
ಮುಂಬಯಿ, ಮೇ.೧೩: ಜಿಯೋ ಪೊಲಿಟಿಕ್ಸ್ ಹಾಗೂ ಭಾರತದ ಆಥಿಕತೆ ಸಂಬಂಧಿ ಪ್ರಧಾನಮಂತ್ರಿ ಮೋದಿ ಅವರು ಮೇ ೧೦ರಂದು ಮಾಡಿದ ಘೋಷಣೆಗಳು ಭಾರತದ ಆಥಿಕತೆಯನ್ನು ಇನ್ನಷ್ಟು ಬಲಿಷ್ಠ, ಸ್ವಾವಲಂಬಿ ಮತ್ತು ಭವಿಷ್ಯೋನ್ಮುಖವಾಗಿಸುವ ದೂರದೃಷ್ಟಿಯ ಕ್ರಮವಾಗಿದೆ. ಜಾಗತಿಕ ಮಟ್ಟದಲ್ಲಿ ಉಂಟಾಗುತ್ತಿರುವ ಅನಿಶ್ಚಿತತೆಗಳ ನಡುವೆಯೂ ಭಾರತವು ಆತ್ಮವಿಶ್ವಾಸದಿಂದ ಹಾಗೂ ಯೋಜಿತ ರೀತಿಯಲ್ಲಿ ಮುಂದುವರಿಯುತ್ತಿದೆ ಎಂಬುದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಆಥಿಕ ಪ್ರಕೋಷ್ಠದ ಸಂಚಾಲಕ ಸಿಎ| ಎಸ್.ಎಸ್ ನಾಯಕ್ ತಿಳಿಸಿದರು.
ಮಂಗಳೂರು ಪ್ರೆಸ್ ಕ್ಲಬ್‌ನಲ್ಲಿ ಇಂದಿಲ್ಲಿ ಬುಧವಾರ ನಡೆಸಿದ್ದ ಪತ್ರಿಕಾ ಗೋಷ್ಠಿಯನ್ನುದ್ದೇಶಿಸಿ ಸಿಎ| ಎಸ್.ಎಸ್ ನಾಯಕ್ ಮಾಹಿತಿಯನ್ನಿತ್ತು, ಭಾರತ ಇಂದು: ವಿಶ್ವದ ೫ನೆ ಆಥಿಕ ಶಕ್ತಿಯಾಗಿ ಭಾರತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕ ಶಕ್ತಿಯಾಗಿದ್ದು, ವಿಶ್ವದ ಅತಿದೊಡ್ಡ ಯುವಜನಸಂಖ್ಯೆ ಹೊಂದಿರುವ ದೇಶವಾಗಿದೆ. ಭಾರತದ ಜಿಡಿಪಿ ಈಗ ಸುಮಾರು ೪.೧೫ ಟ್ರಿಲಿಯನ್ ಡಾಲರ್ ಮಟ್ಟ ತಲುಪಿದ್ದು, ಮುಂದಿನ ಕೆಲವು ವರ್ಷಗಳಲ್ಲಿ ೫ ಟ್ರಿಲಿಯನ್ ಡಾಲರ್ ಆಥಿಕತೆಯ ಗುರಿಯತ್ತ ಸಾಗುತ್ತಿದೆ. ಇಂಧನ ಉಳಿತಾಯದ ಗುರಿ: ಭಾರತ ತನ್ನ ಅಗತ್ಯ ಕಚ್ಚಾ ತೈಲದ ಸುಮಾರು: ೮೫% ಕ್ಕಿಂತ ಹೆಚ್ಚು ಆಮದು ಮಾಡಿಕೊಳ್ಳುತ್ತದೆ. ಅದರ ಕಾರಣ ಸ್ವಲ್ಪ ಮಟ್ಟಿನ ಇಂಧನ ಉಳಿತಾಯವೂ ಸಾವಿರಾರು ಕೋಟಿ ರೂಪಾಯಿ ವಿದೇಶಿ ವಿನಿಮಯ ಉಳಿಸಬಹುದು ಎಂದರು.
ಕಳವಳಕಾರಿ ಹಾಗೂ ವಾಸ್ತವಿಕ ಅಂಶಗಳು : ಈಙ ೨೬ ರಲ್ಲಿ ಒಟ್ಟು ಆಮದು ಬಿಲ್ ೭೭೫ ಬಿಲಿಯನ್ ಡಾಲರ್ ಆಗಿದ್ದು , ನಾಲ್ಕು ಸರಕುಗಳ ಬೆಲೆ ಮಾತ್ರ ೨೪೦ ಬಿಲಿಯನ್ ಡಾಲರ್ ಆಗಿರುತ್ತದೆ. ಕಚ್ಚಾ ತೈಲ: $೧೩೫ ಬಿಲಿಯನ್, ಚಿನ್ನ: $೭೨ ಬಿಲಿಯನ್, ಸಸ್ಯಜನ್ಯ ಎಣ್ಣೆಗಳು: $೧೯ ಬಿಲಿಯನ್, ರಸಗೊಬ್ಬರಗಳು: $೧೪ ಬಿಲಿಯನ್. ಈ ನಾಲ್ಕು ವಸ್ತುಗಳು ಭಾರತದ ಒಟ್ಟು ಆಮದಿನ ಶೇಕಡಾ ೩೧.೧ ರಷ್ಟಿದೆ. ಒಟ್ಟು ಆಮದು ಬಿಲ್ನಲ್ಲಿ ಚಿನ್ನ ಮಾತ್ರ ಶೇಕಡಾ ೧೦ ರಷ್ಟಿದೆ. ಭಾರತವು ವಿಶ್ವದ ಅತಿ ದೊಡ್ಡ ಚಿನ್ನ ಬಳಕೆದಾರ ರಾಷ್ಟ್ರಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು ೭೦೦ ರಿಂದ ೯೦೦ ಟನ್ ಚಿನ್ನವನ್ನು ಭಾರತ ಆಮದು ಮಾಡಿಕೊಳ್ಳುತ್ತದೆ ಹಾಗೂ ಇದಕ್ಕಾಗಿ ೭೨ ಬಿಲಿಯನ್ ಡಾಲರ್ ವಿದೇಶಿ ವಿನಿಮಯ ವೆಚ್ಚವಾಗುತ್ತದೆ.
೨೦೨೪-೨೫ನೇ ಹಣಕಾಸು ವರ್ಷದಲ್ಲಿ ಭಾರತದ ವ್ಯಾಪಾರ ಕೊರತೆ ೯೫ ಬಿಲಿಯನ್ ಡಾಲರ್ ಆಗಿದ್ದು, ೨೦೨೫-೨೬ ರಲ್ಲಿ ೧೧೯ ಬಿಲಿಯನ್ ಡಾಲರ್ ಗೆ ಏರಿದೆ . ಹಾಗೆಯೆ ಚಾಲ್ತಿ ಖಾತೆ ಕೊರತೆಯು ೮೮ ಬಿಲಿಯನ್ ಡಾಲರ್ ಗೆ ಏರಿದ್ದು ಜಿ ಡಿ ಪಿ ಯ ೨.೧% ಆಗಿರುತ್ತದೆ . ಈ ಕೊರತೆಯನ್ನು ಜಿ ಡಿ ಪಿ ಯ ೧% ಕ್ಕಿಂತ ಕಡಿಮೆ ಇಳಿಸುವ ಅಗತ್ಯತೆ ಇದೆ. ಚಿನ್ನದ ಆಮದು ಶೇ. ೩೦-೪೦ ರಷ್ಟು ಕುಸಿದರೂ ಸಹ ೨೦-೨೫ ಬಿಲಿಯನ್ ಡಾಲರ್ಗಳನ್ನು ಉಳಿಸಬಹುದು. ೫೦% ಕುಸಿತವು ೩೬ ಬಿಲಿಯನ್ ಡಾಲರ್ಗಳನ್ನು ಉಳಿಸಬಹುದು.
ದೇಶದ ಅಡುಗೆ ಎಣ್ಣೆಯ ಬೇಡಿಕೆಯ ಸುಮಾರು ೫೫ ರಿಂದ ೬೦ ಶೇಕಡಾ ವಿದೇಶಗಳಿಂದ ಆಮದು ಆಗುತ್ತಿದೆ. ವಿಶೇಷವಾಗಿ Pಚಿಟm ಔiಟ, Suಟಿಜಿಟoತಿeಡಿ ಔiಟ ಮತ್ತು Soಥಿbeಚಿಟಿ ಔiಟ ಮೇಲಿನ ಅವಲಂಬನೆ ಹೆಚ್ಚಿದೆ. ಆದರೆ ಕೇಂದ್ರ ಸರ್ಕಾರದ ಓಚಿಣioಟಿಚಿಟ ಇಜibಟe ಔiಟ ಒissioಟಿ ಮೂಲಕ ದೇಶೀಯ ಎಣ್ಣೆ ಬೀಜ ಉತ್ಪಾದನೆಯನ್ನು ಹೆಚ್ಚಿಸುವ ಕಾರ್ಯ ವೇಗವಾಗಿ ನಡೆಯುತ್ತಿದೆ.
ಪೆಟ್ರೋಲ್ ಮತ್ತು ಡೀಸೆಲ್ ವಿಷಯಕ್ಕೆ ಬಂದರೆ ಭಾರತ ತನ್ನ ಅಗತ್ಯ ಕಚ್ಚಾ ತೈಲದ ೮೫ ಶೇಕಡಕ್ಕೂ ಹೆಚ್ಚು ಭಾಗವನ್ನು ಆಮದು ಮಾಡಿಕೊಳ್ಳುತ್ತದೆ.ಇಟeಛಿಣಡಿiಛಿ ಗಿehiಛಿಟe ಕ್ಷೇತ್ರದಲ್ಲಿ ಭಾರತ ವೇಗವಾಗಿ ಬೆಳೆಯುತ್ತಿದ್ದು, ಅhಚಿಡಿgiಟಿg Iಟಿಜಿಡಿಚಿsಣಡಿuಛಿಣuಡಿe, ಃಚಿಣಣeಡಿಥಿ ಒಚಿಟಿuಜಿಚಿಛಿಣuಡಿiಟಿg ಮತ್ತು ಖeಟಿeತಿಚಿbಟe ಇಟಿeಡಿgಥಿ ಕ್ಷೇತ್ರಗಳಿಗೆ ಭಾರಿ ಹೂಡಿಕೆ ಬರುತ್ತಿದೆ. Soಟಚಿಡಿ ಇಟಿeಡಿgಥಿ ಮತ್ತು ಉಡಿeeಟಿ ಊಥಿಜಡಿogeಟಿ ಕ್ಷೇತ್ರಗಳಲ್ಲಿ ಭಾರತ ಜಾಗತಿಕ ನಾಯಕತ್ವದತ್ತ ಹೆಜ್ಜೆ ಇಡುತ್ತಿದೆ.
ರಸಗೊಬ್ಬರ ಕ್ಷೇತ್ರದಲ್ಲಿಯೂ ಭಾರತ ಸ್ವಾವಲಂಬನೆಯತ್ತ ಸಾಗುತ್ತಿದೆ.ವಿಶೇಷವಾಗಿ Iಈಈಅಔ ಅಭಿವೃದ್ಧಿಪಡಿಸಿರುವ ಓಚಿಟಿo Uಡಿeಚಿ ಭಾರತಕ್ಕೆ ಹೊಸ ಆಶಾಕಿರಣವಾಗಿದೆ.
ರೂಪಾಯಿ ಮೌಲ್ಯ ಕುಸಿತ: ಅವಕಾಶಗಳು ಮತ್ತು ಸವಾಲುಗಳು. ರೂಪಾಯಿ ಕುಸಿತದ ಮುಖ್ಯ ಕಾರಣಗಳು: ಡಾಲರ್ ಬಲವರ್ಧನೆ: ಜಾಗತಿಕ ಮಾರುಕಟ್ಟೆಯಲ್ಲಿ ಅಮೆರಿಕನ್ ಡಾಲರ್ ಬಲಗೊಳ್ಳುತ್ತಿರುವುದು. ಹೆಚ್ಚುತ್ತಿರುವ ಆಮದು ವೆಚ್ಚ: ಕಚ್ಚಾ ತೈಲ, ಎಲೆಕ್ಟ್ರಾನಿಕ್ಸ್ ಮತ್ತು ಚಿನ್ನದ ಆಮದಿಗೆ ಹೆಚ್ಚಿನ ಡಾಲರ್ ಬೇಡಿಕೆ. ಬಂಡವಾಳ ಹೊರಹರಿವು (ಈPI): ವಿದೇಶಿ ಹೂಡಿಕೆದಾರರು ಭಾರತೀಯ ಮಾರುಕಟ್ಟೆಯಿಂದ ತಮ್ಮ ಹಣವನ್ನು ಹಿಂಪಡೆಯುತ್ತಿರುವುದು. ಹಣದುಬ್ಬರ: ದೇಶೀಯವಾಗಿ ಬೆಲೆ ಏರಿಕೆ. ಅವಕಾಶಗಳು ಮತ್ತು ಧನಾತ್ಮಕ ಪರಿಣಾಮಗಳು: ರಫ್ತಿಗೆ ಉತ್ತೇಜನ: ರೂಪಾಯಿ ಮೌಲ್ಯ ಕುಸಿದಾಗ, ಭಾರತದ ಸರಕು ಮತ್ತು ಸೇವೆಗಳು ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಅಗ್ಗವಾಗುತ್ತವೆ. ಇದು ಐಟಿ (Iಖಿ), ಫಾರ್ಮಾ (ಔಷಧ) ಮತ್ತು ಜವಳಿ ಉದ್ಯಮಗಳಿಗೆ ಹೆಚ್ಚಿನ ರಫ್ತು ಆದೇಶಗಳನ್ನು ತರುತ್ತದೆ.
ಓಖIಗಳಿಗೆ ಲಾಭ: ವಿದೇಶದಲ್ಲಿರುವ ಭಾರತೀಯರು (ಓಖI) ತಮ್ಮ ಹಣವನ್ನು ಭಾರತಕ್ಕೆ ಕಳುಹಿಸಿದಾಗ, ಹೆಚ್ಚಿನ ರೂಪಾಯಿ ಮೌಲ್ಯವನ್ನು ಪಡೆಯುತ್ತಾರೆ. ಸ್ಥಳೀಯ ಉತ್ಪಾದನೆಗೆ ಉತ್ತೇಜನ: ಆಮದು ದುಬಾರಿಯಾಗುವುದರಿಂದ, ಸ್ಥಳೀಯವಾಗಿ ವಸ್ತುಗಳನ್ನು ತಯಾರಿಸಲು (ಒಚಿಞe iಟಿ Iಟಿಜiಚಿ) ಪ್ರೋತ್ಸಾಹ ಸಿಗುತ್ತದೆ.
ಸವಾಲುಗಳು: ಆಮದು ಹಣದುಬ್ಬರ: ಕಚ್ಚಾ ತೈಲ ಮತ್ತು ಯಂತ್ರೋಪಕರಣಗಳ ಆಮದು ದುಬಾರಿಯಾಗುವುದರಿಂದ, ದೇಶದಲ್ಲಿ ಇಂಧನ ಮತ್ತು ಇತರೆ ವಸ್ತುಗಳ ಬೆಲೆ ಹೆಚ್ಚಾಗುತ್ತದೆ. ವಿದೇಶಿ ಸಾಲದ ಹೊರೆ: ವಿದೇಶಿ ಕರೆನ್ಸಿಯಲ್ಲಿ ಸಾಲ ಪಡೆದಿರುವ ಕಂಪನಿಗಳಿಗೆ ಮರುಪಾವತಿ ವೆಚ್ಚ ಹೆಚ್ಚಾಗುತ್ತದೆ. ವಿದೇಶಿ ಶಿಕ್ಷಣ ಮತ್ತು ಪ್ರಯಾಣ: ವಿದೇಶದಲ್ಲಿ ಓದುತ್ತಿರುವ ವಿದ್ಯಾರ್ಥಿಗಳಿಗೆ ಮತ್ತು ಪ್ರವಾಸಿಗರಿಗೆ ವೆಚ್ಚ ಹೆಚ್ಚಾಗುತ್ತದೆ. ವ್ಯಾಪಾರ ಕೊರತೆ (ಖಿಡಿಚಿಜe ಆeಜಿiಛಿiಣ): ರಫ್ತಿಗಿಂತ ಆಮದು ವೆಚ್ಚ ಹೆಚ್ಚಾಗಿ, ವ್ಯಾಪಾರ ಕೊರತೆ ಹೆಚ್ಚಾಗಬಹುದು.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಗಳ ತುಲನಾತ್ಮಕ ವಿಶ್ಲೇಷಣೆ
ದೇಶ ಪೆಟ್ರೋಲ್ ಬೆಲೆ ಡೀಸೆಲ್ ಬೆಲೆ
ಸಿಂಗಾಪುರ ರೂ. ೨೮೦–೩೧೦ ರೂ.೨೫೮–೨೬೫
ಜರ್ಮನಿ ರೂ.೧೮೦–೨೧೫ ರೂ.೧೮೫–೧೯೨
ಚೀನಾ ರೂ.೧೦೫–೧೧೫ ರೂ.೯೩–೯೮
ಅಮೇರಿಕಾ ರೂ.೮೫೦–೯೫ ರೂ.೯೫–೧೦೦
ಯುಎಇ ರೂ.೬೫–೭೫ ರೂ.೮೫–೯೦
ರಷ್ಯಾ ರೂ.೫೦–೬೦ ರೂ.೬೮–೭೨
ಶ್ರೀಲಂಕಾ ರೂ. ೧೨೨ ರೂ.೧೧೫–೧೨೦
ಪಾಕಿಸ್ತಾನ ರೂ.೧೪೨.೦೦ ರೂ.೧೩೮–೧೪೨
ಇಂಡಿಯಾ ರೂ.೯೪–೧೦೭ ರೂ.೯೦
ಪ್ರಧಾನಮಂತ್ರಿಯವರ ಮೇ ೧೦ ರ ಘೋಷಣೆಯ ಸಕಾರಾತ್ಮಕ ಉದ್ದೇಶಗಳು:
೧. ಆಥಿಕ ಶಿಸ್ತು ಮತ್ತು ಜವಾಬ್ದಾರಿ
ಇಂಧನ ಉಳಿತಾಯ, ಅನಗತ್ಯ ಆಮದು ಕಡಿತ ಮತ್ತು ಸ್ಥಳೀಯ ಉತ್ಪನ್ನಗಳಿಗೆ ಉತ್ತೇಜನ ನೀಡುವ ಮೂಲಕ ದೇಶದ ವಿದೇಶಿ ವಿನಿಮಯ ಸಂಗ್ರಹ ಬಲವಾಗುತ್ತದೆ, ಆಮದು ಅವಲಂಬನೆ ಕಡಿಮೆಯಾಗುತ್ತದೆ, ದೇಶೀಯ ಕೈಗಾರಿಕೆಗಳಿಗೆ ಹೊಸ ಅವಕಾಶಗಳು ಸಿಗುತ್ತವೆ.
೨. ಭಾರತದವಿದೇಶಿ ವಿನಿಮಯ ಮೀಸಲು(ಈoಡಿex ಖeseಡಿve) ಇಂದು ಸುಮಾರು ೭೦೦ ಬಿಲಿಯನ್ ಡಾಲರ್ ಆಗಿದೆ. ಇದು ಭಾರತಕ್ಕೆ ಜಾಗತಿಕ ಆರ್ಥಿಕ ಅಸ್ಥಿರತೆಯ ನಡುವೆಯೂ ಭದ್ರತೆ ಮತ್ತು ಸ್ಥಿರತೆಯನ್ನು ನೀಡುತ್ತಿದೆ. ಹಾಗೂ ಸುಮಾರು ೧೧ ತಿಂಗಳುಗಳ ಆಮದು ಮಾಡಿಕೊಳ್ಳಲು ಸಾಕಾಗುತ್ತದೆ .
೩. “ಆತ್ಮನಿರ್ಭರ ಭಾರತ”ಕ್ಕೆ ಹೊಸ ವೇಗ
ಪ್ರಧಾನಮಂತ್ರಿಯವರ ಕರೆ: “ಐoಛಿಚಿಟ ಣo ಉಟobಚಿಟ” ದೃಷ್ಟಿಕೋಣವನ್ನು ಮತ್ತಷ್ಟು ಬಲಪಡಿಸುತ್ತದೆ. ಇದರಿಂದ ಭಾರತೀಯ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಾಗುತ್ತದೆ, ಒSಒಇ ಮತ್ತು ಸಣ್ಣ ಕೈಗಾರಿಕೆಗಳಿಗೆ ಉತ್ತೇಜನ ಸಿಗುತ್ತದೆ, ಉದ್ಯೋಗಾವಕಾಶಗಳು ಹೆಚ್ಚುತ್ತವೆ.
೪. Woಡಿಞ ಈಡಿom ಊome ಮತ್ತು ಊಥಿbಡಿiಜ Woಡಿಞ ಒoಜeಟ ಮೂಲಕ ಆಗುವ ಪ್ರಯೋಜನಗಳು ಟ್ರಾಫಿಕ್ ಒತ್ತಡ ಕಡಿಮೆ ಆಗುವುದು. ಇಂಧನ ಉಳಿತಾಂi. ಪರಿಸರ ರಕ್ಷಣೆ. ಉದ್ಯೋಗಿಗಳ ಜೀವನ ಸುಧಾರಣೆ ಸಾಧ್ಯವಾಗುತ್ತದೆ.
೫. ಭಾರತದಲ್ಲಿ ವೇಗವಾಗಿ ಬೆಳೆಯುತ್ತಿರುವ ಕ್ಷೇತ್ರಗಳು
ವಿದೇಶಿ ವಿನಿಮಯ ಮೀಸಲಿನ ಉಳಿತಾಯದಿಂದ ಈ ಕೆಳಗಿನ ಭಾರತದ ಹೊಸ ಕ್ಷೇತ್ರಗಳಿಗೆ ಉತ್ತೇಜನ ನೀಡಿದಂತಾಗುತ್ತದೆ. ಸೆಮಿಕಂಡಕ್ಟರ್ ಉತ್ಪಾದನೆ. ವಿದ್ಯುತ್ ವಾಹನಗಳ ತಯಾರಿಕೆ. ನವೀಕರಿಸಬಹುದಾದ ಇಂಧನ ಉತ್ಪಾದನೆ. ರಕ್ಷಣಾ ಉತ್ಪಾದನೆ. ಕೃತಕ ಬುದ್ಧಿಮತ್ತೆ, ಡಿಜಿಟಲ್ ಆರ್ಥಿಕತೆ. ಈ ಕ್ಷೇತ್ರಗಳಲ್ಲಿ ಭಾರತಕ್ಕೆ ಭಾರಿ ಜಾಗತಿಕ ಅವಕಾಶಗಳು ನಿರ್ಮಾಣವಾಗುತ್ತಿವೆ.
೬. ಡಿಜಿಟಲ್ ಭಾರತದ ಶಕ್ತಿ
UPI ಮೂಲಕ ಭಾರತ ಇಂದು ವಿಶ್ವದ ಅತಿದೊಡ್ಡ ಡಿಜಿಟಲ್ ಪಾವತಿ ವ್ಯವಸ್ಥೆ ಹೊಂದಿದ ದೇಶವಾಗಿದೆ. ಪ್ರತಿ ತಿಂಗಳು ಬಿಲಿಯನ್ಗಟ್ಟಲೆ ಡಿಜಿಟಲ್ ವ್ಯವಹಾರಗಳು ಭಾರತದಲ್ಲಿ ನಡೆಯುತ್ತಿವೆ. ಇದು ಭಾರತದ ಆಥಿಕ ವ್ಯವಸ್ಥೆಯ ಬಲ ಮತ್ತು ಪಾರದರ್ಶಕತೆಯನ್ನು ತೋರಿಸುತ್ತದೆ.
೭. ಜಾಗತಿಕ ಮಟ್ಟದಲ್ಲಿ ಭಾರತದ ಗೌರವ
ಇಂದು ಭಾರತ, ಅಮೆರಿಕಾ,ಯೂರೋಪ್,ಮಧ್ಯಪ್ರಾಚ್ಯ,ಜಪಾನ್, ಆಸ್ಟ್ರೇಲಿಯಾ ಎಲ್ಲ ರಾಷ್ಟ್ರಗಳೊಂದಿಗೆ ಸಮತೋಲನದ ಸಂಬಂಧ ಹೊಂದಿದೆ. ಜಾಗತಿಕ ಕಂಪನಿಗಳು ಭಾರತವನ್ನು: “ಭವಿಷ್ಯದ ಬೆಳವಣಿಗೆಯ ಎಂಜಿನ್” ಎಂದು ಪರಿಗಣಿಸುತ್ತಿವೆ.
೮. ಯುವಶಕ್ತಿ: ಭಾರತದ ದೊಡ್ಡ ಸಂಪತ್ತು: ಭಾರತದ ಜನಸಂಖ್ಯೆಯಲ್ಲಿ ೬೫% ಕ್ಕಿಂತ ಹೆಚ್ಚು ಯುವಜನರಿಂದ ಇಂದು ನಾವೀನ್ಯತೆ, ಸ್ಟಾರ್ಟ್‌ಅಪ್‌ಗಳು, ತಂತ್ರಜ್ಞಾನ, ಉತ್ಪಾದನೆ ಕ್ಷೇತ್ರಗಳಲ್ಲಿ ಭಾರತಕ್ಕೆ ವಿಶ್ವದ ಮುಂಚೂಣಿ ಸ್ಥಾನ ತಂದುಕೊಡಲು ಸಾಧ್ಯವಾಗಿದೆ. ೯. ಸಮಾರೋಪ: “ಪ್ರಧಾನಮಂತ್ರಿ ಅವರ ಮೇ ೧೦ರ ಘೋಷಣೆ: ಸಂಕಷ್ಟದ ಸೂಚನೆ ಅಲ್ಲ, ಜವಾಬ್ದಾರಿಯುತ ನಾಯಕತ್ವದ ಸಂಕೇತವಾಗಿದೆ.” ದೇಶದ ಆಥಿಕ ಭದ್ರತೆ, ಆತ್ಮನಿರ್ಭರತೆ, ಸ್ಥಳೀಯ ಕೈಗಾರಿಕೆಗಳ ಬೆಳವಣಿಗೆ, ದೀರ್ಘಕಾಲದ ಸ್ಥಿರ ಅಭಿವೃದ್ಧಿ ಇವುಗಳತ್ತ ಭಾರತವನ್ನು ಕೊಂಡೊಯ್ಯುವ ಮಹತ್ವದ ಹೆಜ್ಜೆಯಾಗಿದೆ. “ಭಾರತ ಇಂದು ಸವಾಲುಗಳನ್ನು ಮಾತ್ರ ಎದುರಿಸುತ್ತಿಲ್ಲ; ಅವನ್ನು ಅವಕಾಶಗಳಾಗಿ ಪರಿವರ್ತಿಸುತ್ತಿದೆ.” ಎಂದೂ ಸಿಎ| ಎಸ್.ಎಸ್ ನಾಯಕ್ ತಿಳಿಸಿದರು.
ಪತ್ರಿಕಾ ಗೋಷ್ಠಿಯಲ್ಲಿ ಸಹಸಂಚಾಲಕ ಇಂ| ಜಿ.ಯೋಗೀಶ್ ಪೈ, ಸದಸ್ಯರುಗಳಾದ ರಾಜೇಶ್ ರಾವ್ ಎಂ (ಆಥಿಕ ತಜ್ಞ), ಸಿಎ| ಶ್ರೀಕೃಷ್ಣ ಭಟ್ ಕೊಕ್ಕಡ, ವಸಂತ ಶೆಟ್ಟಿ (ಬ್ಯಾಂಕಿಂಗ್ ತಜ್ಞ) ಡಾ| ಎಸ್.ಎಂ ಶಿವಪ್ರಕಾಶ್ ಉಪಸ್ಥಿತರಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now