
ಮಂಗಳೂರು ವಿಶ್ವವಿದ್ಯಾನಿಲಯ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ಉಡುಪಿ ಜಿಲ್ಲಾ ಪಂಚಾಯತ್,ಸರಕಾರಿ ಪ್ರಥಮ ದರ್ಜೆ ಕಾಲೇಜು ಮತ್ತು ಸ್ನಾತ್ತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಹಾಗೂ ಲಯನ್ಸ್ ಕ್ಲಬ್ ಅಮೃತ್ ಇವರ ಸಹಯೋಗದಲ್ಲಿ ಆಯೋಜಿಸಲಾದ ವಿಶೇಷ ಚೇತನ ವಿದ್ಯಾರ್ಥಿಗಳ ಅಥ್ಲೆಟಿಕ್ ಕ್ರೀಡಾಕೂಟವು ಉಡುಪಿಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಶ್ರೀಯುತ Ln. ಹರಿಪ್ರಸಾದ್ ರೈ ಅವರು ದೀಪ ಪ್ರಜ್ವಲಿಸುವ ಮೂಲಕ ಶುಭಾರಂಭ ನೀಡಿದರು.

ಈ ಉದ್ಘಾಟನಾ ಸಮಾರಂಭದಲ್ಲಿ ತೆಂಕನಿಡಿಯೂರು ಕಾಲೇಜಿನ ಪ್ರಾಂಶುಪಾಲರಾದ ಶ್ರೀ ನಿತ್ಯಾನಂದ ವಿ. ಗಾವನ್ಕರ್, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ-ಶಿಕ್ಷಕೇತರ ಸಂಘದ ಕಾರ್ಯಾಧ್ಯಕ್ಷರಾದ ಡಾ. ಕಾಂತಿ ಹರೀಶ್, ಗೌರವಾಧ್ಯಕ್ಷರಾದ ಶ್ರೀಮತಿ ಆಗ್ನೆಸ್ ಕುಂದರ್, ಜಿಲ್ಲಾ ಸಂಘದ ಅಧ್ಯಕ್ಷರಾದ ಶ್ರೀ ರವೀಂದ್ರ ಎಚ್ ಕಾರ್ಯದರ್ಶಿ ಶಶಿಕಲಾ ಕೋಟ್ಯಾನ್ ಹಾಗೂ ವಿಶೇಷ ಮಕ್ಕಳ ಪಾಲಕರ ಸಂಘದ ಅಧ್ಯಕ್ಷರಾದ ಶ್ರೀ ಜೈ ವಿಠ್ಠಲ್ ಹಾಗೂ ಇತರರು ಉಪಸ್ಥಿತರಿದ್ದು, ಕಾರ್ಯಕ್ರಮಕ್ಕೆ ಮೆರುಗು ತಂದರು

ಉಡುಪಿ ಜಿಲ್ಲೆಯ 16 ವಿಶೇಷ ಶಾಲೆಗಳ ವಿದ್ಯಾರ್ಥಿಗಳು ಆಕರ್ಷಕ ಪಥಸಂಚಲನದಲ್ಲಿ ಭಾಗವಹಿಸುವ ಮೂಲಕ ಕ್ರೀಡಾಕೂಟಕ್ಕೆ ಅದ್ಭುತ ಚಾಲನೆ ನೀಡಿದರು. ಪಥಸಂಚಲನದಲ್ಲಿ ವಿಜೇತ ವಿಶೇಷ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ, ಮಾನಸ ಸ್ಪೆಷಲ್ ಸ್ಕೂಲ್ ದ್ವಿತೀಯ ಸ್ಥಾನ, ಕಾರುಣ್ಯ ಸ್ಪೆಷಲ್ ಸ್ಕೂಲ್ ತೃತೀಯ ಸ್ಥಾನ ಗಳಿಸಿ ಶಾಲೆಯ ಕೀರ್ತಿಯನ್ನು ಹೆಚ್ಚಿಸಿದರು.

ಸಮಾರೋಪ ಸಮಾರಂಭದಲ್ಲಿ ತೆಂಕನಿಡಿಯೂರ್ ಕಾಲೇಜಿನ ಪ್ರಾoಶುಪಾಲರಾದ ನಿತ್ಯಾನಂದ ವಿ ಗಾವಂಕರ್, ಕ್ರೀಡಾ ನಿರ್ದೇಶಕರಾದ ಶ್ರೀ ರೋಷನ್ ಶೆಟ್ಟಿ, ಪ್ರೊಫೆಸರ್ ಶ್ವೇತಾ, ಉಡುಪಿ ಜಿಲ್ಲಾ ಪಾಲಕರ ಸಂಘದ ಅಧ್ಯಕ್ಷರಾದ ಶ್ರೀ ಜೈ ವಿಠ್ಠಲ್, ಕರ್ನಾಟಕ ರಾಜ್ಯ ವಿಶೇಷ ಶಿಕ್ಷಕ-ಶಿಕ್ಷಕೇತರ ಸಂಘದ ಗೌರವಾಧ್ಯಕ್ಷರಾದ ಶ್ರೀಮತಿ ಆಗ್ನೆಸ್ ಕುಂದರ್, ಕಾರ್ಯಾಧ್ಯಕ್ಷರಾದ ಡಾ. ಕಾಂತಿ ಹರೀಶ್, ವಿಶೇಷ ಶಿಕ್ಷಕರ ಸಂಘದ ಉಡುಪಿ ಜಿಲ್ಲಾ ಅಧ್ಯಕ್ಷರಾದ ಶ್ರೀ ರವೀಂದ್ರ ಎಚ್. ಹಾಗೂ ಕಾರ್ಯದರ್ಶಿಗಳಾದ ಶ್ರೀಮತಿ ಶಶಿಕಲಾ ಕೋಟ್ಯಾನ್ ಉಪಸ್ಥಿತರಿದ್ದರು.

ವಿಜೇತ ವಿಶೇಷ ಶಾಲೆಯಿಂದ ಒಟ್ಟು 45 ವಿದ್ಯಾರ್ಥಿಗಳು ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಉತ್ಸಾಹದಿಂದ ಭಾಗವಹಿಸಿ 22 ಚಿನ್ನದ ಪದಕಗಳು, 17 ಬೆಳ್ಳಿಯ ಪದಕಗಳು ಹಾಗೂ 20 ಕಂಚಿನ ಪದಕಗಳನ್ನು ಗಳಿಸುವ ಮೂಲಕ ವಿಜೇತ ವಿಶೇಷ ಶಾಲೆಯು ಸಮಗ್ರ ಚಾಂಪಿಯನ್ಶಿಪ್ ಪ್ರಶಸ್ತಿಯನ್ನು ಮುಡಿಗೇರಿಸಿ ಕೊಂಡಿದೆ. ಆಶಾನಿಲಯ ವಿಶೇಷ ಶಾಲೆ ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.
ಚಾಂಪಿಯನ್ಶಿಪ್ ಕೇವಲ ಒಂದು ಪ್ರಶಸ್ತಿಯಲ್ಲ; ಇದು ಮಕ್ಕಳ ಕನಸು, ಪರಿಶ್ರಮ, ಶಿಕ್ಷಕರ ಸಮರ್ಪಣೆ, ತರಬೇತುದಾರರ ಮಾರ್ಗದರ್ಶನ ಹಾಗೂ ಪೋಷಕರ ಪ್ರೋತ್ಸಾಹಕ್ಕೆ ಸಂದ ಗೌರವವಾಗಿದೆ. ಮಕ್ಕಳ ಈ ಸಾಧನೆಯ ಪಯಣ ಹೀಗೆಯೇ ಮುಂದುವರಿಯಲಿ. ಅವರ ಕನಸುಗಳು ನನಸಾಗಲಿ, ಸಾಧನೆಯ ಶಿಖರಗಳು ಇನ್ನಷ್ಟು ಎತ್ತರಕ್ಕೇರಲಿ ಎಂಬ ಹಾರೈಕೆ.
ಪ್ರತೀ ವರ್ಷ ಈ ವಿಶೇಷ ಮಕ್ಕಳ ಕ್ರೀಡಾ ಕೂಟಕ್ಕೆ ಅವಕಾಶ ಕಲ್ಪಿಸುತ್ತಿರುವ ಡಾ ರೋಷನ್ ಶೆಟ್ಟಿ ಮತ್ತು ತಂಡಕ್ಕೆ ತುಂಬು ಹೃದಯದ ಕೃತಜ್ಞತೆಗಳು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now