
ಶಿರ್ವ ಸೆ.14ರಿಂದ ಸೆ.16ರ ವರೆಗೆ ಮೂರು ದಿನಗಳ ಕಾಲ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಶಿರ್ವ- ಮಂಚಕಲ್ ಬಸ್ ನಿಲ್ದಾಣ ಬಳಿಯ ವೇದಿಕೆಯಲ್ಲಿ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಭಕ್ತಿಭಾವದಿಂದ ಆಚರಿಸಲಾಯಿತು.

ಸೆ.14ರಂದು ಸೋಮವಾರದಿಂದ ಸೆ.16ರಂದು ಬುಧವಾರದವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಸಾರ್ವಜನಿಕರು ಹಾಗೂ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದರು.
ಉತ್ಸವದ ಅಂಗವಾಗಿ ಸೆ.15ರಂದು ಮಂಗಳವಾರ ಮಧ್ಯಾಹ್ನ 12.30ಕ್ಕೆ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸರಿ ಸುಮಾರು 3500 ಭಕ್ತರು ಅನ್ನ ಪ್ರಸಾದವನ್ನು ಸ್ವೀಕರಿಸಿದರು. ಗಣೇಶೋತ್ಸವದ ಪ್ರಯುಕ್ತ ನಡೆದ ಧಾರ್ಮಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಸಾರ್ವಜನಿಕರು ಪಾಲ್ಗೊಂಡು ಉತ್ಸವದ ಯಶಸ್ಸಿಗೆ ಪಾತ್ರರಾದರು.

ಹಿನ್ನೆಲೆ: ಬಾಲಗಂಗಾಧರ ತಿಲಕರು ಸ್ಥಾಪಿಸಿದ ಸ್ವಾತಂತ್ರ್ಯ ಹೋರಾಟದ ಬಗ್ಗೆ ಹಿಂದುಗಳ ಸಂಘಟನೆ ಅವಶ್ಯವೆಂದು ತಿಳಿದು ಸಾರ್ವಜನೀಕ ಶ್ರೀ ಗಣೇಶೋತ್ಸವವನ್ನು ದೇಶಾದ್ಯಂತ ಪ್ರಾರಂಭಿಸಿದವರು. ಅದೇ ರೀತಿ ಆಗಿನ ಶಿರ್ವಾ ಪೊಲೀಸ್ ಸಬ್ಇನ್ಸ್ಪೆಕ್ಟರ್ ಚೆನ್ನಪ್ಪ ರವರ ನೇತೃತ್ವದಲ್ಲಿ, ಗ್ರಾಮ ಪಂಚಾಯತ್ ಅಧ್ಯಕ್ಷರಾದ ಪಿ. ಸೀತಾರಾಮ ಎಂ. ಶೆಟ್ಟಿ, ಉದ್ಯಮಿ ಕೆ. ತ್ರಿವಿಕ್ರಮ ಕಾಮತ್ ಹಾಗೂ ಗ್ರಾಮದ ಹಿರಿಯರ ಸಹಕಾರದೊಂದಿಗೆ 1981ರಲ್ಲಿ ಶಿರ್ವಾದಲ್ಲಿ ಸಾರ್ವಜನಿಕ ಶ್ರೀ ಗಣೇಶೋತ್ಸವವನ್ನು ಆರಂಭಿಸಲಾಯಿತು.

ಈವರೆಗೆ ಗಣೇಶೋತ್ಸವದ ಯಶಸ್ಸಿಗೆ ಕೈಜೋಡಿಸಿದ ಎಲ್ಲ ಹಿರಿಯರು ಹಾಗೂ ಸಮಿತಿಯ ಪದಾಧಿಕಾರಿಗಳನ್ನು ಸ್ಮರಿಸಿಕೊಳ್ಳಲಾಗಿದ್ದು, 46ನೇ ವರ್ಷದ ಗಣೇಶೋತ್ಸವದವರೆಗೂ ಈ ಸೇವಾ ಪರಂಪರೆಯನ್ನು ಮುಂದುವರಿಸಿಕೊಂಡು ಬರಲಾಗಿದೆ. ಇಂದಿಗೂ ಗ್ರಾಮದ ಹಿರಿಯರು, ಯುವಕರು ಹಾಗೂ ಸಾರ್ವಜನಿಕರ ಸಹಕಾರದಿಂದ ಗಣೇಶೋತ್ಸವವನ್ನು ಪ್ರತಿವರ್ಷ ಶ್ರದ್ಧಾ-ಭಕ್ತಿಯಿಂದ ಹಾಗೂ ಸಂಭ್ರಮದಿಂದ ಆಚರಿಸಲಾಗುತ್ತಿದೆ.

ಮೂರನೇ ದಿನ ಕಾರ್ಯಕ್ರಮದಲ್ಲಿ ಸಂಜೆ 4.00ಕ್ಕೆ ಪ್ರಧಾನ ಅರ್ಚಕರಾದ ಕೇಂಜ ಶ್ರೀಧರ ತಂತ್ರಿ ಇವರಿಂದ ವಿಸರ್ಜನಾ ಪೂಜೆ ನಡೆಯಿತು. ಬಳಿಕ ಪ್ರಸಾದ ವಿತರಣೆ ಹಾಗೂ ಗಣಪತಿ ಮೂರ್ತಿಯ ಶೋಭಾಯಾತ್ರೆ ಪೇಟೆಯಿಂದ ಶ್ರೀ ಮಹಾಲಸ ನಾರಾಯಣಿ ದೇವಸ್ಥಾನದವರೆಗೆ ನಡೆಯಿತು. ವಿವಿಧ ವಾದ್ಯಗಳೊಂದಿಗೆ ಭಕ್ತಿಭಾವದಿಂದ ಶೋಭಾಯಾತ್ರೆಯಲ್ಲಿ ಸಾರ್ವಜನಿಕರು ಹಾಗೂ ಭಕ್ತರು ಪಾಲ್ಗೊಂಡಿದ್ದರು.ಕುಣಿತ ಭಜನಾ ತಂಡಗಳೊಂದಿಗೆ ವೈಭವದ ಮೆರವಣಿಗೆಯ ಮೂಲಕ ಸಾಗಿ, ಶ್ರೀ ಮಹಾಲಸಾ ನಾರಾಯಣೀ ದೇವಸ್ಥಾನದಲ್ಲಿ ಅರ್ಚಕರಾದ ಶ್ರೀ ರಘುರಾಮ ಶಣೈ ಆರತಿಯನ್ನು ಬೆಳಗಿಸಿ ನಂತರ ಕೆರೆಯಲ್ಲಿ ಜಲಸ್ತಂಭನದೊಂದಿಗೆ ಮುಕ್ತಾಯವಾಯಿತು.

ಸಾರ್ವಜನಿಕ ಶ್ರೀ ಗಣೋತ್ಸವ ಸಮಿತಿ ಶಿರ್ವ ಇದರ ಅಧ್ಯಕ್ಷರಾದ ವಿಠಲ ಬಿ. ಅಂಚನ್ , ಉಪಾಧ್ಯಕ್ಷರಾದ ಗೋವಿಂದ ಜಿ. ಕುಂದರ್, ಕಾರ್ಯದರ್ಶಿಯವರಾದ ಪ್ರಶಾಂತ್ ಆಚಾರ್ಯ ,
ಜತೆ ಕಾರ್ಯದರ್ಶಿಯಾದ ವಿಷ್ಣುಮೂರ್ತಿ ಸರಳಾಯ,
ಕೋಶಾಧಿಕಾರಿಯಾದ ಪ್ರಭಾಕರ ರಾವ್
ಸಮಿತಿ ಸದಸ್ಯರುಗಳಾದ
ಕೊಲಬೆಟ್ಟು ರವೀಂದ್ರ ಶೆಟ್ಟಿ ,ಕೆ. ಸುಂದರ ಪ್ರಭು,ಅನಂತ ಮೂಡಿತ್ತಾಯ,ಗಿರಿಧರ ಎಸ್. ಪ್ರಭು, ಪ್ರಸಾದ್ ಶೆಟ್ಟಿ ವಳದೂರು, ಉಮೇಶ್ ಆಚಾರ್ಯ,
ರಾಜೇಶ್ ನಾಯ್ಕ್, ರಮೇಶ್ ಸಾಲ್ಯಾನ್ ,ಉದಯ ಬಿ. ಅಂಚನ್, ದಿನೇಶ್ ರಾವ್, ಗಣೇಶ್ ಆಚಾರ್ಯ,
ದಿನೇಶ್ ಪೂಜಾರಿ, ಶೈಲೇಶ್ ಕೊಟ್ಟಾನ್, ಪ್ರಶಾಂತ್ ಪಾಲೆಮೆ, ಪ್ರಕಾಶ್ ಕೋಟ್ಯಾನ್,
ಚಂದ್ರಹಾಸ ಶೆಟ್ಟಿ, ಉಮೇಶ್ ನಾಯ್ಕ್, ಸದಾನಂದ ಶೆಟ್ಟಿಗಾರ್, ಸ್ಪೂರ್ತಿ ಪಿ. ಶೆಟ್ಟಿ , ಗೌರಿ ಶಣೈ, ಪ್ರಮುಖರಾದ ಶ್ರೀನಿವಾಸ್ ಶಣೈ, ಅನಂತರಾಂ ಶಣೈ, ಟೆಂಪೋ ಚಾಲಕರು ಹಾಗೂ ಮಾಲಕರು ಉಪಸ್ಥಿತರಿದ್ದರು.
ಮೆರವಣಿಗೆ ಹಾಗೂ ವಾಹನ ಸಂಚಾರದ ಸುವ್ಯವಸ್ಥೆಯನ್ನು ಶಿರ್ವ ಪೊಲೀಸ್ ಠಾಣಾ ಠಾಣಾಧಿಕಾರಿ ಮಂಜುನಾಥ ಮರಬದ ಇವರ ನೇತೃತ್ವದಲ್ಲಿ ಠಾಣಾ ಪೊಲೀಸ್ ಸಿಬ್ಬಂದಿ ಅಚ್ಚುಕಟ್ಟಾಗಿ ನೆರವೇರಿಸಿದರು.




Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now