ಉಡುಪಿ: ಶಟಲ್ ಆಡುತ್ತಿರುವಾಗ ಕುಸಿದು ಬಿದ್ದು ಸಾವು !

ಉಡುಪಿ: ಶಟಲ್ ಆಡುತ್ತಿರುವಾಗ ಕುಸಿದು ಬಿದ್ದು ಸಾವು !
0Shares

ಉಡುಪಿ: ಕೋಟೆಬೀಡು ಬಳಿಯ ನಿವಾಸಿ ಪ್ರಶಾಂತ್ ಭೋಜ ಕುಂದರ್ (39) ಶಟಲ್ ಆಟ ಆಡುತ್ತಿರುವಾಗ ದಿಢೀರ್ ಅಸ್ವಸ್ಥಗೊಂಡು ಕುಸಿದು ಬಿದ್ದು ಸಾವಿಗೀಡಾದ ಘಟನೆ ಸಂಭವಿಸಿದೆ.

ಸಂಜೆ 5 ಗಂಟೆಯ ಸುಮಾರಿಗೆ ಶಟಲ್ ಆಡುವಾಗ ಬಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅವರನ್ನು ಸ್ನೇಹಿತರು ಕೂಡಲೇ ಚಿಕಿತ್ಸೆಗೆ ಉಡುಪಿಯ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ಪರೀಕ್ಷಿಸಿದ ವೈದ್ಯರು, ಅವರು ಅದಾಗಲೇ ಮೃತಪಟ್ಟಿರುವುದಾಗಿ ತಿಳಿಸಿರುತ್ತಾರೆ.2 ತಿಂಗಳ ಹಿಂದೆ ಕೆಲಸ ಹುಡುಕಲು ದುಬೈಗೆ ಹೋಗಿದ್ದು ಅನಂತರ 10 ದಿನಗಳ ಹಿಂದೆ ಊರಿಗೆ ಹಿಂದಿರುಗಿದ್ದರು. ಸುಮಾರು 4 ವರ್ಷಗಳಿಂದ ಸಕ್ಕರೆ ಕಾಯಿಲೆ ಇದ್ದು ಚಿಕಿತ್ಸೆ ಪಡೆಯುತ್ತಿದ್ದರು.ಪತ್ನಿ ನೀಡಿದ ದೂರಿನಂತೆ ಕಾಪು ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now