
ಕುಮಟಾ : ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯದಲ್ಲಿ ಪತ್ರಾಂಕಿತ ವ್ಯವಸ್ಥಾಪಕರಾಗಿ ಸೇವೆಯನ್ನು ಸಲ್ಲಿಸಿ ತಮ್ಮ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯ ನಿಪ್ಪಾಣಿಯ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ವರ್ಗಾವಣೆಗೊಂಡು ಬಿಡುಗಡೆಯನ್ನು ಹೊಂದಿರುವ ದೇವದಾಸ ಈರಪ್ಪ ಜಾದವರವರ ಅವಸ್ಮರಣೀಯ ಸೇವೆಯನ್ನು ನೆನೆದು ಅವರಿಗೆ “ಭಾವನಿಧಿ” ಎಂಬ ಉಪಾದಿಯೊಂದಿಗೆ ಕರ್ನಾಟಕ ರಾಜ್ಯ ಬೋಧಕರ ಸಂಘದಿಂದ ಆಪ್ತವಾಗಿ ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕುಮಟಾದ ಕ್ಷೇತ್ರ ಶಿಕ್ಷಣಾಧಿಕಾರಿಗಳಾದ ಉದಯ ನಾಯ್ಕ, ಪ್ರಭಾರ ವ್ಯವಸ್ಥಾಪಕರಾದ ಪ್ರಕಾಶ ಕಬೀರದಾಸ ರಾಠೋಡ್, ಅಧೀಕ್ಷಕರಾದ ರಾಘವೇಂದ್ರ ನಾಯ್ಕ, ಕರ್ನಾಟಕ ರಾಜ್ಯ ಬೋಧಕರ ಸಂಘದ ರಾಜ್ಯಾಧ್ಯಕ್ಷರಾದ ಮಂಜುನಾಥ ಗಾಂವಕರ್ ಬರ್ಗಿ, ಸಂಚಾಲಕರಾದ ವಿಜಯಕುಮಾರ್, ಕೋಶಾಧ್ಯಕ್ಷರಾದ ಶಿವಚಂದ್ರ, ಜಯಂತ ಹಾಗೂ ಕಿರಣ್ ಶೂರ್ ಮೊದಲಾದವರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now