
ಉಡುಪಿಯ ಸರ್ವಿಸ್ ಬಸ್ ನಿಲ್ದಾಣದ ಬಳಿಯ ಭಗವತಿ ಟೂರಿಸ್ಟ್ ಬಸ್ ಬುಕ್ಕಿಂಗ್ ಸಂಸ್ಥೆಯ ಮಾಲೀಕರಾದ ಶ್ರೀ ವಿನಯ್ ರಾಜ್ (51) ಅಲ್ಪ ಕಾಲದ ಅಸೌಖ್ಯದ ಕಾರಣ ನಿಧನ ಹೊಂದಿದ್ದಾರೆ.
ಉಡುಪಿಯ ಅದರ್ಶ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಇವರು,ಚಿಕಿತ್ಸೆ ಫಲಕಾರಿಯಾಗದೇ..ಸೋಮವಾರ ಬೆಳಿಗ್ಗೆ ಸ್ವರ್ಗಸ್ಥರಾಗಿದ್ದಾರೆ.
ಟೂರಿಸ್ಟ್ ಬಸ್ ಬುಕ್ಕಿಂಗ್ ಕ್ಷೇತ್ರದಲ್ಲಿ ಮೂವತ್ತು ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದ ವಿನಯ್ ರಾಜ್ , ಟೂರಿಸ್ಟ್ ಹಾಗೂ ಸರ್ವೀಸ್ ಬಸ್ ಸಂಘದ ಸಾರ್ವಜನಿಕ ಗಣೇಶೋತ್ಸವ ಸಮಿತಿಯ ಧೀರ್ಘ ಕಾಲದ ಕೋಶಧಿಕಾರಿ ಹುದ್ದೆ ,ಹಾಗೂ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದರು ,
ವ್ಯವಹಾರಿಕಾವಾಗಿಯೂ ಸಾಮಾಜಿಕ ಚಟುವಟಿಕೆಗಳಲ್ಲಿ ಸದಾ ಸಕ್ರಿಯ ರಾಗಿದ್ದರು.
ಮೃತರು ತಾಯಿ ಪತ್ನಿ ಮತ್ತು ಇಬ್ಬರು ಹೆಣ್ಣು ಮಕ್ಕಳನ್ನು ಅಗಲಿದ್ದಾರೆ
ಅಂತ್ಯಕ್ರಿಯೆಯ ವಿಧಿವಿಧಾನಗಳು ನಿಡಂಬಳ್ಳಿ ಸ್ವ ಗೃಹದಲ್ಲಿ ಇಂದು ಮುಂಜಾನೆ 11 ಗಂಟೆಗೆ ನಡೆಯಲಿದೆ ಎಂದು ಕುಟುಂಬಸ್ಥರು ತಿಳಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now