
ಕೋಟದಲ್ಲಿ ನೂತನವಾಗಿ ರಚನೆಯಾದ ವರುಣತೀರ್ಥ ಕೆರೆಯ ದಡದಲ್ಲಿ ಜಿಲ್ಲೆ ಮತ್ತು ರಾಜ್ಯಮಟ್ಟದ ಈಜು ಸ್ಪರ್ಧೆಯಲ್ಲಿ ವಿವಿಧ ಸ್ಪರ್ಧೆಗಳಲ್ಲಿ ಪದಕ ಪಡೆದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಪದಕ ವಿಜೇತ ಮಕ್ಕಳು ಮತ್ತು ಹೆತ್ತವರನ್ನು ಅಭಿನಂದಿಸಿ ಮಾತನಾಡಿ, ಗ್ರಾಮೀಣ ಪ್ರದೇಶದ ಅದರಲ್ಲೂ ಬಹುತೇಕ ಸರಕಾರಿ ಶಾಲೆಗಳಲ್ಲಿ ಓದಿದ ಮಕ್ಕಳು ರಾಜ್ಯ ಮತ್ತು ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಹಲವಾರು ಪದಕಗಳನ್ನು ಪಡೆದಿರುವುದು ನಿಜಕ್ಕೂ ಪ್ರಶಂಸನೀಯ. ಈ ವಿದ್ಯಾರ್ಥಿ ಪಟುಗಳಿಂದ ರಾಷ್ಟ್ರಕ್ಕೆ ಗೌರವ ಬರಲಿ ಎಂದು ಶುಭ ಹಾರೈಸಿ

ಸುಮಾರು 36 ಮಂದಿ ಪದಕ ವಿಜೇತ ವಿದ್ಯಾರ್ಥಿಗಳಿಗೆ ಶಾಲುಹೊದಿಸಿ ಸನ್ಮಾನಿಸಿದ ಅಮೃತೇಶ್ವರಿ ದೇವಳದ ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀ ಆನಂದ್ ಸಿ. ಕುಂದರ್ ಮಾತನಾಡಿ, ವರುಣತೀರ್ಥಕೆರೆ ಐತಿಹಾಸಿಕ ಮತ್ತು ಚಾರಿತ್ರಿಕ ಹಿನ್ನೆಲೆ ಹೊಂದಿದ್ದು, ಇದರಲ್ಲಿ ಈಜು ಕಲಿತ ವಿದ್ಯಾರ್ಥಿಗಳನ್ನು ಸನ್ಮಾನಿಸಿರುವುದು ಸಂತಸ ತಂದಿದೆ. ನಮ್ಮೂರಿನ ವಿದ್ಯಾರ್ಥಿಗಳಿಂದ ಈಜು ಸ್ಪರ್ಧೆಯಲ್ಲಿ ಮತ್ತಷ್ಟು ಸಾಧನೆಯಾಗಲಿ ಎಂದು ಶುಭ ಹಾರೈಸಿದರು.
ದಿನನಿತ್ಯ ವಿದ್ಯಾರ್ಥಿಗಳಿಗೆ ಈಜು ಕಲಿಸಿದ ಶಿಕ್ಷಕ ಶ್ರೀ ಶ್ರೀಧರ್ ಉಳಿತ್ತಾಯ ರವರನ್ನು ಸನ್ಮಾನಿಸಲಾಯಿತು. ವರುಣತೀರ್ಥದ ಮೆಟ್ಟಿಲುಗಳ ಮೇಲೆ ನಡೆದ ಸರಳ ಸಮಾರಂಭದಲ್ಲಿ ಪ್ರಮೋದ್ ಹಂದೆ, ವಿಜಯ ಕಾಂಚನ್, ರವಿ ಬಾರಿಕೆರೆ, ನಾಗರಾಜ ಪ್ರಭು, ಶೇವದಿ ಸುರೇಶ್, ಅಮೃತೇಶ್ವರಿ ಅಳತ ಮಂಡಳಿ ಸದಸ್ಯ ಚಂದ್ರ ಆಚಾರ್ಯ, ಮಾಜಿ ಗ್ರಾಮ ಪಂಚಾಯತ್ ಸದಸ್ಯರಾದ ಶ್ರೀ ಗೋಪಾಲ್ ಪೈ, ಶ್ರೀ ಚಂದ್ರ ಪೂಜಾರಿ, ಶ್ರೀ ಕುಶ ಆಚಾರ್ಯ, ಶ್ರೀಮತಿ ಮಹಾಲಕ್ಷ್ಮಿ ಮುಂತಾದವರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now