
ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌ.ಕೋ-ಆ.ಸೊಸೈಟಿಯ 3ನೇ ಶಾಖೆ ಪೆರಂಪಳ್ಳಿಯಲ್ಲಿ ಉದ್ಘಾಟನೆ
ಉಡುಪಿ, ನ.14: ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್‌ನ 3ನೇ ಶಾಖೆ ಅಂಬಾಗಿಲು- ಪೆರಂಪಳ್ಳಿಯ ಮುಖ್ಯ ರಸ್ತೆಯ ಅಕ್ಕಯ್ಯ ಟವರ್‌ನ ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಶನಿವಾರ ಉದ್ಘಾಟಿಸಿದರು.

ಬಳಿಕ ಮಾತನಾಡಿದ ಅವರು, ಪ್ರಾಮಾಣಿಕವಾಗಿ ಒಂದು ಕುಟುಂಬ ರೀತಿಯಲ್ಲಿ ಗ್ರಾಹಕರಿಗೆ ಸೇವೆ ನೀಡಿದಲ್ಲಿ ಸಹಕಾರ ಸಂಸ್ಥೆ ಯಶಸ್ವಿಯಾಗಿ ಮುನ್ನಡೆಯುತ್ತದೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಿದ ಪರಿಣಾಮ ಈ ಸಂಸ್ಥೆಯ ಮೇಲೆ ನಂಬಿಕೆ ಇಟ್ಟು ಠೇವಣಿದಾರರು ಸೊಸೈಟಿಯನ್ನು ಬೆಳೆಸಿದ್ದಾರೆ. ಅತೀ ಅಲ್ಪ ಅವಧಿಯಲ್ಲಿ ರೂ.20ಕೋಟಿ ದುಡಿಯುವ ಬಂಡವಾಳದೊಂದಿಗೆ 20ಲಕ್ಷ ರೂ. ಲಾಭವನ್ನು ಗಳಿಸುವುದರ ಹಿಂದೆ ಸಿಬ್ಬಂದಿಗಳ ಹಾಗೂ ಆಡಳಿತ ಮಂಡಳಿಯ ಕಠಿಣ ಪರಿಶ್ರಮ ಇದೆ ಎಂದರು. ಸಹಕಾರಿ ತತ್ವದಡಿ ಇನ್ನಷ್ಟು ಸೇವೆಗಳನ್ನು ನೀಡಿ ಗ್ರಾಹಕ ಸ್ನೇಹಿಯಾದ ಸೊಸೈಟಿ ಆಗಿ ಮೂಡಿಬರಲಿ ಎಂದು ಶುಭಹಾರೈಸಿದರು.

ಪೆರಂಪಳ್ಳಿ ಟ್ರಿನಿಟಿ ಸೆಂಟ್ರಲ್ ಸ್ಕೂಲ್‌ನ ಪ್ರಾಂಶುಪಾಲ ರೆ| ಫಾ| ಡೊಮಿನಿಕ್ ಸುನಿಲ್ ಲೋಬೋ, ತೊಟ್ಟಂ ಸೈಂಟ್ ಆ್ಯನ್ಸ್ ಚರ್ಚ್‌ನ ಧರ್ಮಗುರು ರೆ| ಫಾ| ಹೆನ್ರಿ ಮಸ್ಕರೆನ್ಹಾಸ್, ಕೊಳಲಗಿರಿ ಸೇಕ್ರೆಡ್ ಹಾರ್ಟ್ ಚರ್ಚ್‌ನ ಧರ್ಮಗುರು ರೆ|ಫಾ| ಜೋಸೆಫ್ ಮಚಡೋ ಅವರು ನೂತನ ಶಾಖೆಗೆ ಆಶಿರ್ವದಿಸಿದರು.

ಮಾಜಿ ಶಾಸಕ ರಘುಪತಿ ಭಟ್, ಮಣಿಪಾಲ ಎಚ್‌ಪಿಆರ್ ಸಮೂಹ ಸಂಸ್ಥೆಗಳ ಅಧ್ಯಕ್ಷ ಹರಿಪ್ರಸಾದ್ ರೈ, ಫೆರ್ನಾಂಡಿಸ್ ಗ್ರೂಪ್ ಅಧ್ಯಕ್ಷ ವಿಲ್ಸನ್ ಫೆರ್ನಾಂಡಿಸ್, ಪೆರಂಪಳ್ಳಿ ಕ್ರಿಶ್ಚಿಯನ್ ಯೂನಿಟಿ ಅಧ್ಯಕ್ಷ ವಿನ್ಸೆಂಟ್ ಡಿ’ಸೋಜಾ, ಸೊಸೈಟಿಯ ಅಧ್ಯಕ್ಷೆ ಜೆಸಿಂತಾ ಡಿ’ಸೋಜಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿದರು.
ವ್ಯವಸ್ಥಾಪಕ ನಿರ್ದೇಶಕ ಜೀವನ್ ಡಿಸೋಜ ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ಮುಖ್ಯ ಶಾಖೆಯ ವ್ಯವಸ್ಥಾಪಕ ಕುಮಾರ್ ವಂದಿಸಿದರೆ, ನಿರ್ದೇಶಕ ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರ್ವಹಿಸಿದರು.







Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now