
ತುಳುನಾಡ ರಕ್ಷಣಾ ವೇದಿಕೆ ಕಾಪು ತಾಲೂಕು ಹಾಗೂ ಬೈರಂಪಳ್ಳಿ ಘಟಕದ ವತಿಯಿಂದ, ಸ್ಥಾಪಕಾಧ್ಯಕ್ಷರಾದ ಯೋಗೀಶ್ ಶೆಟ್ಟಿ ಜೆಪ್ಪು ಅವರ ಮಾರ್ಗದರ್ಶನದಲ್ಲಿ ಇಂದು ಸರ್ಕಾರಿ ಆಯುರ್ವೇದ ಚಿಕಿತ್ಸಾಲಯ ಶೀರೂರು ಇಲ್ಲಿ ಸುಮಾರು 18 ವರ್ಷಗಳಿಂದ ಪ್ರಾಮಾಣಿಕ ವೈದ್ಯಾಧಿಕಾರಿಯಾಗಿ ಜನರ ಸೇವೆ ಸಲ್ಲಿಸಿ ಜನರ ಪ್ರೀತಿ, ವಿಶ್ವಾಸ ಗಳಿಸುವಲ್ಲಿ ಯಶಸ್ವಿಯಾಗಿ ಇದೀಗ ಬೆಂಗಳೂರಿಗೆ ವರ್ಗಾವಣೆಗೊಂಡ ಡಾಕ್ಟರ್ ಪ್ರಭಾ ಎನ್. ಅವರಿಗೆ ತುಳುನಾಡ ರಕ್ಷಣಾ ವೇದಿಕೆ ವತಿಯಿಂದ ಬೀಳ್ಕೊಡುಗೆ ಸಮಾರಂಭ ನಡೆಯಿತು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಉಡುಪಿ ಜಿಲ್ಲಾಧ್ಯಕ್ಷರಾದ ಫ್ರ್ಯಾಂಕಿ ಡಿಸೋಜ ಮಾತನಾಡುತ್ತಾ… ಡಾಕ್ಟರ್ ಪ್ರಭಾ. ಎನ್ ಅವರು ಬೆಳ್ಳರಪಾಡಿ, 41ನೇ ಶಿರೂರು ಹಾಗೂ ಭೈರಂಪಳ್ಳಿ ಈ ಮೂರು ಗ್ರಾಮದ ಗ್ರಾಮಸ್ಥರಿಗೆ ಕಳೆದ 18 ವರ್ಷಗಳಿಂದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯದಲ್ಲಿ ವೈದ್ಯಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಾ ಇದ್ದು. ಕರೋನಾ ಸಂದರ್ಭದಲ್ಲಿಯೂ ಕೂಡ ಆಯುರ್ವೇದ ವೈದ್ಯಾಧಿಕಾರಿಯಾಗಿ ಜನರಿಗೆ ಉತ್ತಮ ರೀತಿಯ ಸ್ಪಂದನೆಯೊಂದಿಗೆ ಮಾಹಿತಿಗಳನ್ನು ನೀಡುತ್ತಾ ಜನರ ಪ್ರೀತಿ ವಿಶ್ವಾಸ ಗಳಿಸಿರುತ್ತಾರೆ. ಇತ್ತೀಚಿನ ದಿನಗಳಲ್ಲಿ ಜನರು ಅಲೋಪತಿ ಔಷಧೀಯ ಕಡೆಗೆ ಆಕರ್ಷಣೆಯಾಗುತ್ತಿರುವ ಈ ಸಂದರ್ಭದಲ್ಲಿ ಆಯುರ್ವೇದ ಚಿಕಿತ್ಸೆಯ ಮಹತ್ವ. ಆಯುರ್ವೇದ ಔಷಧಗಳ ಉಪಯೋಗ ಜನರಿಗೆ ಅದರಿಂದ ಆಗುವ ಪ್ರಯೋಜನ ಗಳ ಬಗ್ಗೆ ಮಾಹಿತಿ ನೀಡುತ್ತಾ. ಆಯುರ್ವೇದ ವಿಷಯಗಳ ಬಗ್ಗೆ ಅರಿವು ಕಾರ್ಯಕ್ರಮಗಳನ್ನು ಮಾಡಿ ಇಲ್ಲಿನ ಜನರು ಆಯುರ್ವೇದ ಚಿಕಿತ್ಸೆ, ಆಯುರ್ವೇದ ಔಷಧಗಳ ಬಗ್ಗೆ ಹೆಚ್ಚಿನ ಒಲವು ಪಡೆಯುವಂತೆ ಮಾಡುವಲ್ಲಿ ಇವರು ಪ್ರಮುಖ ಪಾತ್ರವನ್ನು ವಹಿಸಿರುತ್ತಾರೆ. ತಮ್ಮ ಚಿಕಿತ್ಸಾಲಯಕ್ಕೆ ಬಂದ ಜನರೊಂದಿಗೆ ಇವರು ಉತ್ತಮ ರೀತಿಯಲ್ಲಿ ಬಾಂಧವ್ಯದೊಂದಿಗೆ ಬಂದ ರೋಗಿಗಳ ವಿಶ್ವಾಸ ಗಳಿಸಿರುತ್ತಾರೆ. ಮೂಲತಃ ಕೊಡಗು ಜಿಲ್ಲೆಯ ಮಡಿಕೇರಿಯವರಾದ ಇವರು ನಮ್ಮ ತುಳುನಾಡಿನ ಮಾತೃ ಭಾಷೆಯಾದ ತುಳುವನ್ನು ಕಲಿತು ತಮ್ಮ ಚಿಕಿತ್ಸಾಲಯಕ್ಕೆ ಬರುವವರನ್ನು ಕನ್ನಡದ ಜೊತೆಗೆ ತುಳು ಭಾಷೆಯಲ್ಲಿಯು ಕೂಡ ಮಾತನಾಡಿಸಿ ಚಿಕಿತ್ಸೆ ನೀಡುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ. 41ನೇ ಶಿರೂರುನಲ್ಲಿ ಹಲವು ವರ್ಷಗಳಿಂದ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಕ್ಕೆ ಸ್ವಂತ ಕಟ್ಟಡ ಇಲ್ಲದ ಸಂದರ್ಭದಲ್ಲಿ. ನಿರಂತರವಾಗಿ ಹಲವು ವರ್ಷಗಳಿಂದ ಸ್ವಂತ ಕಟ್ಟಡಕ್ಕಾಗಿ ಹೋರಾಡಿ. ಇದೀಗ ಡಾಕ್ಟರ್ ಪ್ರಭಾ ಎನ್ ರವರ ಸಹಕಾರದೊಂದಿಗೆ ಶಿರೂರಿಗೆ ಒಂದು ಸ್ವಂತ ಕಟ್ಟಡ ಆಗುತ್ತಿರುವುದು ನಮಗೆಲ್ಲರಿಗೂ ಹೆಮ್ಮೆಯ ಸಂಗತಿ ಎಂದು ತಿಳಿಸಿದರು. ಹಾಗೆಯೇ ಪ್ರಸ್ತುತ ಇಲ್ಲಿ ಆಯುರ್ವೇದಿಕ್ ವೈದ್ಯಾಧಿಕಾರಿಯಾಗಿ ನಿಯೋಜನೆಗೊಂಡಿರುವ ಡಾಕ್ಟರ್ ನಳಿನಿ ಮೇಡಂ ಅವರನ್ನು ಕೂಡ ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಕಾಪು ತಾಲೂಕು ಹಾಗೂ ಬೈರಂಪಳ್ಳಿ ಘಟಕದ ವತಿಯಿಂದ ಸ್ವಾಗತಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ತುಳುನಾಡ ರಕ್ಷಣಾ ವೇದಿಕೆ ಕಾಪು ತಾಲೂಕು ಅಧ್ಯಕ್ಷರಾದ ನಿತಿನ್ ಕುಮಾರ್ ಶೆಟ್ಟಿ, ಬೈರಂಪಳ್ಳಿ ಘಟಕದ ಉಪಾಧ್ಯಕ್ಷರಾದ ಗುಣಕರ್, ಆದರ್ಶ್ ಪೂಜಾರಿ, ಸುದರ್ಶನ್ ಸೇರಿಗಾರ್, ರಮೇಶ್ ಪೂಜಾರಿ,ನಾಗೇಶ್ ಬೇಟೆಡ್ಕ. ನವನೀತ್, ಸುಕೇಶ್, ದೀಕ್ಷಿತ್, ಗಣೇಶ್ ಹಾಗೂ ಅಜಯ್ ಭಾಗವಹಿಸಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now