
ಉಡುಪಿ : ಪರಿಸರ ಸಂರಕ್ಷಣೆ ಮತ್ತು ಪರಿಸರದ ಮಹತ್ವದ ಬಗ್ಗೆ ಜಾಗೃತಿ ಮೂಡಿಸುವುದರ ನಿಟ್ಟಿನಲ್ಲಿ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ವತಿಯಿಂದ ವನಮಹೋತ್ಸವ ಕಾರ್ಯಕ್ರಮ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿದ ನಿವೃತ್ತ ದೈಹಿಕ ಶಿಕ್ಷಣ ಅಧಿಕಾರಿ ಬೊನವೆoಚರ್ ಮಸ್ಕರೇನಸ್ ಮತ್ತು ಉದ್ಯಾವರೈಟ್ಸ್ ದುಬೈ ಇದರ ಸದಸ್ಯ ಕ್ಲಾರೆನ್ಸ್ ಡಿಸೋಜಾ ಜೊತೆಯಾಗಿ ಲಯನ್ ಕ್ಲಬ್ ಉದ್ಯಾವರ ಸನ್ ಶೈನ್ ಕಾರ್ಯದರ್ಶಿ ಲಯನ್ ಜೋನ್ ಗೋಮ್ಸ್ ಇವರ ಮನೆಯ ವಠಾರದಲ್ಲಿ ಸಾಗುವಾನಿ ಗಿಡ ನೆಡುವುದರ ಮೂಲಕ ವನಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಕ್ಲಾರೆನ್ಸ್ ಡಿಸೋಜಾ, ಪರಿಸರದ ಸಮತೋಲನಕ್ಕಾಗಿ ವನಮಹೋತ್ಸವ ಕಾರ್ಯಕ್ರಮ ಅರ್ಥಪೂರ್ಣವಾದದು. ಕೇವಲ ವನಮಹೋತ್ಸವ ಕಾರ್ಯಕ್ರಮ ನಡೆಸುವುದು ಮಾತ್ರವಲ್ಲದೆ ಆ ಗಿಡ ಮರವಾಗಿ ಬೆಳೆಸುವಲ್ಲಿಯೂ ನಮ್ಮ ಪ್ರಯತ್ನವಿರಬೇಕು. ನಾವು ಇತರರಿಗೆ ಇಂತಹ ಕಾರ್ಯಕ್ರಮಗಳು ಮೂಲಕ ಮಾದರಿಯಾಗಬೇಕಾದರೆ, ಮೊದಲು ನಮ್ಮ ಮನೆಯ ವಟಾರದಲ್ಲಿ ಗಿಡವನ್ನು ನೆಡಬೇಕು. ಆಗ ಮಾತ್ರ ಇತರರಿಗೆ ನಾವು ಪ್ರೇರಣೆಯಾಗಬಹುದು ಎಂದರು.
ಈ ಸಂದರ್ಭದಲ್ಲಿ ಕ್ಲಬ್ಬಿನ ಸದಸ್ಯರಿಗೆ ಉತ್ತಮ ತಳಿಯ ಗಿಡಗಳನ್ನು ನೀಡಲಾಯಿತು. ಲಯನ್ಸ್ ಕ್ಲಬ್ ಉದ್ಯಾವರ ಸನ್ ಶೈನ್ ಅಧ್ಯಕ್ಷ ಲಯನ್ ರೋಯ್ಸ್ ಫೆರ್ನಾಂಡಿಸ್ ಸ್ವಾಗತಿಸಿದರೆ, ಕೋಶಾಧಿಕಾರಿ ಲಯನ್ ವಿಲ್ಫ್ರೆಡ್ ಡಿಸೋಜಾ ಧನ್ಯವಾದ ಸಮರ್ಪಿಸಿದರು. ಲಯನ್ ಸ್ಟೀವನ್ ಕುಲಾಸೊ ಉದ್ಯಾವರ ಕಾರ್ಯಕ್ರಮ ನಿರೂಪಿಸಿದರು.

Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now