
ಶಿರ್ವ: ವಿಲಿಯಂ ಕಾಸ್ತಲಿನೋ, ಮೂಡುಬೆಳ್ಳೆ,(42) ರವರು ಬೆಳ್ಳೆ ಗ್ರಾಮದ ಮೂಡುಬೆಳ್ಳೆ ನಿವಾಸಿಯಾಗಿರುತ್ತಾರೆ. ವಿಲಿಯಂ ಕ್ಯಾಸ್ತಲಿನೋರವರು 2022 ರಲ್ಲಿ ರಸ್ತೆ ಅಪಘಾತದಿಂದ ತಲೆಗೆ ಪೆಟ್ಟಾಗಿದ್ದು ಬಳಿಕ ಪಿಟ್ಸ್ ಖಾಯಿಲೆಯಿಂದ ಬಳಲುತ್ತಿದ್ದು ಈ ಬಗ್ಗೆ ಮಣಿಪಾಲ ಕೆ ಎಂ ಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡಿದ್ದು, ವಿಲಿಯಂ ರವರ ಪತ್ನಿ ತನ್ನ ಮಗುವಿನೊಂದಿಗೆ ತಾಯಿ ಮನೆಯಲ್ಲಿ ವಾಸವಿದ್ದು ಆಗಾಗ ಗಂಡನ ಮನೆಗೆ ಬಂದು ಗಂಡನನ್ನು ಉಪಚರಿಸಿ ಹೋಗುತ್ತಿರುವುದಾಗಿದೆ. ವಿಲಿಯಂ ಕ್ಯಾಸ್ತಲಿನೋ ರವರು ದಿನಾಂಕ:01.11.2026 ರಂದು ಸಂಜೆ 06.00 ಗಂಟೆಯಿಂದ ದಿನಾಂಕ:08.11.2026 ರಂದು ಸಂಜೆ 06.30 ಗಂಟೆಯ ನಡುವಿನ ಸಮಯದಲ್ಲಿ ತನ್ನ ವಾಸ್ತವ್ಯದ ಮನೆಯಲ್ಲಿ ಪಿಟ್ಸ್ ಕಾಯಿಲೆ ಅಥವಾ ಬೇರೆ ಯಾವುದೋ ಕಾಯಿಲೆ ಉಲ್ಬಣಗೊಂಡು ಮೃತಪಟ್ಟಿರುವುದಾಗಿದೆ. ಈ ಬಗ್ಗೆ ಶಿರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now