
ಉದ್ಯಾವರ : SFX ಕ್ರಿಕೆಟರ್ಸ್ ಉದ್ಯಾವರದ ನೇತೃತ್ವದಲ್ಲಿ ಕ್ರೈಸ್ತ ಸಮಾಜ ಬಾಂಧವರಿಗಾಗಿ ಮೇ 24 ರಂದು ಆದಿತ್ಯವಾರ ಉದ್ಯಾವರದ ಪಂಚಾಯತ್ ಮೈದಾನದಲ್ಲಿ 40 ಗಜಗಳ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಕೂಟವನ್ನು ಹಮ್ಮಿಕೊಳ್ಳಲಾಗಿದೆ.
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಅಂತರ್ ಚರ್ಚ್ ವ್ಯಾಪ್ತಿಯ ತಂಡಗಳಿಗೆ ಪ್ರವೇಶ ಇರುವ ಈ ಕ್ರಿಕೆಟ್ ಪಂದ್ಯಕೂಟವು 18 ತಂಡಗಳಿಗೆ ಮಾತ್ರ ಅವಕಾಶ ಇರುತ್ತದೆ. ಪ್ರಥಮ ಸ್ಥಾನ ವಿಜೇತ ತಂಡವು ರೂ. 25000/- ನಗುದು ಮತ್ತು ಶಾಶ್ವತ ಫಲಕ, ದ್ವಿತೀಯ ಸ್ಥಾನಿ ವಿಜೇತ ತಂಡವು ರೂ. 15000/- ನಗದು ಮತ್ತು ಶಾಶ್ವತ ಫಲಕವನ್ನು ಪಡೆಯಲಿದೆ. ಪ್ರತಿಪಂಜದ ಪಂದ್ಯ ಶ್ರೇಷ್ಠ ಆಟಗಾರನಿಗೆ 5 ಕೆಜಿ ಅಕ್ಕಿ ಬ್ಯಾಗ್, ಸರಣಿ ಶ್ರೇಷ್ಠ ಆಟಗಾರನಿಗೆ 25 ಕೆಜಿ ಅಕ್ಕಿ ಬ್ಯಾಗ್ ದೊರಕಲಿದೆ. ಆಸಕ್ತ ಕ್ರೈಸ್ತ ಸಮಾಜದ ತಂಡಗಳು ಹೆಸರು ನೋಂದಾಯಿಸಲು ಕೊನೆಯ ದಿನಾಂಕ ಮೇ 19 ನಿಗದಿಪಡಿಸಲಾಗಿದೆ.
ನಮ್ಮ ವರದಿಗಾರರು
ಸ್ಟೀವನ್ ಕುಲಾಸೊ
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now