ಸಿಎಂ ಆದ್ರೂ ಮುಗಿದಿಲ್ಲ ವಿಜಯ್ ಆ್ಯಕ್ಟಿಂಗ್: ಮತ್ತೆ ಕ್ಯಾಮೆರಾ ಮುಂದೆ ಬರಲು ಸಜ್ಜಾದ ತಮಿಳುನಾಡು ಮುಖ್ಯಮಂತ್ರಿ!

ಸಿಎಂ ಆದ್ರೂ ಮುಗಿದಿಲ್ಲ ವಿಜಯ್ ಆ್ಯಕ್ಟಿಂಗ್: ಮತ್ತೆ ಕ್ಯಾಮೆರಾ ಮುಂದೆ ಬರಲು ಸಜ್ಜಾದ ತಮಿಳುನಾಡು ಮುಖ್ಯಮಂತ್ರಿ!
0Shares

ಚೆನ್ನೈ: ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿರುವ ದಳಪತಿ ವಿಜಯ್ (Cm Vijay) ಸದ್ಯ ರಾಜ್ಯದ ಆಡಳಿತ ಕಾರ್ಯಗಳಲ್ಲಿ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ.

ಈಗಾಗಲೇ ಸಿನಿಮಾ ರಂಗಕ್ಕೆ ವಿದಾಯ ಘೋಷಿಸಿರುವ ಅವರು, ಮತ್ತೆ ಬಣ್ಣದ ಲೋಕಕ್ಕೆ ಮರಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದರು. ಆದರೆ, ಅವರ ಅಭಿಮಾನಿಗಳಿಗೆ ಮತ್ತು ಜನರಿಗೆ ಸರ್ಪ್ರೈಸ್ ನೀಡುವಂತೆ ವಿಜಯ್ ಮತ್ತೆ ಕ್ಯಾಮೆರಾ ಎದುರಿಗೆ ಬರಲು ಸಜ್ಜಾಗಿದ್ದಾರೆ.

ಸಾಮಾನ್ಯವಾಗಿ ಸರ್ಕಾರಗಳು ತಮ್ಮ ವಿವಿಧ ಜನಕಲ್ಯಾಣ ಯೋಜನೆಗಳನ್ನು ಸಾರ್ವಜನಿಕರಿಗೆ ತಲುಪಿಸಲು ಹೆಸರಾಂತ ನಟ-ನಟಿಯರನ್ನು ರಾಯಭಾರಿಗಳನ್ನಾಗಿ (Brand Ambassadors) ಬಳಸಿಕೊಳ್ಳುತ್ತವೆ. ಆದರೆ ತಮಿಳುನಾಡಿನಲ್ಲಿ ಸ್ವತಃ ಮುಖ್ಯಮಂತ್ರಿ ವಿಜಯ್ ಅವರಿಗಿಂತ ದೊಡ್ಡ ಮಟ್ಟದ ಜನಪ್ರಿಯತೆ ಹೊಂದಿರುವ ವ್ಯಕ್ತಿ ಮತ್ತೊಬ್ಬರಿಲ್ಲ. ಹೀಗಾಗಿ, ಸರ್ಕಾರಿ ಜಾಹೀರಾತೊಂದರಲ್ಲಿ ಸಿಎಂ ವಿಜಯ್ ಅವರೇ ಖುದ್ದಾಗಿ ನಟಿಸಲು ನಿರ್ಧರಿಸಿದ್ದಾರೆ ಎಂದು ವರದಿಯಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now