ರಸ್ತೆ ಸುರಕ್ಷತೆಗೆ ಕೈಜೋಡಿಸಿದ ಪವರ್ ಫ್ರೆಂಡ್ಸ್ ಮತ್ತು ದಾನಿಗಳು: ಪೆರಂಪಳ್ಳಿಯಲ್ಲಿ ಬ್ಯಾರಿಕೇಟ್‌ಗಳ ಲೋಕಾರ್ಪಣೆ

ರಸ್ತೆ ಸುರಕ್ಷತೆಗೆ ಕೈಜೋಡಿಸಿದ ಪವರ್ ಫ್ರೆಂಡ್ಸ್ ಮತ್ತು ದಾನಿಗಳು: ಪೆರಂಪಳ್ಳಿಯಲ್ಲಿ ಬ್ಯಾರಿಕೇಟ್‌ಗಳ ಲೋಕಾರ್ಪಣೆ
0Shares

ಪವರ್ ಫ್ರೆಂಡ್ಸ್ ನ ನೇತ್ರತ್ವದಲ್ಲಿ ಪೆರಂಪಳ್ಳಿ ಚರ್ಚ್ ಸರ್ಕಲ್ ಬಳಿ ಸಂಭವಿಸುತ್ತಿರುವ ಅಪಘಾತಗಳನ್ನು ತಡೆಗಟ್ಟುವ ಹಾಗೂ ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಟಿಯಿಂದ ದಾನಿಗಳ ಸಹಕಾರದೊಂದಿಗೆ ಒಟ್ಟು 6 ಬ್ಯಾರಿಕೇಟ್‌ಗಳ ಹಸ್ತಾಂತರ ಕಾರ್ಯಕ್ರಮ ನಡೆಯಿತು.

ಕೊಡುಗೆದಾರರು:

  • ಅನಿಶ್ ಜನರಲ್ ಸ್ಟೋರ್, ಪೆರಂಪಳ್ಳಿ
  • ಯೂನಿಯನ್ ಬ್ಯಾಂಕ್, ಪೆರಂಪಳ್ಳಿ
  • ಟ್ರಿನಿಟಿ ಸೆಂಟ್ರಲ್ ಸ್ಕೂಲ್, ಪೆರಂಪಳ್ಳಿ

ಈ ಕಾರ್ಯಕ್ರಮವು ಪವರ್ ಫ್ರೆಂಡ್ಸ್ ನ ಮುಖ್ಯಸ್ಥರಾದ ಅನಿಲ್ ಗೊನ್ಸಲ್ವಿಸ್ ರವರ ನೇತ್ರತ್ವದಲ್ಲಿ ಫಾತಿಮಾ ಮಾತೆ ಚರ್ಚ್ ನ ಧರ್ಮ ಗುರುಗಳಾದ ರೊಜಿನೋಲ್ಡ್ ಪಿಂಟೋ ರವರ ಶುಭ ಆಶೀರ್ವಾದದೊಂದಿಗೆ ಮಣಿಪಾಲ ಠಾಣೆಯ ಮುಖ್ಯ ಪೊಲೀಸ್ ಅಧಿಕಾರಿಯಾದ ಮಹೇಶ್ ಪ್ರಸಾದ್ ರವರ ಮುಖ್ಯ ಉಪಸ್ಥಿತಿಯಲ್ಲಿ,ಸಮಾಜಸೇವಕರಾದ ರಮೇಶ್ ಕಾಂಚನ್ ರವರು ಮುಖ್ಯ ಅತಿಥಿ ಆಗಿ ಭಾಗವಹಿಸಿದರು.ಅವರೊಂದಿಗೆ ಪೆರಂಪಳ್ಳಿಯ ರಿಕ್ಷಾ ಚಾಲಕ ಮಾಲಕ ಸಂಘದವರು ಸ್ಥಳೀಯ ಸಂಘ ಸಂಸ್ಥೆಯ ಅಧ್ಯಕ್ಷರು ಹಾಗೂ ಸರ್ವ ಸದ್ಯಸರೊಂದಿಗೆ ಊರಿನ ಎಲ್ಲಾ ನಾಗರಿಕರು ಭಾಗವಹಿಸಿ,ಕಾರ್ಯಕ್ರಮವನ್ನು ಕೃಷಿಕ ಸಂಘದ ಮಾಜಿ ಅಧ್ಯಕ್ಷರಾದ ಸುಬ್ರಹ್ಮಣ್ಯ ಶ್ರೀಯಾನ್ ಕಾರ್ಯಕ್ರಮವನ್ನು ನಿರೂಪಿಸಿ,ಸ್ವಾಗತಿಸಿ,ವಂದಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now