ಎಂಆರ್‌ಪಿಎಲ್ ಸ್ಫೋಟ : ಮೃತ ಮನಿಷ್ ಕರ್ಕಡ ಕುಟುಂಬಕ್ಕೆ ಪರಿಹಾರ ಘೋಷಣೆ

ಎಂಆರ್‌ಪಿಎಲ್ ಸ್ಫೋಟ : ಮೃತ ಮನಿಷ್ ಕರ್ಕಡ ಕುಟುಂಬಕ್ಕೆ ಪರಿಹಾರ ಘೋಷಣೆ
0Shares

ಮಂಗಳೂರು : ನಗರದ ಎಂಆರ್‌ಪಿಎಲ್ ನಲ್ಲಿ ಸಂಭವಿಸಿದ ಬಾಯರ್ ಸ್ಫೋಟ ಪ್ರಕರಣದಲ್ಲಿ ಮೃತಪಟ್ಟಿದ್ದ ಮುಲ್ಕಿ ಹಳೆಯಂಗಡಿ ನಿವಾಸಿ ಮನೀಶ್ ಕರ್ಕಡ (23) ಅವರ ಕುಟುಂಬಕ್ಕೆ ₹1.20 ಕೋಟಿ ಪರಿಹಾರ ನೀಡಲು MRPL ನಿರ್ಧರಿಸಿದೆ.

ಮನೀಶ್ ಕರ್ಕಡ ಅವರು MRPLನಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದರು. ಸ್ಫೋಟದ ತೀವ್ರತೆಗೆ ಅವರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದರು. ಬಳಿಕ ಅವರು ಮೃತಪಟ್ಟಿರುವುದು ದೃಢಪಟ್ಟಿತ್ತು.

ಘಟನೆಯ ಬಳಿಕ ಮೃತರ ಕುಟುಂಬಕ್ಕೆ ಗರಿಷ್ಠ ಪ್ರಮಾಣದ ಪರಿಹಾರ ನೀಡುವಂತೆ ಸಚಿವ ಯು.ಟಿ. ಖಾದ‌ರ್ ಸೂಚಿಸಿದ್ದರು ಎನ್ನಲಾಗಿದೆ. ಇದರ ಬೆನ್ನಲ್ಲೇ MRPL ₹1.20 ಕೋಟಿ ಪರಿಹಾರ ಘೋಷಿಸಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now