
ಅತ್ಯುತ್ತಮ ಮಾತುಗಾರ, ಅತ್ಯುತ್ತಮ ಸಂಘಟಕ, ಜೆಸಿ ಆಂದೋಲನದಲ್ಲಿ ಯಶಸ್ವಿ ನಾಯಕನಾಗಿ ಮುನ್ನಡೆಸಿದವರು, ಯಶಸ್ವಿ ಉದ್ಯಮಿ, ಚಿಕ್ಕ ಹುದ್ದೆಗಳಿಂದ ಹಿಡಿದು, ಜೆಸಿಐ ಸಂಸ್ಥೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ಬೆಳೆದವರು, ಇವರ ಮಾತುಗಳನ್ನು ಕೇಳುವುದೆ ಒಂದು ಚೆಂದ.. ಆದರೆ ತುಂಬಾ ನೋವಾಯ್ತು ಇವತ್ತು ಅವರ ನಿಧನದ ವಾರ್ತೆ ಕೇಳಿ.. ಜೆಸಿಐ ಉದ್ಯಾವರ ಕುತ್ಪಾಡಿಯ ಸದಸ್ಯ, ಅಧ್ಯಕ್ಷನಾಗಿದ್ದಾಗ ಸಮಯದಲ್ಲಿ ಬಹಳಷ್ಟು ಬಾರಿ ಅವರ ಪರಿಚಯ ಮಾಡುವ ಅವಕಾಶ ನನಗೆ ದೊರಕಿತ್ತು.. ಸದಾ ಹಸನ್ಮುಖಿಯಾಗಿದ್ದ ಉದಯಣ್ಣ, ಎಲ್ಲರನ್ನೂ ಉದಯೋನ್ಮುಖ ನಾಯಕರನ್ನಾಗಿ ಬೆಳೆಸಿದವರು.. ಅಲ್ಪ ಕಾಲದ ಅಸೌಖ್ಯ ಅವರ ಜೀವನವನ್ನೇ ಇಂದು ಕೊನೆಯಾಗಿಸಿದೆ.. ಒಳ್ಳೆ ನಾಯಕ, ಒಳ್ಳೆಯ ಮಾತುಗಾರ, ಒಳ್ಳೆಯ ಉದ್ಯಮಿಯನ್ನು ಕಳೆದುಕೊಂಡಿದ್ದೇವೆ… ಅವರ ನಾಯಕತ್ವ, ಅವರ ಮಾತುಗಳು ಎಲ್ಲರಿಗೂ ಪ್ರೇರಣೆ.. ಇದ್ದಷ್ಟು ದಿನ ಒಳ್ಳೆಯದನ್ನೇ ಮಾಡಬೇಕು, ಅಷ್ಟೇ ಹೇಳಬಹುದು..
ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ ಉದ್ಯಾವರ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now