
ಉಡುಪಿ : ಉಡುಪಿ ಸಿಂಡಿಕೇಟ್ ಕ್ರೆಡಿಟ್ ಸೌಹಾರ್ದ ಕೋ-ಆಪರೇಟಿವ್ ಸೊಸೈಟಿ ಲಿ. ನ ಕುಂಜಿಬೆಟ್ಟು ಮುಖ್ಯ ಕಚೇರಿಯಲ್ಲಿ 2026ರ ದೀಪಾವಳಿ ಹಬ್ಬದ ಸಂಭ್ರಮವನ್ನು ಸಿಬ್ಬಂದಿಗಳೊಂದಿಗೆ ಸಂಭ್ರಮದಿಂದ ಆಚರಿಸಲಾಯಿತು. ಸಂಸ್ಥೆಯ ಮೂರು ಶಾಖೆಗಳ ಸಿಬ್ಬಂದಿಗಳು ಮುಖ್ಯ ಕಚೇರಿಯಲ್ಲಿ ಒಗ್ಗೂಡಿ ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

ಮುಖ್ಯ ಅತಿಥಿಗಳಾಗಿ ಚಾರ್ಟರ್ಡ್ ಅಕೌಂಟೆಂಟ್ (CA) ಉದಯ ಕುಮಾರ್ ಅವರು ಮಾತನಾಡಿ, ಬೆಳಕಿನ ಹಬ್ಬವು ಸರ್ವರಿಗೂ ಬೆಳಕನ್ನು ನೀಡಲಿ. ಕೇವಲ ಮೂರು ವರ್ಷದಲ್ಲಿ ಈ ಸಂಸ್ಥೆಯು ಆರ್ಥಿಕತೆಯಲ್ಲಿ ನಿರೀಕ್ಷೆಗೂ ಮೀರಿದ ಸಾಧನೆ ಮಾಡಿದೆ. ಇದೇ ಸಾಧನೆ ಮುಂದುವರಿಯಬೇಕಾದರೆ ಸಿಬ್ಬಂದಿಗಳ ಸಹಕಾರವು ಅತ್ಯಗತ್ಯ ಎಂದರು.

ಕಾರ್ಯಕ್ರಮವು ಸಂಸ್ಥೆಯ ಆಡಳಿತ ಮಂಡಳಿ, ನಿರ್ದೇಶಕರು ಹಾಗೂ ಸಿಬ್ಬಂದಿಗಳ ನಡುವಿನ ಪರಸ್ಪರ ಬಾಂಧವ್ಯ, ಸೌಹಾರ್ದತೆ ಮತ್ತು ಒಗ್ಗಟ್ಟನ್ನು ಪ್ರತಿಬಿಂಬಿಸಿತು. ಮೂರು ಶಾಖೆಗಳ ಸಿಬ್ಬಂದಿಗಳು ಒಂದೇ ವೇದಿಕೆಯಲ್ಲಿ ಸೇರಿ ಹಬ್ಬವನ್ನು ಆಚರಿಸಿರುವುದು ಸಂಸ್ಥೆಯ ತಂಡದ ಮನೋಭಾವ ಮತ್ತು ಸಾಮರಸ್ಯಕ್ಕೆ ಸಾಕ್ಷಿಯಾಯಿತು. ದೀಪಾವಳಿಯ ಬೆಳಕು ಸಂಸ್ಥೆಯ ಪ್ರಗತಿ, ಅಭಿವೃದ್ಧಿ ಹಾಗೂ ಯಶಸ್ಸಿಗೆ ಮತ್ತಷ್ಟು ಸ್ಫೂರ್ತಿಯಾಗಲಿ ಎಂಬ ಆಶಯದೊಂದಿಗೆ ಪ್ರಧಾನ ಕಚೇರಿಯನ್ನು ದೀಪಗಳಿಂದ ಬೆಳಗಿಸಲಾಯಿತು.

ಈ ಸಂದರ್ಭದಲ್ಲಿ ವ್ಯವಸ್ಥಾಪಕ ನಿರ್ದೇಶಕರಾದ ಜೀವನ್ ಡಿಸೋಜಾ, ಆಡಳಿತ ಅಧಿಕಾರಿ ಸೀಮಾ ಹಲ್ದಿಪುರ್, ಮೂರು ಶಾಖೆಯ ಶಾಖ ವ್ಯವಸ್ಥಾಪಕರು, ನಿರ್ದೇಶಕರು ಮತ್ತು ಸಿಬ್ಬಂದಿಗಳು ದೀಪಾವಳಿ ಸಂಭ್ರಮದಲ್ಲಿ ಸಂಭ್ರಮಿಸಿದರು. ಸಿಬ್ಬಂದಿ ರಂಜನಿ ಕಾರ್ಯಕ್ರಮ ನಿರೂಪಿಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now