
ಆನೇಕಲ್ : ಹೆಬ್ಬಗೋಡಿ ಮುತ್ಯಾಲಮ್ಮ ದೇವಿ ಟ್ರಸ್ಟ್ ಹಾಗೂ ಗ್ರಾಮಸ್ಥರ ವತಿಯಿಂದ ಮಳೆಗಾಗಿ ಮಳೆರಾಯನ ಪೂಜೆ ಮತ್ತು ಧಾರ್ಮಿಕ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು.
ಹೆಬ್ಬಗೋಡಿ ಗ್ರಾಮಸ್ಥರು ಮಳೆರಾಯನ ಮೂರ್ತಿಗೆ ಪೂಜೆ ಸಲ್ಲಿಸಿ ಉಯ್ಯೊ ಉಯ್ಯೋ ಮಳೆರಾಯ ಎಂದು ಕೂಗಿ ಭಕ್ತಿ ಸಮರ್ಪಿಸಿದರು.
ಹೆಬ್ಬಗೋಡಿಯ ವಿವಿಧೆಡೆ ಮಳೆರಾಯನಿಗೆ ವಿಶೇಷ ಪೂಜೆ ಸಲ್ಲಿಸಲಾಯಿತು. ರಾಜ್ಯದಲ್ಲಿ ಉತ್ತಮ ಮಳೆಯಾಗಲಿ, ಬೆಳೆಗಳು ಸಮೃದ್ಧಿಯಾಗಲಿ, ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಲಿ ಎಂಬ ಉದ್ದೇಶದಿಂದ ಮಳೆರಾಯನ ಪೂಜಿಸಲಾಗಿದೆ ಎಂದು ಮುತ್ಯಾಲಮ್ಮ ದೇವಿ ಟ್ರಸ್ಟ್ ಪದಾಧಿಕಾರಿಗಳು ತಿಳಿಸಿದರು.
ಮಳೆರಾಯನನ್ನು ಹೊತ್ತು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಿದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now