ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ : ನವೆಂಬರ್ 14ರಂದು ಪೆರಂಪಳ್ಳಿ ಶಾಖೆ ಉದ್ಘಾಟನೆ

ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ : ನವೆಂಬರ್ 14ರಂದು ಪೆರಂಪಳ್ಳಿ ಶಾಖೆ ಉದ್ಘಾಟನೆ
0Shares

ಪೆರಂಪಳ್ಳಿ: ಉಡುಪಿಯ ಕುಂಜಿಬೆಟ್ಟುವಿನಲ್ಲಿ ಪ್ರಧಾನ ಶಾಖೆ ಹೊಂದಿರುವ ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ. ಆಪರೇಟಿವ್ ಸೊಸೈಟಿ ಇದರ ತೃತೀಯ ಶಾಖೆಯು, ನವೆಂಬರ್ 14ರಂದು ಪೆರಂಪಳ್ಳಿಯ ಅಕ್ಕಯ್ಯ ಟವರ್ ನ ನೆಲ ಮಹಡಿಯಲ್ಲಿ ಉದ್ಘಾಟನೆಗೊಳ್ಳಲಿದೆ.

ಉಡುಪಿ ಶಾಸಕ ಯಶಪಲ್ ಸುವರ್ಣ ನೂತನ ಶಾಖೆಯನ್ನು ಉದ್ಘಾಟಿಸಲಿದ್ದು, ತೊಟ್ಟಂ ಸಂತ ಅನ್ನಮ್ಮ ರವರ ದೇವಾಲಯದ ಧರ್ಮಗುರು ವO. ಫಾ. ಹೆನ್ರಿ ಮಸ್ಕರೇನಸ್, ಕೊಳಲಗಿರಿ ಸೆಕ್ರೆಟ್ ಹಾರ್ಟ್ ಚರ್ಚ್ ಧರ್ಮ ಗುರು ವಂ. ಫಾ. ಜೋಸೆಫ್ ಮಚಾದೊ ಮತ್ತು ಟ್ರಿನಿಟಿ ಸೆಂಟ್ರಲ್ ಸ್ಕೂಲ್ ಪೆರಂಪಳ್ಳಿ ಇಲ್ಲಿಯ ಪ್ರಾಂಶುಪಾಲರಾದ ವO. ಫಾ. ಡೊಮಿನಿಕ್ ಸುನಿಲ್ ಲೋಬೊ ಆಶೀರ್ವಚನ ನೆರವೇರಿಸಲಿದ್ದಾರೆ. ಮಾಜಿ ಶಾಸಕ ಕೆ ರಘುಪತಿ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ನಟ ಮತ್ತು ದಾಯ್ಜಿ ವರ್ಲ್ಡ್ ಮಾಧ್ಯಮದ ಪ್ರವರ್ತಕ ವಾಲ್ಟರ್ ನಂದಳಿಕೆ, HPR ವಿದ್ಯಾ ಸಂಸ್ಥೆಗಳ ಚೇರ್ಮನ್ ಹರಿಪ್ರಸಾದ್ ರೈ, ಫೆರ್ನಾಂಡಿಸ್ ಗ್ರೂಪ್ ನ ಪ್ರವರ್ತಕ ವಿಲ್ಸನ್ ಫೆರ್ನಾಂಡಿಸ್, ಕ್ರಿಶ್ಚಿಯನ್ ಯುನಿಟಿ (ರಿ) ಪೆರಂಪಳ್ಳಿಯ ಅಧ್ಯಕ್ಷ ವಿನ್ಸೆಂಟ್ ಡಿಸೋಜಾ, ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿ ಅಧ್ಯಕ್ಷೆ ಜೆಸಿಂತಾ ಡಿಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ ಎಂದು ಸೊಸೈಟಿಯ ಸ್ಥಾಪಕ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಜೀವನ್ ಡಿಸೋಜಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಗ್ರಾಹಕರ ವಿಶ್ವಾಸವನ್ನು ಗಳಿಸಿರುವ ಈ ಸೊಸೈಟಿಯು ಆರಂಭವಾಗಿ ಕೇವಲ ಮೂರು ವರ್ಷಗಳಾಗಿದ್ದು, ಪ್ರಗತಿಪತದಲ್ಲಿದೆ. ನಿರ್ದೇಶಕ ಮಂಡಳಿಯ ಮಾರ್ಗದರ್ಶನ ಮತ್ತು ಸಿಬ್ಬಂದಿಗಳ ಅವಿರತ ಪ್ರಯತ್ನದಿಂದ ಹಾಗೂ ವಿಶೇಷವಾಗಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯ ಸಹಕಾರಿ ಅನುಭವ ಗ್ರಾಹಕರ ಮೆಚ್ಚುಗೆಗೆ ಪಾತ್ರವಾಗಿದೆ. ಉತ್ತಮ ಅಲ್ಪಾವಧಿ ಠೇವಣಿ ಯೋಜನೆಗಳು ಮತ್ತು ವಿವಿಧ ಸಾಲ ಸೌಲಭ್ಯಗಳು ಇಲ್ಲಿ ಲಭ್ಯವಿದೆ ಎಂದು ಪ್ರಕಟಣೆ ತಿಳಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now