ್ರೋತ್ಸಾಹದ ಕುರಿತು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.
ಸಂಸ್ಥೆಯ ಸ್ಥಾಪಕರಾದ ರಕ್ಷಾ ಇವರ ಅಜ್ಜಿ ರಾಧಾ ಬಾಬು ಕೋಟ್ಯಾನ್ ಮತ್ತು ಸಂಸ್ಥೆಗೆ ವಿವಿಧ ರೀತಿಯಲ್ಲಿ ಸಹಕಾರ ನೀಡಿದ ಕರಾಟೆ ಶಿಕ್ಷಕ ರೋಹಿತ್, ಭರತನಾಟ್ಯ ಗುರು ವಿದ್ವಾನ್ ಭವಾನಿ ಶಂಕರ್, ಶ್ರೀ ವಿಜಯಕುಮಾರ್ ಸರಸ್ವತಿ ಆರ್ಟ್ಸ್ , ನಾಟಕ ತರಬೇತುದಾರ ಶ್ರೀ ಯೋಗೀಶ್ ಕೊಳಲಗಿರಿ ಹಾಗೂ ಬಂಜಾರಾ ನೃತ್ಯ ತರಬೇತುದಾರ ಡಾ. ಸದಾನಂದ ಕುಂದರ್ ಅವರನ್ನು ಗೌರವಿಸಲಾಯಿತು. ನಂತರ ವಿದ್ಯಾರ್ಥಿನಿಯರು ಹಾಗೂ ಹಳೆ ವಿದ್ಯಾರ್ಥಿನಿಯರಿಂದ ಭರತನಾಟ್ಯ, ಬಂಜಾರಾ ನೃತ್ಯ, ಗರ್ಭಾ ನೃತ್ಯ, ಗಾಯನ ಸೇರಿದಂತೆ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ‘ಈ ಬದುಕು’ ಎಂಬ ಕಿರು ನಾಟಕವು ವಿಶೇಷ ಆಕರ್ಷಣೆಯಾಗಿತ್ತು.

ಕಾರ್ಯಕ್ರಮದ ನಿರೂಪಣೆಯನ್ನು ಶ್ರೀ ಯೋಗೀಶ್ ಕೊಳಲಗಿರಿ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮದ ನಿರೂಪಣೆಯನ್ನು ವಿದ್ಯಾರ್ಥಿನಿಯರಾದ ಕಾವೇರಿ ಮತ್ತು ನಿಖಿತ ನಿರ್ವಹಿಸಿದರು. ಶ್ರೀ ಸುರೇಶ್ ಸುವರ್ಣ ಮತ್ತು ಶ್ರೀಮತಿ ಜಾಯ್ಸಿ ಲೂವಿಸ್ ಸನ್ಮಾನ ಕಾರ್ಯಕ್ರಮವನ್ನು ನಿರ್ವಹಿಸಿದರು ಸಂಸ್ಥೆಯ ಹಳೆ ವಿದ್ಯಾರ್ಥಿನಿ ಮೇರಿ ಅಂತೋನಿ ಸಾಂಸ್ಕೃತಿಕ ಕಾರ್ಯಕ್ರಮದ ಧನ್ಯವಾದ ನೆರವೇರಿಸಿದರು.

ಸಂಸ್ಥೆಯ ಪದಾಧಿಕಾರಿಗಳು, ಸಿಬ್ಬಂದಿ, ವಿದ್ಯಾರ್ಥಿನಿಯರು, ನೆರೆಹೊರೆಯವರು, ಹಿತೈಷಿಗಳು ಹಾಗೂ ಗಣ್ಯರ ಉಪಸ್ಥಿತಿಯಲ್ಲಿ ದಶಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now