
ಉಡುಪಿ :ದೀಪಾವಳಿ ಹಬ್ಬದ ಎಣ್ಣೆ ಶಾಸ್ತ್ರ ಹಾಗೂ ತೈಲಾಂಭ್ಯಂಜನ ಶ್ರೀ ಕೃಷ್ಣಮಠ ಪರ್ಯಾಯ ಶ್ರೀ ಶ್ರೀ ಶೀರೂರುಮಠದಲ್ಲಿ ಶಾಸ್ತ್ರೀಯವಾಗಿ ನಡೆಯಿತು. ಪರ್ಯಾಯ ಶ್ರೀ ಶ್ರೀ ವೇದವರ್ಧನತೀರ್ಥರು ತಮ್ಮ ವಿದ್ಯಾಗುರುಗಳಾದ ಕೃಷ್ಣಾಪುರ ಮಠಾಧೀಶರಾದ ಶ್ರೀವಿದ್ಯಾಸಾಗರ ತೀರ್ಥರು ಹಾಗೂ ಕಾಣಿಯೂರು ಮಠಾಧೀಶರಾದ ಶ್ರೀ ಶ್ರೀ ವಿದ್ಯಾವಲ್ಲಭತೀರ್ಥರ ಸಮ್ಮುಖದಲ್ಲಿ ಚಂದ್ರಶಾಲೆಯಲ್ಲಿ ಎಣ್ಣೆ ಶಾಸ್ತ್ರ ನೆರವೇರಿಸಿದರು.ಈ ಸಂದರ್ಭದಲ್ಲಿ ಯತಿಗಳು ಎಣ್ಣೆ ಶಾಸ್ತ್ರ ಪೂರೈಸಿ ಭಕ್ತಾದಿಗಳಿಗೆ ಎಣ್ಣೆ ಶಾಸ್ತ್ರ ಮಾಡಿದರು.ಶ್ರೀ ಮಠದ ಸಿಬ್ಬಂದಿಗಳು ಎಣ್ಣಿ ಶಾಸ್ತ್ರ ಪೂರೈಸಿ ತೈಲಾಂಭ್ಯಂಜನ ಮಾಡಿ ಸಂಭ್ರಮಿಸಿದರು.ಅಷ್ಟಮಠದ ವಿದ್ವಾಂಸರು, ಪರ್ಯಾಯ ಮಠದ ದಿವಾನರು ಡಾ.ಉದಯಕುಮಾರ್ ಸರಳತ್ತಾಯ,ಪಾರುಪತ್ಯೆದಾರ ಶ್ರೀಶ ಭಟ್ ಕಡೆಕಾರು ಹಾಗೂ ಭಕ್ತರು, ಸಿಬ್ಬಂದಿಗಳು ಉಪಸ್ಥಿತರಿದ್ದರು
1


Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now