6 ತಿಂಗಳ ಬಳಿಕ ತಾಯಿಯನ್ನು ಕಂಡ ಬಾಲಕ: ಕಾರ್ಕಳ ಪೊಲೀಸ್ ಸಿಬ್ಬಂದಿ ಸಂಪಾ ಶೆಟ್ಟಿ ಕಾರ್ಯಕ್ಕೆ ಮೆಚ್ಚುಗೆ

6 ತಿಂಗಳ ಬಳಿಕ ತಾಯಿಯನ್ನು ಕಂಡ ಬಾಲಕ: ಕಾರ್ಕಳ ಪೊಲೀಸ್ ಸಿಬ್ಬಂದಿ ಸಂಪಾ ಶೆಟ್ಟಿ ಕಾರ್ಯಕ್ಕೆ ಮೆಚ್ಚುಗೆ
0Shares

ಪಶ್ಚಿಮ ಬಂಗಾಳ ಮೂಲದ ಬಾಲಕ ಪೋಷಕರ ವಶಕ್ಕೆ

ಉಡುಪಿ ರೈಲ್ವೆ ನಿಲ್ದಾಣದಲ್ಲಿ  ಒಂಟಿಯಾಗಿ ಸಿಕ್ಕಿದ ಪಶ್ಚಿಮ ಬಂಗಾಳ ಮೂಲದ 11 ವರ್ಷದ ಬಾಲಕನು ಜನವರಿ 2026 ರಿಂದ ಪೋಷಕರ ಹೆಸರು ವಿಳಾಸ ತಿಳಿಯದ ಕಾರಣ ಉಡುಪಿಯ ಕುಂಜಿಬೆಟ್ಟು ಬಾಲಕರ ಬಾಲಮಂದಿರದ ಆಶ್ರಯದಲ್ಲಿದ್ದು  ಪೊಲೀಸ್ ಅಧೀಕ್ಷಕರು ಉಡುಪಿ ಜಿಲ್ಲೆರವರ ಮೌಖಿಕ ಆದೇಶದಂತೆ ಉಡುಪಿ ಮಕ್ಕಳ ಕಲ್ಯಾಣ ಸಮಿತಿಯ ಅಧೀಕ್ಷಕರ ಮತ್ತು ಪಶ್ಚಿಮ ಬಂಗಾಳ ರಾಜ್ಯದ ದಕ್ಷಿಣಧೀನಜಪುರ್ ಜಿಲ್ಲೆಯ ಗಂಗರಾಂಪುರ ಪೊಲೀಸ್ ಠಾಣೆಯ ಅಧಿಕಾರಿಗಳ ಸಹಕಾರದಿಂದ ಕಾರ್ಕಳ ನಗರ ಠಾಣೆಯ ಮಹಿಳಾ ಪೊಲೀಸ್‌ ಸಿಬ್ಬಂದಿ ಸಂಪಾ ಶೆಟ್ಟಿ ಇವರು ಬಾಲಕನ ತಾಯಿ ಸಾಧನ ಮಂಡಲ್‌ರವರು ಪ್ರಸ್ತುತ ಮಹಾರಾಷ್ಟ್ರದ ಕಲ್ಯಾಣ್ ಜಿಲ್ಲೆಯ ಟಿಟ್ವಾಲದಲ್ಲಿರುವ ಬಗ್ಗೆ ಮಾಹಿತಿ ಪಡೆದು ಅವರನ್ನು ಸಂಪರ್ಕಿಸಿ ಬಾಲಕನ ಇರುವಿಕೆ ಬಗ್ಗೆ ಮಾಹಿತಿ ತಿಳಿಸಿದಂತೆ ಬಾಲಕನ ಪೋಷಕರು ಈ ದಿನ ದಿನಾಂಕ 30/07/2026ರಂದು ಉಡುಪಿಯ ಮಕ್ಕಳ ಕಲ್ಯಾಣ ಸಮಿತಿ ಮುಂದೆ ಹಾಜರಾಗಿ ಸೂಕ್ತ ದಾಖಲಾತಿ ನೀಡಿ ಬಾಲಕನನ್ನು ತಮ್ಮೊಂದಿಗೆ ಕರೆದುಕೊಂಡು ಹೋಗಿರುತ್ತಾರೆ. ಕಾರ್ಕಳ ನಗರ ಠಾಣೆಯ ಮಹಿಳಾ ಪೊಲೀಸ್‌ ಸಿಬ್ಬಂದಿ ಸಂಪಾ ಶೆಟ್ಟಿರವರ ಕಾರ್ಯದಕ್ಷತೆಯನ್ನು ಪೊಲೀಸ್‌ ಅಧೀಕ್ಷಕರು ಮುಕ್ತಕಂಠದಿಂದ ಪ್ರಸಂಶಿಸಿರುತ್ತಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now