
ಮಾನ್ಯ PRL SR.CIVIL JUDGE &CJM ನ್ಯಾಯಾಲಯ ಉಡುಪಿಯ CC No.1869/2024 ( ಮಲ್ಪೆ ಠಾಣಾ ಅಪರಾಧ ಕ್ರಮಾಂಕ: 65/2003 ಕಲಂ.143,147,148,323,326,R/W 149 IPC) ರಲ್ಲಿ (ABSCONDING CHARGESHEET) 23 ವರ್ಷಗಳಿಂದ ಮಾನ್ಯ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ವಾರೆಂಟ್ ಆಸಾಮಿ ಎಂ. ಬಾಬು ಪ್ರಾಯ:52 ವರ್ಷ ತಂದೆ: ಮಹಮ್ಮದ್ ವಾಸ : ಮನೆ ನಂಬ್ರ : 29/33,2 ನೇ ಅಡ್ಡರಸ್ತೆ, 7 ಮೈನ್, ಶಿವನಗರ, ಬೆಂಗಳೂರು, ಈತನ ಪತ್ತೆಯ ಬಗ್ಗೆ ಪೊಲೀಸ್ ಉಪಾಧೀಕ್ಷಕರು ಉಡುಪಿ ಉಪವಿಭಾಗ ಮತ್ತು ಪೊಲೀಸ್ ವೃತ್ತ ನಿರೀಕ್ಷಕರು ಮಲ್ಪೆರವರ ಮಾರ್ಗದರ್ಶನದಲ್ಲಿ, ಮಲ್ಪೆ ಪೊಲೀಸ್ ಠಾಣಾ ಉಪನಿರೀಕ್ಷಕರು(ಕಾ&ಸು) ಅನೀಲ್ ಕುಮಾರ್ ಡಿ ರವರ ನೇತೃತ್ವದಲ್ಲಿ ಕಳೆದ 5 ತಿಂಗಳಿನಿಂದ ಪ್ರಯತ್ನಿಸಿ, ಮಾಹಿತಿ ಕಲೆ ಹಾಕಿ, ಖಚಿತ ಮಾಹಿತಿ ಮೇರೆಗೆ ಠಾಣಾ ಸಿಬ್ಬಂದಿಗಳಾದ HC ಸುರೇಶ್ ಕುಮಾರ್ ಮತ್ತು HC ವಿಶ್ವನಾಥ್ ಎಚ್. ರವರು ದಿನಾಂಕ 12-04-2026 ರಂದು ಬೆಂಗಳೂರಿಗೆ ಹೋಗಿ ದಿನಾಂಕ: 14-04-2026 ರಂದು ಬೆಂಗಳೂರಿನ ರಾಮಮೂರ್ತಿ ನಗರದಲ್ಲಿ ಪತ್ತೆ ಹಚ್ಚಿ ದಸ್ತಗಿರಿ ಮಾಡಿ ಈ ದಿನ 15-04-2026 ರಂದು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿರುತ್ತಾರೆ . ಮಾನ್ಯ ನ್ಯಾಯಾಲಯವು ದಿ. 28.04.26ರ ವರೆಗೆ ನ್ಯಾಯಾಂಗ ಬಂಧನ ವಿಧಿಸುತ್ತಾರೆ.
ನಮ್ಮ ವರದಿಗಾರರು
ವಿಲ್ಸನ್ ಡಿಸೋಜ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now