
ಬ್ರಹ್ಮಾವರ: ಕರ್ನಾಟಕ ಸರಕಾರ ರಾಜ್ಯದ ನಿಗಮ, ಮಂಡಳಿ, ಪ್ರಾಧಿಕಾರಗಳಿಗೆ ನಿರ್ದೇಶಕರಾಗಿ ಸದಸ್ಯರಾಗಿ 425 ಮಂದಿಯನ್ನುv ನೇಮಕಮಾಡಲಾಗಿದ್ದು ಕರಾವಳಿ ಅಭಿವೃದ್ಧಿ ಮಂಡಳಿಗೆ ಬ್ರಹ್ಮಾವರ ಮೈರ್ಮಾಡಿ ಸುಧಾಕರ ಶೆಟ್ಟಿ ಯವರನ್ನು ಆಯ್ಕೆ ಮಾಡಲಾಗಿದೆ.
ಸುಧಾಕರ ಶೆಟ್ಟಿಯವರು ಬ್ಯಾಂಕ್ ಆಫ್ ಬರೋಡದೊಂದಿಗೆ ವೀಲೀನವಾಗ ಹಿಂದಿನ ವಿಜಯ ಬ್ಯಾಂಕ್‌ನಲ್ಲಿ ಸೀನಿಯರ್ ಮೇನೆಜರ್ ಆಗಿಸೇವೆ ಸಲ್ಲಿಸಿ ನಿವೃತ್ತರಾದ ಬಳಿಕ ಉಡುಪಿ ಜಿಲ್ಲಾ ಪಂಚಾಯತಿ ಸದಸ್ಯರಾಗಿ ಚುನಾಯಿತರಾಗಿ ಜನಾನುರಾಗಿಯಾಗಿದ್ದರು. ಇವರ ಆಯ್ಕೆಯನ್ನು ಮೆಚ್ಚಿ ಉಡುಪಿ ಜಿಲ್ಲೆ ಮತ್ತು ಬ್ರಹ್ಮಾವರ ಭಾಗದ ಜನರು ಸಂತಸ ವ್ಯಕ್ತ ಪಡಿಸಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now