ಅಕ್ಟೋಬರ್ 11ರಿಂದ 20ರ ವರೆಗೆ KSRTCಯಿಂದ ಪ್ಯಾಕೇಜ್ ಪ್ರವಾಸ

ಅಕ್ಟೋಬರ್ 11ರಿಂದ 20ರ ವರೆಗೆ KSRTCಯಿಂದ ಪ್ಯಾಕೇಜ್ ಪ್ರವಾಸ
0Shares

ಉಡುಪಿ: ಕ.ರಾ.ರ.ಸಾ.ನಿಗಮ ಮಂಗಳೂರು ವಿಭಾಗವು ದಸರಾ ಪ್ರಯುಕ್ತ ಉಡುಪಿ ಘಟಕದಿಂದ ಸುತ್ತಮುತ್ತಲಿನ ದೇವಸ್ಥಾನಗಳ ದರ್ಶನಕ್ಕೆ ಹಾಗೂ ಪ್ರೇಕ್ಷಣೀಯ ಸ್ಥಳಗಳಿಗೆ ವಿಶೇಷ ಪ್ಯಾಕೇಜ್ ಪ್ರವಾಸವನ್ನು ಆಯೋಜಿಸಿದ್ದು, ಇದು ಅಕ್ಟೋಬರ್ 11ರಿಂದ 20ರವರೆಗೆ ಕಾರ್ಯಾಚರಿಸಲಿದೆ.

ಪ್ಯಾಕೇಜ್ ಪ್ರವಾಸದ ಮಾರ್ಗ, ವೇಳೆ, ಪ್ರಯಾಣ ದರದ ವಿವರ: ಪ್ಯಾಕೇಜ್ ಪ್ರವಾಸದ ಮಾರ್ಗದ ಬಸ್‌ಗಳು ಬೆಳಗ್ಗೆ 7:30ಕ್ಕೆ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಹೊರಟು ಕೊಡ್ಯಡ್ಕ ಶ್ರೀಅನ್ನಪೂರ್ಣೇಶ್ವರಿ ದೇವಸ್ಥಾನ- ಶೃಂಗೇರಿ ಶ್ರೀಶಾರದಾಂಬ ದೇವಸ್ಥಾನ, ವಯಾ ಎಸ್.ಕೆ. ಬಾರ್ಡರ್, ಋಷ್ಯಶೃಂಗೇಶ್ವರ ದೇವಸ್ಥಾನ ಕಿಗ್ಗ ಕ್ಷೇತ್ರ- ಹರಿಹರಪುರ ಮಠ – ಪೆರ್ಡೂರು ಶ್ರೀ ಅನಂತ ಪದ್ಮನಾಭ ದೇವಸ್ಥಾನಕ್ಕೆ ಭೇಟಿ ನೀಡಿ ರಾತ್ರಿ 8 ಗಂಟೆಗೆ ಉಡುಪಿ ನಗರ ಸಾರಿಗೆ ಬಸ್ಸು ನಿಲ್ದಾಣ ತಲುಪಲಿದೆ. ಪ್ಯಾಕೇಜ್ ಪ್ರವಾಸದ ಮತ್ತೊಂದು ಮಾರ್ಗದ ಬಸ್‌ಗಳು ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣದಿಂದ ಬೆಳಗ್ಗೆ 7:30ಕ್ಕೆ ಹೊರಟು ನೀಲಾವರ ಶ್ರೀ ಮಷಮರ್ಧಿನಿ ದೇವಸ್ಥಾನ, ಮಂದಾರ್ತಿ ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಕಮಲಶಿಲೆ ಶ್ರೀಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನ, ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನ, ಕೊಲ್ಲೂರು ಶ್ರೀಮುಕಾಂಬಿಕಾ ದೇವಸ್ಥಾನ ಹಾಗೂ ಮಾರಣಕಟ್ಟೆ ಶ್ರೀಬ್ರಹ್ಮಲಿಂಗೇಶ್ವರ ದೇವಸ್ಥಾನವನ್ನು ಸಂದರ್ಶಿಸಿ ಉಡುಪಿ ನಗರ ಸಾರಿಗೆ ಬಸ್ ನಿಲ್ದಾಣಕ್ಕೆ ಸಂಜೆ 6:30ಕ್ಕೆ ಮರಳಲಿದೆ. ಎರಡು ಮಾರ್ಗಗಳ ಪ್ಯಾಕೇಜ್ ಪ್ರವಾಸಕ್ಕೆ ವಯಸ್ಕರಿಗೆ ರೂ.500 ಹಾಗೂ ಮಕ್ಕಳಿಗೆ (6 ವರ್ಷದಿಂದ 12 ವರ್ಷದವರಿಗೆ) ರೂ.400 ದರ ನಿಗದಿಪಡಿಸಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ಉಡುಪಿ ಘಟಕ ವ್ಯವಸ್ಥಾಪಕರು ದೂ.ಸಂಖ್ಯೆ: 7760995407, ಉಡುಪಿ ಘಟಕ- ದೂ.ಸಂಖ್ಯೆ: 7760994451, ಉಡುಪಿ ಮುಂಗಡ ಬುಕ್ಕಿಂಗ್ ಕೌಂಟರ್ ದೂ.ಸಂಖ್ಯೆ: 9663266400 ಹಾಗೂ ಸದರಿ ಪ್ಯಾಕೇಜ್ ಪ್ರವಾಸಕ್ಕೆ ಮುಂಗಡ ಆಸನ ಕಾಯ್ದಿರಿಸಲು ವ್ಯವಸ್ಥೆ ಮಾಡಲಾಗಿದ್ದು, ಸದರಿ ಸಾರಿಗೆಗಳ ಸದುಪ ಯೋಗವನ್ನು ಸಾರ್ವಜನಿಕರು ಪಡೆದುಕೊಳ್ಳಬಹುದು ಎಂದು ಮಂಗಳೂರು ಕ.ರಾ.ರ.ಸಾ.ನಿಗಮದ ಹಿರಿಯ ವಿಭಾಗೀಯ ನಿಯಂತ್ರಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now