
ಕೊಳಲಗಿರಿ ಪಟಾಕಿ ಮಾರಾಟ
ಪಟಾಕಿ ಖರೀದಿಸಿರಿ ಅಶಕ್ತರ ನೆರವಿಗಾಗಿ ಪ್ರೋತ್ಸಾಹಿಸಿರಿ
ಉಪ್ಪೂರು ಗ್ರಾಮ 1ನೇ ವಾರ್ಡ್ ಅಭಿವೃದ್ಧಿ ಸಮಿತಿಯ ವತಿಯಿಂದ ಅಸಹಾಯಕ ಅಶಕ್ತರ ಸಹಾಯಾರ್ಥದ ಪಟಾಕಿ ಮಾರಾಟ ಅಂಗಡಿ
ಉಪ್ಪೂರು ಗ್ರಾಮ ಕೊಳಲಗಿರಿ 1ನೇ ವಾರ್ಡ್ ಸಮಿತಿಯ ವತಿಯಿಂದ ಅಶ್ವಿನ್ ರೋಚ್ ಸಂಚಾಲಕತ್ವದಲ್ಲಿ ಸಮಾನ ಮನಸ್ಕ ಯುವಕರ ಒಗ್ಗೂಡುವಿಕೆಯಿಂದ ಸತತ ನಾಲ್ಕು ವರ್ಷಗಳಿಂದ ಹತ್ತು ಹಲವಾರು ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಅಪಘಾತ ವಲಯಕ್ಕೆ ಸೂಚನಾ ಫಲಕ , ಬ್ಯಾರಿಕೆಟ್ ಅಳವಡಿಕೆ, ಅಸಹಾಯಕರಿಗೆ ನೆರವು, ರೋಗಿಗಳಿಗೆ ಚಿಕಿತ್ಸೆಗಾಗಿ ನೆರವು, ರಕ್ತದಾನ, ಆಪತ್ಕಾಲದಲ್ಲಿ ಸ್ವಯಂಸೇವಕರಾಗಿ ಸೇವೆ, ಕಡು ಬಡವರಿಗೆ ಮನೆ ದುರಸ್ತಿ ಮಾಡಿಕೊಡಲಾಗಿದೆ. ದೀಪಾವಳಿ, ಕ್ರಿಸ್ಮಸ್, ಮಕ್ಕಳ ದಿನಾಚರಣೆ, ಶಿಕ್ಷಕರ ದಿನಾಚರಣೆ ಮುಂತಾದ ಹಬ್ಬ ಹರಿದಿನಗಳನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡು ಬರುತ್ತಿದ್ದಾರೆ. ಸಾರ್ವಜನಿಕರಿಗಾಗಿ ಮಾಹಿತಿ ಕಾರ್ಯಾಗಾರ , ವಿವಿಧ ಮನೋರಂಜನೆ , ಕ್ರೀಡೆ, ಪಂದ್ಯಾವಳಿಗಳು, ಕೃಷ್ಣ ವೇಷ ಸ್ಪರ್ಧೆ, ಗೂಡು ದೀಪ ಸ್ಪರ್ಧೆ, ಸಂಗೀತ ಸ್ಪರ್ಧೆ, ಐಪಿಎಲ್ ಮಾದರಿಯಂತೆ ಬಿಡ್ಡಿಂಗ್ ಮುಖಾಂತರ ಆಟಗಾರರನ್ನು ಆಯ್ಕೆ ಮಾಡಿ ಕೆಪಿಎಲ್ ಕ್ರಿಕೆಟ್ ಪಂದ್ಯಾವಳಿ ಜನರ ಮೆಚ್ಚುಗೆ ಪಡೆದಿದೆ. ಪ್ರಸ್ತುತ
ಮಾದರಿ ಕಾರ್ಯಕ್ರಮವಾಗಿ
ಬಡ ಅಸಹಾಯಕ ಅಶಕ್ತರ ಸಹಾಯಾರ್ಥಕ್ಕೆ ಪಟಾಕಿ ಮಾರಾಟ ಅಂಗಡಿ ತೆರೆಯಲಾಗಿದೆ.
1ನೇ ವಾರ್ಡ್ ಅಭಿವೃದ್ಧಿ ಸಮಿತಿಯಿಂದ ದೀಪಾವಳಿ ಹಬ್ಬದ ಪ್ರಯುಕ್ತ
ಕೊಳಲಗಿರಿ ಸಂತೆ ಮಾರ್ಕೆಟ್ ಬಳಿ ಪಟಾಕಿ ಅಂಗಡಿಯನ್ನು ತೆರೆಯಲಾಗಿದೆ. ಸಮಾಜಮುಖಿ ಮಾದರಿ ಕಾರ್ಯಕ್ರಮವಾಗಿ ಯಾವುದೇ ಪ್ರತಿಫಲ ಅಪೇಕ್ಷೆ ಬಯಸದೆ ಯುವಕರ ತಂಡ ಮಾಡುವ ಕಾರ್ಯವೈಖರಿಗಾಗಿ ಈ ಪಟಾಕಿ ಅಂಗಡಿಗೆ ಬಂದು ಬೇಕಾದ ಪಟಾಕಿಯನ್ನು ಖರೀದಿಸಬೇಕಾಗಿ ಕೇಳಿಕೊಳ್ಳುತ್ತಿದ್ದಾರೆ.
ಕಡಿಮೆ ಹಾಗೂ ಆಕರ್ಷಕ ದರದಲ್ಲಿ ಉತ್ತಮ ಪಟಾಕಿಗಳು ಮಾರಾಟಕ್ಕಿದೆ
ರೂ. 1000/-ಮೊತ್ತದ ಪಟಾಕಿ ಖರೀದಿಸಿದ ಪ್ರತಿ ಗ್ರಾಹಕರಿಗೂ ಲಕ್ಕಿ ಕೂಪನ್ ಇರುತ್ತದೆ. ಕೂಪನ್ ಡ್ರಾ ಮೂಲಕ ಲಕ್ಕಿ ವಿನ್ನರ್ ಘೋಷಣೆ ಮಾಡಲಾಗುತ್ತದೆ.
ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : ಅಶ್ವಿನ್ ಪಿ. ರೋಚ್ : 9945354029
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now