
ಹೆಬ್ರಿ : ಅಲಯನ್ಸ್ ಕ್ಲಬ್ ಹೆಬ್ರಿ ಮತ್ತು ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ವತಿಯಿಂದ ವರಂಗ ಗ್ರಾಮ ಪಂಚಾಯತ್ ವ್ಯಾಪ್ತಿಯ ವರಂಗ ಪೇಟೆ, ಚಟ್ಕಲ್ ಪಾದೆ, ಮುನಿಯಾಲು ಅಂಗನವಾಡಿ ಕೇಂದ್ರಗಳಿಗೆ ತೆರಳಿ ಮಕ್ಕಳಿಗೆ ಕೊಡೆ, ಸ್ಕೂಲ್ ಬ್ಯಾಗ್ ಹಾಗೂ ಕಲಿಕಾ ಸಾಮಗ್ರಿಗಳ ವಿತರಣಾ ಕಾರ್ಯಕ್ರಮವು ಜೂ. 18 ರಂದು ನಡೆಯಿತು.

ಮುನಿಯಾಲು ಅಂಗನವಾಡಿ ಕೇಂದ್ರದಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ವರಂಗ ಗ್ರಾಮ ಪಂಚಾಯತ್ ಪಿ. ಡಿ. ಒ. ಶ್ರೀನಿವಾಸ್ ವಹಿಸಿದ್ದರು.
ಅಲಯನ್ಸ್ ಕ್ಲಬ್ ಅಧ್ಯಕ್ಷ ಬಾಲಚಂದ್ರ. ಎಂ, ಅಲಯನ್ಸ್ ಕ್ಲಬ್ ಹೆಬ್ರಿ ಸಿಟಿ ಅಧ್ಯಕ್ಷೆ ಸುನೀತ ಹೆಬ್ಬಾರ್, ಉಪಾಧ್ಯಕ್ಷೆ ಇಂದಿರಾ ಬಾಯಾರಿ, ಜಿಲ್ಲಾ ಸಂಪುಟ ಕಾರ್ಯದರ್ಶಿ ಕೆ. ರಾಮಚಂದ್ರ ಭಟ್,
ವರಂಗ ಅಂಗನವಾಡಿ ಕೇಂದ್ರದ ಶಿಕ್ಷಕಿ ಅಶ್ವಿನಿ, ಪೋಷಕರಾದ ವಿದ್ಯಾ ಅನಂತ ನಾಯಕ್,
ಚಟ್ಕಲ್ ಪಾದೆ ಅಂಗನವಾಡಿ ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಸುಮಾ ಜೆ. ಶೆಟ್ಟಿ, ಸಹಾಯಕಿ ಚಿತ್ರಾಕ್ಷಿ,
ಮುನಿಯಾಲು ಅಂಗನವಾಡಿ ಸಹಾಯಕಿ ಸಂದ್ಯಾ, ಸಹಾಯಕಿ ಮಲ್ಲಿಕಾ, ವಿನೋದ, ಪೋಷಕರಾದ ರೇಖಾ, ಪ್ರೇಮ ಉಪಸ್ಥಿತರಿದ್ದರು.
ಹೆಬ್ರಿ ಸಿಟಿ ಅಲಯನ್ಸ್ ಕ್ಲಬ್ ಅಧ್ಯಕ್ಷೆ ಸುನೀತಾ ಹೆಬ್ಬಾರ್ ಸ್ವಾಗತಿಸಿದರು. ಹೆಬ್ರಿ ಅಲಯನ್ಸ್ ಕ್ಲಬ್ ಕೋಶಾಧಿಕಾರಿ ಸುರೇಶ್ ಪೂಜಾರಿ ಕಾರ್ಯಕ್ರಮ ನಿರೂಪಿಸಿದರು. ಸದಸ್ಯ ಗಣೇಶ್ ಪ್ರಸಾದ್ ಪಡುಕುಡೂರು ವಂದಿಸಿದರು.
ಪುಟಾಣಿ ಮಕ್ಕಳು, ಪೋಷಕರು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.

ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now