
ಕ್ರೀಡೆಯಿಂದ ಸಾಮರಸ್ಯದ ಬದುಕು, ಸಹಬಾಳ್ವೆ: ಡಾ.ಎಂ.ಮೋಹನ್ ಆಳ್ವ
ಕೊಣಾಜೆ: ಕ್ರೀಡೆಯಲ್ಲಿ ತೊಡಗಿಸಿಕೊಂಡವರಿಗೆ ದೈಹಿಕ ಆರೋಗ್ಯ ಸೇರಿದಂತೆ ಎಲ್ಲಾ ಕ್ಷೇತ್ರದಲ್ಲಿಯೂ ಆಶಾವಾದಿಗಳಾಗಿ ಮುನ್ನಡೆಯಲು ಕ್ರೀಡೆ ಸಹಕಾರಿ. ಕ್ರೀಡೆಯಿಂದ ಸಾಮರಸ್ಯದ ಬದುಕು, ಸಹಬಾಳ್ವೆ, ನೆಮ್ಮದಿ ಯನ್ನು ಬೆಳೆಸಲು ಸಾಧ್ಯ. ನಾವು ಇಂದು ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡುತ್ತಿದ್ದೇವೆ. ಆದರೆ ಕ್ರೀಡಾ ಕ್ಷೇತ್ರದ ಇತಿಹಾಸವನ್ನು ಗಮನಿಸಿದರೆ ಸಾಧನೆ ಹಾದಿಯಲ್ಲಿ ಅಂತರ, ಕಂದಕಗಳು ಕಾಣುತ್ತಿರುವುದು ವಿಪರ್ಯಾಸ. ಸುಮಾರು 52 ಕೋಟಿಯಷ್ಡು ಜನರು 25 ವರ್ಷದೊಳಗಿನವರೇ ಇರುವ ನಮ್ಮ ದೇಶದಲ್ಲಿ ಕ್ರೀಡಾಪಟುಗಳು ಪೂವಮ್ಮ ರಂತೆಯೇ ಛಲ, ಪರಿಶ್ರಮದೊಂದಿಗೆ ಮುನ್ನಡೆದರೆ ಭಾರತವು ಕೂಡಾ ಕ್ರೀಡಾ ಕ್ಷೇತ್ರದಲ್ಲಿ ಅಪಾರ ಯಶಸ್ಸು ಗಳಿಸಲು ಸಾಧ್ಯ ಎಂದು
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷರಾದ ಡಾ.ಎಂ.ಮೋಹನ್ ಆಳ್ವ ಅವರು ಹೇಳಿದರು.
ಅವರು ಮಂಗಳೂರು ವಿಶ್ವವಿದ್ಯಾನಿಲಯದ ವಾರ್ಷಿಕ ಕ್ರೀಡಾ ಸನ್ಮಾನ ಕಾರ್ಯಕ್ರಮ “ದರ್ಪಣ -2026” ಕಾರ್ಯಕ್ರಮವನ್ನು ಮಂಗಳೂರು ವಿವಿಯ ಮಂಗಳ ಸಭಾಂಗಣದಲ್ಲಿ ಶನಿವಾರ ಉದ್ಘಾಟಿಸಿ ಅವರು ಮಾತನಾಡಿದರು.
ಕಳೆದ 23 ವರ್ಷಗಳಿಂದ ನಿರಂತರ ಛಲ, ಪರಿಶ್ರಮದಿಂದ ಮುನ್ನಡೆಯುತ್ತಿರುವ ಪೂವಮ್ಮ ಹಾಗೂ ಕಳೆದ ಹದಿನೈದು ವರ್ಷದಿಂದ ಕಬ್ಬಡ್ಡಿ ಕ್ಷೇತ್ರದದಲ್ಲಿ ಸಾಧನೆ ಮಾಡುತ್ತಿರುವ ಧನಲಕ್ಷ್ಮೀ ಅವರು ವಿದ್ಯಾರ್ಥಿಗಳಿಗೆ ಸ್ಪೂರ್ತಿಯಾಗಿದ್ದಾರೆ ಎಂದರು.
ಮಂಗಳೂರು ವಿವಿಯು 47 ವರ್ಷದಿಂದ ಅನೇಕ ಕ್ರೀಡಾಪಟುಗಳೊಂದಿಗೆ ಅನೇಕ ಸಾಧಕರನ್ನು ದೇಶಕ್ಕೆ ಕೊಟ್ಟಿದೆ. ವಿವಿಯ 50 ನೇ ಸಂಭ್ರಮ ವನ್ನು ಎಲ್ಲರೂ ಜೊತೆಯಾಗಿ ಆಚರಿಸೋಣ. ಇಂದಿನ ಸ್ಪರ್ದಾತ್ಮಕ ಕಾಲಘಟ್ಟದಲ್ಲಿ ವಿವಿಗಳಿಗೆ ಅನೇಕ ಸವಾಲುಗಳಿವೆ. ಕಾಲಕ್ಕೆ ತಕ್ಕಂತೆ ಬದಲಾವಣೆಯೊಂದಿಗೆ ಜಾಗತಿಕ ಮಟ್ಟದಲ್ಲಿ ಬೆಳೆದು ನಿಂತಿರುವ ವಿವಿಯು ಇನ್ನಷ್ಟು ಸಾಧನೆ ಮಾಡುವಂತಾಗಲಿ ಎಂದರು.
ಈ ಸಂದರ್ಭದಲ್ಲಿ ಅಂತರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾದ ಎಂ.ಆರ್ . ಪೂವಮ್ಮ, ಧನಲಕ್ಷ್ಮೀ ಅವರನ್ನು ಗೌರವಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಎಂ.ಆರ್ ಪೂವಮ್ಮ ನನಗೆ ಮಾತ್ರವಲ್ಲದೆ ಎಲ್ಲಾ ಕ್ರಿಡಾಪಟುಗಳಿಗೆ ಡಾ.ಎಂ.ಮೋಹನ್ ಆಳ್ವ ಸ್ಪೂರ್ತಿಯಾಗಿದ್ದಾರೆ. ನನ್ನ 23 ವರ್ಷದ ಕ್ರೀಡಾ ಪಯಣದಲ್ಲಿ ಅವರ ಸಹಕಾರವನ್ನು ಮರೆಯಲು ಸಾಧ್ಯವಿಲ್ಲ. ಒಲಂಪಿಕ್ಸ್ ನಲ್ಲೂ ಪದಕ ಗಳಿಸಬೇಕೆನ್ನುವ ಆಸೆಯಿದೆ ಎಂದರು.
ಧನಲಕ್ಷ್ಮೀ ಅವರು ಮಾತನಾಡಿ, ಕ್ರೀಡಾ ಕ್ಷೇತ್ರದಲ್ಲಿ15 ನೇ ವರ್ಷದ ಪಯಣ. ಆಳ್ವಾಸ್ ಸಂಸ್ಥೆಯನ್ನು ನಾನು ಆಯ್ಕೆ ಮಾಡದಿದ್ದರೆ ನಾನು ಕ್ರೀಡಾಪಟುವಾಗಿ,ಇದೀಗ ಉದ್ಯೋಗಕ್ಕೂ ಆಯ್ಕೆಯಾಗಲು ಸಾಧ್ಯವಿರಲಿಲ್ಲ. ಕ್ರೀಡಾ ಕ್ಷೇತ್ರದಲ್ಲಿ ಇನ್ನಷ್ಟು ಸಾಧನೆ ಮಾಡಬೇಕೆಂದಿದ್ದೇನೆ ಎಂದರು.
ಸಮಾರಂಭದ ಅಧ್ಯಕ್ಷತೆಯನ್ನು ಪ್ರೊ.ಪಿ.ಎಲ್.ಧರ್ಮ ಅವರನ್ನು ವಹಿಸಿ ಮಾತನಾಡಿ, 2027-28 ನೇ ವರ್ಷವನ್ನು ವರ್ಷವಿಡಿ ವಿವಿಧ ಕ್ರೀಡಾಕೂಟಗಳನ್ನು, ವಿವಿಧ ಸಾಂಸ್ಕೃತಿಕ ಚಟುವಟಿಕೆಗಳ ಕಾರ್ಯಕ್ರಮಗಳನ್ನು ಏರ್ಪಡಿಸಲು ಮಂಗಳೂರು ವಿವಿ ತೀರ್ಮಾನಿಸಿದೆ ಎಂದರು.
ಕ್ರೀಡೆ ಜಾತಿ ಧರ್ಮ ಮೀರಿ ನಿಂತಿದೆ.ಕಳೆದ ಹಲವಾರು ವರ್ಷಗಳಿಂದ ನಿಂತುಹೋಗಿದ್ದ ದರ್ಪಣ ಕಾರ್ಯಕ್ರಮವನ್ನು ಇದೀಗ ಮತ್ತೊಮ್ಮೆ ಆರಂಭಿಸಿ ಕ್ರೀಡಾ ಚಟುವಟಿಕೆಗಳಿಗೆ ವಿವಿಯು ನಿರಂತರ ಪ್ರೋತ್ಸಾಹ ನೀಡಲಿದೆ ಎಂದರು.
ಅಖಿಲ ಭಾರತ ಅಂತರ್ ವಿವಿ ಹಾಗೂ ವಿಶ್ವವಿದ್ಯಾನಿಲಯ ಮಟ್ಟದ ಕ್ರೀಡಾಕೂಟದಲ್ಲಿ ಸಾಧನೆ ಮಾಡಿದ ಕ್ರೀಡಾ ಸಾಧಕರನ್ನು ಗೌರವಿಸಲಾಯಿತು. ಹಾಗೂ ಪ್ರಶಸ್ತಿ ಗಳಿಸಿದ ಕಾಲೇಜುಗಳನ್ನು ಗೌರವಿಸಲಾಯಿತು.
ಮಂಗಳೂರು ವಿವಿ ಕುಲಸಚಿವ ಸಂತೋಷ್ ಬಿ ಜಗಲಸಾರ್ ಅವರು ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ಮಂಗಳೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಅಧ್ಯಕ್ಷರಾದ ಡಾ.ಜೆರಾಲ್ಡ್ ಸಂತೋಷ್ ಡಿ.ಸೋಜಾ ಅವರು ವಂದಿಸಿದರು.
ದೈಹಿಕ ಶಿಕ್ಷಣ ನಿರ್ದೇಶಕರಾದ ಡಾ.ಪ್ರವೀಣ್ , ಕಾವ್ಯ ಜಿ.ಕೆ ಅವರು ಅವರು ಕಾರ್ಯಕ್ರಮ ನಿರೂಪಿಸಿದರು.
ಜಾನಪದ ಕ್ರೀಡೆ ಕಂಬಳವನ್ನು ಕರಾವಳಿಯ ಜನರು ಇಂದಿಗೂ ವಿಜ್ರಂಭಣೆಯಿಂದ ಆಚರಿಸಿ ಅಂತರಾಷ್ಟ್ರೀಯ ಮಟ್ಟದಲ್ಲಿ ಮಿಂಚುವಂತೆ ಮಾಡಿದ್ದಾರೆ. ಹಾಗೆಯೇ ಕರಾವಳಿಯ ಯುವ ಸಮುದಾಯ ಮುಂದೆ ಕ್ರೀಡಾ ಕ್ಷೇತ್ರದಲ್ಲಿ ಸಾಧನೆ ಮಾಡುವ ಮೂಲಕ ಜಗತ್ತಿನಲ್ಲಿ ಮಿಂಚಲಿದ್ದಾರೆ.
ಡಾ.ಎಂ.ಮೋಹನ್ ಆಳ್ವ
ಮಂಗಳೂರು ವಿವಿಯಲ್ಲಿ ನಾರಾಯಣ ಗುರು-ಗಾಂಧಿ ಸಂವಾದ ಶತಮಾನೊತ್ಸವ ಮೈದಾನದಲ್ಲಿ ಸುಸಜ್ಜಿತ ಕ್ರಿಕೆಟ್ ಮೈದಾನ, ವಿವಿಯ ಒಳಾಂಗಣ ಕ್ರೀಡಾಂಗಣದಲ್ಲಿ ಹೊಸ ವಿನ್ಯಾಸದ ಬ್ಯಾಡ್ಮಿಂಟನ್ ಮೈದಾನ, ಪವರ್ ಲಿಪ್ಟಿಂಗ್ ಸೌಲಭ್ಯವನ್ನು ಇದೇ ಸಂದರ್ಭದಲ್ಲಿ ಡಾ.ಎಂ.ಮೋಹನ್ ಆಳ್ವ ಉದ್ಘಾಟಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now