
ಗ್ರಾಹಕ ಸೇವೆ ಮತ್ತು ಪ್ರಗತಿಯ ಪಯಣದಲ್ಲಿ ಮತ್ತೊಂದು ಮಹತ್ವದ ಮೈಲಿಗಲ್ಲನ್ನು ಸಾಧಿಸಿರುವ MCC ಬ್ಯಾಂಕಿನ ಮೂಡುಬಿದಿರೆ ಶಾಖೆಯು ದಿನಾಂಕ 10ನೇ ನವೆಂಬರ್ 2026, ಮಂಗಳವಾರದಂದು ಮೂಡುಬಿದಿರೆಯ ಇನ್ಸ್ಪೆಕ್ಷನ್ ಬಂಗ್ಲೋ ಸಮೀಪದ ಪತ್ರಿಕಾ ಭವನದ ನೆಲಮಹಡಿಯಲ್ಲಿರುವ ನೂತನ ಹಾಗೂ ಆಧುನಿಕ ಸೌಲಭ್ಯಗಳನ್ನೊಳಗೊಂಡ ಆವರಣಕ್ಕೆ ಸ್ಥಳಾಂತರಗೊಂಡಿತು. ಇದೇ ಸಂದರ್ಭದಲ್ಲಿ ಶಾಖೆಯು ಗ್ರಾಹಕರಿಗೆ ಸಲ್ಲಿಸುತ್ತಿರುವ 31 ವರ್ಷಗಳ ಸಾರ್ಥಕ ಸೇವೆಯನ್ನು ಸ್ಮರಿಸಲಾಯಿತು

ನೂತನ ಶಾಖಾ ಆವರಣವನ್ನು ಮೂಡುಬಿದಿರೆ ಕಾರ್ಪಸ್ ಕ್ರಿಸ್ಟಿ ಚರ್ಚ್ನ ವಲಯ ಪ್ರಧಾನ ಧರ್ಮಗುರುಗಳಾದ ಅತೀ ವಂದನೀಯ ವಂ. ಫಾ. ಓನಿಲ್ ಡಿಸೋಜಾ ಅವರು ಆಶೀರ್ವದಿಸಿದರು. ನೂತನ ಸುರಕ್ಷಿತ ಠೇವಣಿ ಲಾಕರ್ ಸೌಲಭ್ಯವನ್ನು ಅಳಂಗಾರಿನ ಅವರ್ ಲೇಡಿ ಆಫ್ ಹೋಲಿ ರೋಸರಿ ಚರ್ಚ್ನ ಧರ್ಮಗುರುಗಳಾದ ವಂ. ಫಾ. ಮೆಲ್ವಿನ್ ನೊರೊನ್ಹಾ ಅವರು ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು MCC ಬ್ಯಾಂಕಿನ ಅಧ್ಯಕ್ಷರಾದ ಸಹಕಾರ ರತ್ನ ಶ್ರೀ ಅನಿಲ್ ಲೋಬೊ ಅವರು ವಹಿಸಿದ್ದರು. ಅಳಂಗಾರಿನ ಅವರ್ ಲೇಡಿ ಆಫ್ ಹೋಲಿ ರೋಸರಿ ಚರ್ಚ್ನ ಧರ್ಮಗುರುಗಳಾದ ವಂ. ಫಾ. ಮೆಲ್ವಿನ್ ನೊರೊನ್ಹಾ ಅವರು ಮುಖ್ಯ ಅತಿಥಿಗಳಾಗಿದ್ದರು. ಸಂಪಿಗೆ ಹೋಲಿ ಸ್ಪಿರಿಟ್ ಚರ್ಚ್ನ ಧರ್ಮಗುರುಗಳಾದ ವಂ. ಫಾ. ವಿನ್ಸೆಂಟ್ ಡಿಸೋಜಾ, ಕರ್ನಾಟಕ ಸರ್ಕಾರದ ಮಾಜಿ ಸಚಿವರಾದ ಶ್ರೀ ಅಭಯಚಂದ್ರ ಜೈನ್, ಮೂಡುಬಿದಿರೆಯ ನ್ಯಾಯವಾದಿ ಹಾಗೂ ನೋಟರಿಯಾದ ಶ್ರೀ ಪ್ರವೀಣ್ ಎಸ್. ಲೋಬೊ, ಅಶ್ವಿ ಹಾರ್ಡ್ ವೇರ್ ಆ್ಯಂಡ್ ಸ್ಟೀಲ್ಸ್ನ ಮಾಲೀಕರಾದ ಶ್ರೀ ರೋಹನ್ ರಾಜೇಶ್ ಮೆಂಡಿಸ್, ಮೂಡುಬಿದಿರೆ ಟೌನ್ ಜುಮ್ಮಾ ಮಸೀದಿಯ ಅಧ್ಯಕ್ಷರಾದ ಶ್ರೀ ಎಂ. ಅಬ್ದುಲ್ ರಹಿಮಾನ್ ಹಾಗೂ ಮೂಡುಬಿದಿರೆ ಪ್ರೆಸ್ ಕ್ಲಬ್ನ ಅಧ್ಯಕ್ಷರಾದ ಶ್ರೀ ಸೀತಾರಾಮ ಆಚಾರ್ಯ ಅವರು ಗೌರವ ಅತಿಥಿಗಳಾಗಿ ಉಪಸ್ಥಿತರಿದ್ದರು.

ತಮ್ಮ ಅಧ್ಯಕ್ಷೀಯ ಭಾಷಣದಲ್ಲಿ MCC ಬ್ಯಾಂಕಿನ ಅಧ್ಯಕ್ಷರಾದ ಶ್ರೀ ಅನಿಲ್ ಲೋಬೊ ಅವರು ಗಣ್ಯ ಅತಿಥಿಗಳು, ನಿರ್ದೇಶಕರು, ಆಡಳಿತ ಮಂಡಳಿ, ಸಿಬ್ಬಂದಿ ವರ್ಗ, ಗ್ರಾಹಕರು ಹಾಗೂ ಹಿತೈಷಿಗಳು ಬ್ಯಾಂಕಿನ ಮೇಲೆ ಇಟ್ಟಿರುವ ಅಚಲ ವಿಶ್ವಾಸ ಮತ್ತು ನಿರಂತರ ಸಹಕಾರಕ್ಕೆ ಹತ್ತೂರ್ವಕ ಕೃತಜ್ಞತೆ ಸಲ್ಲಿಸಿದರು. MCC ಬ್ಯಾಂಕನ್ನು ನಿಜವಾದ “ಜನರ ಬ್ಯಾಂಕ್” ಎಂದು ಬಣ್ಣಿಸಿದ ಅವರು, ಹಲವು ದಶಕಗಳಿಂದ ಬ್ಯಾಂಕ್ ವಿಶ್ವಾಸ ಮತ್ತು ಸೇವೆಯ ಶ್ರೀಮಂತ ಪರಂಪರೆಯನ್ನು ಬೆಳೆಸಿಕೊಂಡು ಬಂದಿದೆ ಎಂದು ತಿಳಿಸಿದರು. ಗ್ರಾಹಕರೇ ಬ್ಯಾಂಕಿನ ನಿಜವಾದ ಬ್ಯಾಂಡ್ ರಾಯಭಾರಿಗಳಾಗಿದ್ದು, ತಮ್ಮ ಸ್ನೇಹಿತರು ಹಾಗೂ ಕುಟುಂಬದ ಸದಸ್ಯರನ್ನು ಬ್ಯಾಂಕಿನೊಂದಿಗೆ ವ್ಯವಹರಿಸಲು ಪ್ರೇರೇಪಿಸುವಂತೆ ಕರೆ ನೀಡಿದರು.

MCC ಬ್ಯಾಂಕ್ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತು ಕರ್ನಾಟಕ ಸರ್ಕಾರದ ಸಹಕಾರ ಇಲಾಖೆಯ ದ್ವಂದ್ವ ನಿಯಂತ್ರಣ ವ್ಯವಸ್ಥೆಯಡಿ ಕಾರ್ಯನಿರ್ವಹಿಸುತ್ತಿದೆ ಎಂದು ತಿಳಿಸಿದ ಅಧ್ಯಕ್ಷರು, DICGC ವಿಮಾ ಯೋಜನೆಯಡಿ ಗ್ರಾಹಕರ ಠೇವಣಿಗಳಿಗೆ ದೊರೆಯುವ ವಿಮಾ ರಕ್ಷಣೆಯ ಬಗ್ಗೆ ಭರವಸೆ ನೀಡಿದರು. ನಾಯಕತ್ವದ ಮಹತ್ವವನ್ನು ವಿವರಿಸುತ್ತಾ, ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ನಿಜವಾದ ನಾಯಕತ್ವವೆಂದರೆ ದೈಹಿಕ ಶಕ್ತಿಗಿಂತಲೂ ದೃಢವಾದ ಮನೋಬಲ, ಸ್ಪಷ್ಟವಾದ ದೂರದೃಷ್ಟಿ ಹಾಗೂ ಸಹಾನುಭೂತಿಯ ಹೃದಯವನ್ನು ಹೊಂದಿರುವುದಾಗಿದೆ ಎಂದು ಅಭಿಪ್ರಾಯಪಟ್ಟರು. 2018ರ ಚುನಾವಣೆಯ ಸಂದರ್ಭದಲ್ಲಿ ತಾವು ಮತ್ತು ತಮ್ಮ ತಂಡ ನೀಡಿದ್ದ ಭರವಸೆಗಳನ್ನು ಈಡೇರಿಸಿದ್ದು, ಕಳೆದ ಎಂಟು ವರ್ಷಗಳಲ್ಲಿ ಬ್ಯಾಂಕಿನ ಸ್ಥಾಪಕ ಹಿರಿಯರ ಕನಸನ್ನು ಸಾಕಾರಗೊಳಿಸುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಿರುವುದಾಗಿ ತಿಳಿಸಿದರು.

ಬ್ಯಾಂಕಿನ ಗಮನಾರ್ಹ ಪ್ರಗತಿಯನ್ನು ವಿವರಿಸಿದ ಶ್ರೀ ಲೋಬೊ ಅವರು, ಮೂಡುಬಿದಿರೆ ಶಾಖೆಯ ವ್ಯವಹಾರವು ₹15 ಕೋಟಿಯಿಂದ ₹65 ಕೋಟಿಗೆ ಏರಿಕೆಯಾಗಿದ್ದು, ಶಾಖೆಯು ₹40 ಕೋಟಿ ಠೇವಣಿ ಹಾಗೂ ₹25 ಕೋಟಿ ಮುಂಗಡಗಳನ್ನು ಹೊಂದಿದೆ ಎಂದು ತಿಳಿಸಿದರು. ಕರ್ನಾಟಕದಲ್ಲಿರುವ 262 ನಗರ ಸಹಕಾರಿ ಬ್ಯಾಂಕುಗಳ ಪೈಕಿ ವಿಶೇಷ NRI ಬ್ಯಾಂಕಿಂಗ್ ಸೇವೆಗಳನ್ನು ಒದಗಿಸುತ್ತಿರುವ ಏಕೈಕ ನಗರ ಸಹಕಾರಿ ಬ್ಯಾಂಕ್ MCC ಬ್ಯಾಂಕ್ ಆಗಿದೆ ಎಂದು ಹೆಮ್ಮೆಯಿಂದ ತಿಳಿಸಿದರು, ಬ್ಯಾಂಕಿನ ಸೈಬರ್ ಭದ್ರತಾ ವ್ಯವಸ್ಥೆಯಲ್ಲಿನ ಬಲಿಷ್ಠ ಕ್ರಮಗಳು ಹಾಗೂ ಸಾಧನೆಗಳ ಬಗ್ಗೆಯೂ ಅವರು ವಿವರಿಸಿದರು.

ಬ್ಯಾಂಕಿನ ವಿಸ್ತರಣಾ ಯೋಜನೆಗಳ ಕುರಿತು ಮಾತನಾಡಿದ ಅಧ್ಯಕ್ಷರು, 24ನೇ ಶಾಖೆಯನ್ನು 2027ರ ಜನವರಿ 17ರಂದು ಪಡಿಲ್ನಲ್ಲಿ ಹಾಗೂ 25ನೇ ಶಾಖೆಯನ್ನು 2027ರ ಮಾರ್ಚ್ 14ರಂದು ಕದಿ-ಮಲ್ಲಿಕಟ್ಟದಲ್ಲಿ ಉದ್ಘಾಟಿಸಲಾಗುವುದು ಎಂದು ತಿಳಿಸಿದರು. ಬ್ಯಾಂಕಿನ ಸೇವೆಗಳನ್ನು ಮತ್ತಷ್ಟು ಉತ್ತಮಪಡಿಸುವ ನಿಟ್ಟಿನಲ್ಲಿ






Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now