ರಾಷ್ಟ್ರೀಯ ಹೆದ್ದಾರಿ-66 ನಿರಂತರ ಅಪಘಾತ ಸಮಸ್ಯೆ:ಬೆಂಗಳೂರಿನ ಆರ್.ಓ ಕಚೇರಿಯಲ್ಲಿ ತುರ್ತು ಸಭೆ

ರಾಷ್ಟ್ರೀಯ ಹೆದ್ದಾರಿ-66 ನಿರಂತರ ಅಪಘಾತ ಸಮಸ್ಯೆ:ಬೆಂಗಳೂರಿನ ಆರ್.ಓ ಕಚೇರಿಯಲ್ಲಿ ತುರ್ತು ಸಭೆ
0Shares

ರಾಷ್ಟ್ರೀಯ ಹೆದ್ದಾರಿ-66ರಲ್ಲಿ ಹೆಜಮಾಡಿಯಿಂದ ಬೈಂದೂರು ವರೆಗಿನ ನಿರಂತರ ಅಪಘಾತಗಳು ಮತ್ತು ಮೂಲಭೂತ ಸೌಕರ್ಯದ ಕೊರತೆ, ಹೆದ್ದಾರಿ ವಿಭಜಕಗಳ ಮಧ್ಯೆ ತಡೆಗೋಡೆ, ಅಪಘಾತ ಸಂಭವಿಸುವ ಬ್ಲಾಕ್‌ಸ್ಪಾಟ್ ವಲಯಗಳಲ್ಲಿ ಡಿವೈಡರ್‌ಗಳ ಮಧ್ಯೆ ತಡೆಬೇಲಿ ರಚನೆ, ಜನಜಂಗುಳಿ ಮತ್ತು ಬೇಡಿಕೆ ಇರುವ ಕಡೆ ಎಫ್.ಓ.ಬಿ ನಿರ್ಮಾಣ, ಉಡುಪಿಯ ಅಂಬಾಗಿಲು, ಕೋಟ ಪಡುಬಿದ್ರೆಗಳಲ್ಲಿ ಟ್ರಾಫಿಕ್ ಸಿಗ್ನಲ್‌ಗಳ ಅಳವಡಿಕೆ ಹಾಗೂ ಎನ್.ಹೆಚ್-66 ರ ಅಪಘಾತ ನಿಯಂತ್ರಣ ಮತ್ತು ಅಭಿವೃದ್ಧಿಯ ಬಗ್ಗೆ ನನ್ನ ಅಧ್ಯಕ್ಷತೆಯಲ್ಲಿ ಬೆಂಗಳೂರಿನ ನಾಗಸಂದ್ರದಲ್ಲಿರುವ ರಾಷ್ಟ್ರೀಯ ಹೆದ್ದಾರಿ ಪ್ರಾದೇಶಿಕ ಅಧಿಕಾರಿ ಶ್ರೀ ವಿಲಾಸ್ ಬ್ರಾಹ್ಮಣ್‌ಕರ್ ರವರ ಕಚೇರಿಯಲ್ಲಿ ತುರ್ತು ಸಭೆ ನಡೆಸಲಾಯಿತು.

ಹೆಜಮಾಡಿಯಿಂದ ಬೈಂದೂರುವರೆಗೆ ಉಡುಪಿ ಜಿಲ್ಲೆಯ ವ್ಯಾಪ್ತಿಯಲ್ಲಿ ಕೇವಲ 10 ತಿಂಗಳಲ್ಲಿ 94 ಮಂದಿ ಅಪಘಾತಕ್ಕೆ ಬಲಿಯಾಗಿ ಸಾವನಪ್ಪಿದ್ದಾರೆ. 14 ಸ್ಥಳ ಅಪಘಾತದ ಬ್ಲಾಕ್‌ಸ್ಪಾಟ್‌ಗಳೆಂದು ಗುರುತಿಸಲಾಗಿದ್ದರೂ ಇಲಾಖೆ ನಿರ್ವಹಣೆ ನಿರ್ಲಕ್ಷದಿಂದ ಸಮಸ್ಯೆ ಗಂಭೀರವಾಗುತ್ತಿದೆ. ಪ್ರಸ್ತಾಪಿತ ಎನ್.ಹೆಚ್ 66 ಸಮಗ್ರ ಡಿಪಿಆರ್ ಮಾಹಿತಿಯನ್ನು ಜನಪ್ರತಿನಿಧಿಗಳ ಗಮನಕ್ಕೆ ಮೊದಲಾಗಿ ತರಬೇಕು, ಹಾಗಿಲ್ಲದೆ ಹೋದರೆ ಮುಂದಾಗುವ ಸಮಸ್ಯೆಗಳಿಗೆ ರಾಷ್ಟ್ರೀಯ ಹೆದ್ದಾರಿ ಇಲಾಖೆ ಹೊಣೆಯಾಗುತ್ತದೆ ಎಂದು ಎಚ್ಚರಿಸಿದೆ.
ಎನ್.ಹೆಚ್ 66 ಪ್ರಗತಿಯ ಮಾಹಿತಿ ಒದಗಿಸಿದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿ ಶ್ರೀ ವಿಲಾಸ್ ಬ್ರಾಹ್ಮಣ್‌ಕರ್, ನಮ್ಮ ಪ್ರಸ್ತಾವನೆಯ ಮೇರೆಗೆ ಹೆಜಮಾಡಿಯಿಂದ ಕುಂದಾಪುರದವರೆಗಿನ ಪೂರ್ಣ ಸರ್ವಿಸ್ ರಸ್ತೆಗೆ ಹಂತ ಹಂತದಲ್ಲಿ ಅನುಮೋದನೆ ನೀಡಲಾಗಿದೆ. ಕೋಟೇಶ್ವರ, ತೆಕ್ಕಟ್ಟೆ, ಕುಂಭಾಶಿ, ಬ್ರಹ್ಮಾವರ ಕಲ್ಯಾಣಪುರದ ಬಳಿ ಅಂಬಾಗಿಲು, ಎರ್ಮಾಳು ಮುಂತಾದ ಕಡೆ ಸರ್ವಿಸ್ ರಸ್ತೆಗಳು ಪ್ರಗತಿಯಲ್ಲಿದ್ದು, ಕೋಟ ವಿವೇಕ ಹೈಸ್ಕೂಲ್, ಸಾಸ್ತಾನದ ಬಸ್ ನಿಲ್ದಾಣ ಮತ್ತು ಟೋಲ್ ಪ್ಲಾಜಾ ಬಳಿ ಅತಿ ಶೀಘ್ರದಲ್ಲಿ ಸರ್ವಿಸ್ ರಸ್ತೆ ಆರಂಭಿಸಲಾಗುವುದು ಎಂದು ವಿವರಿಸಿದರು.

ಸಾಲಿಗ್ರಾಮದ ಗುರುನರಸಿಂಹ ಮತ್ತು ಆಂಜನೇಯ ದೇವಳಕ್ಕೆ ಭೇಟಿ ನೀಡುವ ಭಕ್ತಾದಿಗಳು ಎನ್.ಹೆಚ್ ದಾಟುವ ಸಂದರ್ಭ ಆಗುವ ಅಪಘಾತಗಳ ಬಗ್ಗೆ ಚರ್ಚೆ ನಡೆದು ಅಂಡರ್ ಪಾಸ್ ನಿರ್ಮಿಸಲು ಭಕ್ತಾದಿಗಳ ಒತ್ತಾಯವಿದ್ದರೂ ತಾಂತ್ರಿಕ ಕಾರಣ ಹಾಗೂ ನೀರು ಹರಿದು ಹೋಗುವ ಸಮಸ್ಯೆ ಪರಿಶೀಲಿಸುವಂತೆ ಮತ್ತು ಅಂಡರ್‌ಪಾಸ್ ಸಮಸ್ಯೆಯ ಬಗ್ಗೆ ಧ್ರುವ ಏಜೆನ್ಸಿಯವರಿಗೆ ವರದಿ ನೀಡುವಂತೆ ಆರ್.ಓ ಸೂಚಿಸಲಾಗಿದೆ.
ಕಾಪು ವಿಧಾನಸಭಾ ಕ್ಷೇತ್ರದ ತೆಂಕ-ಎರ್ಮಾಳಿನಲ್ಲಿ ರಚನೆಯಾಗುತ್ತಿರುವ ಪಾದಚಾರಿ ಮೇಲ್ಸೇತುವೆ ಯಾರಿಗೂ ಉಪಯೋಗವಾಗುವುದಿಲ್ಲ ಬದಲಾಗಿ ಉಚ್ಚಿಲದ ಬಳಿ ದೇವಸ್ಥಾನ ಮತ್ತು ಪಾದಚಾರಿಗಳಿಗೆ ಅನುಕೂಲವಾಗುವಂತೆ ಮೇಲ್ಸೇತುವೆ ನಿರ್ಮಿಸಲು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. ಈ ಬಗ್ಗೆ ಸಂಸದನಾದ ನಾನು ಮತ್ತು ಸ್ಥಳೀಯ ಶಾಸಕ ಗುರ್ಮೇ ಸುರೇಶ್ ಶೆಟ್ಟಿಯವರು ಕಾಮಗಾರಿ ನಿಲ್ಲಿಸುವಂತೆ ಲಿಖಿತ ಪತ್ರ ಕೊಟ್ಟರೂ ಕಾಮಗಾರಿ ಮುಂದುವರೆಯಲು ಕಾರಣವೇನು? ಸಾರ್ವಜನಿಕರು ಗ್ರಾಮ ಸಭೆಯ ಮೂಲಕ ನಿರ್ಣಯಿಸಿ ವಿರೋಧಿಸಿದರೂ ಇಲಾಖೆಯ ನಿಲುವು ಉಡಾಫೆತನವಾಗುತ್ತಿದೆ ಎಂದು ಎರ್ಮಾಳು, ಮೇಲ್ಸೇತುವೆ ನಿಲ್ಲಿಸಲು ಆಗ್ರಹಿಸಿದೆ. ನನ್ನ ಕೋರಿಕೆಯಂತೆ, ತಕ್ಷಣ ಕಾಮಗಾರಿ ನಿಲ್ಲಿಸಲು ಆರ್.ಓ ಬ್ರಾಹ್ಮಣಕರ್ ಎನ್.ಹೆಚ್ ಅಧಿಕಾರಿಗಳಿಗೆ ಸೂಚಿಸಿದರು. ಅಂಬಲಪಾಡಿ ಮೇಲ್ಸೆತುವೆ, ಕೆಳಗಿನ ಸರ್ವಿಸ್ ರಸ್ತೆ, ಹೊಂಡಗಳಿಂದ ತುಂಬಿದ್ದು ಅದನ್ನು ಕೂಡಲೇ ಸರಿಪಡಿಸುವುದಾಗಿ ಪ್ರಾಜೆಕ್ಟ್ ಡೈರೆಕ್ಟರ್ ಜಾವೇದ್ ತಿಳಿಸಿದರು. ಸಂತೆಕಟ್ಟೆಯಲ್ಲಿ 5-5 ಮೀ ಸರ್ವಿಸ್ ರಸ್ತೆಯನ್ನು 7-5 ಮೀ ಗೆ ವಿಸ್ತರಿಸಿ ಸ್ಥಳೀಯ ವಾಹನಗಳ ಸಂಚಾರ ಸುಗಮ ಬಗ್ಗೆ ನಾನು ಪ್ರಸ್ತಾಪಿಸಿದ್ದು, ಕೂಡಲೇ ಕಾಮಗಾರಿ ಆರಂಭಿಸಲು ಸೂಚಿಸಿದೆ. ಇತ್ತೀಚಿಗೆ ಅಪಘಾತ ನಡೆದ ಕೋಟ ಜಂಕ್ಷನ್ ಬಗ್ಗೆ ತಕ್ಷಣ ವರದಿ ಮಂಡಿಸಿ, ಮುಂದಿನ ಕ್ರಮ ಜರುಗಿಲು ಸಭೆಯಲ್ಲಿ ತೀರ್ಮಾನ ಕೈಗೊಳ್ಳಲಾಯಿತು.
ಬಲಾಯಿಪಾದೆ, ಕಿನ್ನಿಮುಲ್ಕಿ, ಕಟಪಾಡಿ ಮತ್ತು ಗುಂಡ್ಮಿ ಬ್ರಹ್ಮಾವರ ಗಾಂಧಿ ನಗರದವರೆಗೆ ಸರ್ವಿಸ್ ರಸ್ತೆ ರಚಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ತಿಳಿಸಿದೆ. ಕಟಪಾಡಿಯ ಅಂಡರ್‌ಪಾಸ್ ಕಾಮಗಾರಿಯ ಪೂರ್ಣಗೊಳಿಸುವ ಅವಧಿ 18.09.2027 ಆಗಿದ್ದು ಅದಕ್ಕಿಂತ ಮೊದಲೇ ಮುಗಿಸುವುದಾಗಿ ಆರ್.ಓ ತಿಳಿಸಿದರು. ಹೆಜಮಾಡಿ, ಸಾಸ್ತಾನ ಟೋಲ್ ಪ್ಲಾಜಾಗಳಲ್ಲಿ 20ಕಿಲೋಮೀಟರ್ ದೂರದೊಳಗಿನ ವಾಹನ ಮಾಲಕರಿಗೆ ರಿಯಾಯಿತಿ ದರದಲ್ಲಿ ಪಾಸ್ ನೀಡುವ ಬಗ್ಗೆ ಕ್ರಮ ಜರುಗಿಸಲು ನಾನು ನೀಡಿದ ಸಲಹೆಗೆ ಸಭೆಯಲ್ಲಿದ್ದ ಟೋಲ್ ಪ್ಲಾಜಾ ಮುಖ್ಯಸ್ಥ ತಿಮ್ಮಯ್ಯನವರಿಗೆ ತಕ್ಷಣ ಕ್ರಮ ವಹಿಸುವಂತೆ ಆರ್.ಓ ಬ್ರಾಹ್ಮಣ್‌ಕರ್ ನಿರ್ದೇಶಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now