
ಹೆಬ್ರಿ : ಬೇಳಂಜೆ ದೂಪದಕಟ್ಟೆ ಸರಕಾರಿ ಕಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಅಲಯನ್ಸ್ ಕ್ಲಬ್ ಹೆಬ್ರಿ ಹಾಗೂ ಹೆಬ್ರಿ ಸಿಟಿ ವತಿಯಿಂದ ನೋಟ್ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡುವ ಕಾರ್ಯಕ್ರಮ ಜೂ.18 ರಂದು ಶಾಲೆಯಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶಾಲಾ ಮುಖ್ಯ ಶಿಕ್ಷಕಿ ಜಯಂತಿ ಯವರು ವಹಿಸಿ ಮಾತನಾಡಿ ಶಾಲೆಗೆ ಪರಿಸರ ದಿನಾಚರಣೆಯಂದು ಗಿಡಗಳನ್ನು ನೀಡಿ ಪರಿಸರ ದಿನಾಚರಣೆಯನ್ನು ಆಚರಿಸಿದ ಅಲಯನ್ಸ್ ಕ್ಲಬ್ ಈ ಬಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ಮತ್ತು ಕಲಿಕಾ ಸಾಮಗ್ರಿಗಳನ್ನು ನೀಡಿ ಸಹಾಯ ಮಾಡಿರುತ್ತದೆ ಎಂದರು.
ಅಲಯನ್ಸ್ ಕ್ಲಬ್ ಹೆಬ್ರಿ ಇದರ ಅಧ್ಯಕ್ಷರಾದ ಬಾಲಚಂದ್ರ. ಎಂ ಮಾತನಾಡಿ ಹೆಬ್ರಿ ವ್ಯಾಪ್ತಿಯ ಗ್ರಾಮೀಣ ಭಾಗದ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಗಳಿಗೆ ಆದ್ಯತೆ ನೀಡಿ ಕಲಿಕೆಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕೊಡುಗೆ ನೀಡುತ್ತಿದ್ದೇವೆ ಎಂದು ಹೇಳಿದರು.
ಅಲಯನ್ಸ್ ಜಿಲ್ಲಾ ಸಂಪುಟದ ಕಾರ್ಯದರ್ಶಿ ಕೆ. ರಾಮಚಂದ್ರ ಭಟ್, ಹೆಬ್ರಿ ಸಿಟಿ ಅಲಯನ್ಸ್ ಕ್ಲಬ್ ಸದಸ್ಯೆ ಪ್ರೇಮ. ಎಸ್. ಪಾಟೀಲ್, ಶಾಲಾ ಸಿ. ಆರ್. ಪಿ. ಪುಷ್ಪ ಉಪಸ್ಥಿತರಿದ್ದು ಮಾತನಾಡಿದರು.
ಪೋಷಕರು, ಶಾಲಾ ವಿದ್ಯಾರ್ಥಿಗಳು, ಅಲಯನ್ಸ್ ಕ್ಲಬ್ ನ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದು ಕಾರ್ಯಕ್ರಮ ಯಶಸ್ಸಿಗೆ ಸಹಕರಿಸಿದರು. ಶಾಲೆಯ ಪರವಾಗಿ ಅಲಯನ್ಸ್ ಕ್ಲಬ್ ಅದ್ಯಕ್ಷರಾದ ಬಾಲಚಂದ್ರ ಎಂ. ಇವರನ್ನು ಅಭಿನಂದಿಸಿದರು.
ಸಹ ಶಿಕ್ಷಕಿ ಶೋಭಾ ಸ್ವಾಗತಿಸಿ, ವಂದಿಸಿದರು.
ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now