ತಾಲೂಕು ಮಟ್ಟದ ಆಶುಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಸಿ.ವಿ.ಎಸ್‌.ಕೆ ವಿದ್ಯಾರ್ಥಿಗಳ ಸಾಧನೆ

ತಾಲೂಕು ಮಟ್ಟದ ಆಶುಭಾಷಣ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ಸಿ.ವಿ.ಎಸ್‌.ಕೆ ವಿದ್ಯಾರ್ಥಿಗಳ ಸಾಧನೆ
0Shares

ಕುಮಟಾ, ಸೆ.16: ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಾರ್ಯಾಲಯ, ಉತ್ತರ ಕನ್ನಡ ಹಾಗೂ ಉಪ-ಪ್ರಾದೇಶಿಕ ವಿಜ್ಞಾನ ಕೇಂದ್ರ, ಕಾರವಾರ ಇವರ ಸಹಯೋಗದಲ್ಲಿ ಡಾ. ವಿಕ್ರಂ ಸಾರಾಭಾಯಿ ಹಾಗೂ ರಾಷ್ಟ್ರೀಯ ಬಾಹ್ಯಾಕಾಶ ದಿನಾಚರಣೆ ಪ್ರಯುಕ್ತ ಪ್ರೌಢಶಾಲಾ ವಿದ್ಯಾರ್ಥಿಗಳಿಗಾಗಿ ತಾಲೂಕು ಮಟ್ಟದ ಪ್ರಬಂಧ ಹಾಗೂ ಆಶುಭಾಷಣ ಸ್ಪರ್ಧೆಯನ್ನು ಕುಮಟಾದ ಗಿಬ್ ಬಾಲಕಿಯರ ಪ್ರೌಢಶಾಲೆಯಲ್ಲಿ ಆಯೋಜಿಸಲಾಗಿತ್ತು.
ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಭಾಗವಹಿಸಿದ್ದ ಈ ಸ್ಪರ್ಧೆಯಲ್ಲಿ ಕುಮಟಾದ ಕೊಂಕಣ ಎಜ್ಯುಕೇಶನ್ ಟ್ರಸ್ಟ್‌ನ ಸಿ.ವಿ.ಎಸ್‌.ಕೆ ಪ್ರೌಢಶಾಲೆಯ ವಿದ್ಯಾರ್ಥಿಗಳು ಉತ್ತಮ ಸಾಧನೆಗೈದು ಶಾಲೆಗೆ ಕೀರ್ತಿ ತಂದಿದ್ದಾರೆ.

ಆಶುಭಾಷಣ ಸ್ಪರ್ಧೆ

  • ಸಿದ್ಧಾರ್ಥ ನಾಯಕ – ಪ್ರಥಮ ಸ್ಥಾನ
  • ಓಂಕಾರ ಭಾಗ್ವತ್ – ತೃತೀಯ ಸ್ಥಾನ. ಪ್ರಬಂಧ ಸ್ಪರ್ಧೆ
  • ವರ್ಷಾ ಚಿತ್ರಿಗಿ – ಪ್ರಥಮ ಸ್ಥಾನ.
  • ರಕ್ಷಾ ಹೆಗಡೆ – ದ್ವಿತೀಯ ಸ್ಥಾನ.

ತಾಲೂಕಿನ ವಿವಿಧ ಶಾಲೆಗಳ ವಿದ್ಯಾರ್ಥಿಗಳೊಂದಿಗೆ ಉತ್ತಮ ಪೈಪೋಟಿ ನೀಡಿ ಈ ಅಪೂರ್ವ ಸಾಧನೆ ಮಾಡಿರುವ ವಿದ್ಯಾರ್ಥಿಗಳು ಶಾಲೆ ಹಾಗೂ ತಾಲೂಕಿಗೆ ಹೆಮ್ಮೆ ತಂದಿದ್ದಾರೆ.

ಈ ಸಾಧಕ ವಿದ್ಯಾರ್ಥಿಗಳಿಗೆ ಹಾಗೂ ಅವರನ್ನು ಮಾರ್ಗದರ್ಶಿಸಿದ ಶಿಕ್ಷಕರಿಗೆ ಶಾಲೆಯ ಆಡಳಿತ ಮಂಡಳಿ, ಪ್ರಾಂಶುಪಾಲರು, ಶೈಕ್ಷಣಿಕ ಸಲಹೆಗಾರರು, ಶಿಕ್ಷಕ ವೃಂದ ಹಾಗೂ ಸಿಬ್ಬಂದಿ ವರ್ಗದವರು ಅಭಿನಂದನೆ ಸಲ್ಲಿಸಿ, ಮುಂದಿನ ದಿನಗಳಲ್ಲಿಯೂ ಇನ್ನಷ್ಟು ಯಶಸ್ಸು ಗಳಿಸಲಿ ಎಂದು ಶುಭ ಹಾರೈಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now