ಕುಂದಾಪುರ: ಸಾಧಕ ಕನ್ನಡ ಶಿಕ್ಷಕರಿಗೆ ಅಭಿನಂದನೆ; ಅಶೋಕ್ ಪೂಜಾರಿ ಬೀಜಾಡಿ ಅವರಿಗೆ ಆತ್ಮೀಯ ಸನ್ಮಾನ

ಕುಂದಾಪುರ: ಸಾಧಕ ಕನ್ನಡ ಶಿಕ್ಷಕರಿಗೆ ಅಭಿನಂದನೆ; ಅಶೋಕ್ ಪೂಜಾರಿ ಬೀಜಾಡಿ ಅವರಿಗೆ ಆತ್ಮೀಯ ಸನ್ಮಾನ
0Shares

ಕುಂದಾಪುರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ “ಸಾಧಕ ಕನ್ನಡ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮ” ಅತ್ಯಂತ ಅರ್ಥಪೂರ್ಣವಾಗಿ ನೆರವೇರಿತು.

ಕನ್ನಡ ಭಾಷೆ, ಸಾಹಿತ್ಯ ಮತ್ತು ಸಂಸ್ಕೃತಿಯನ್ನು ವಿದ್ಯಾರ್ಥಿಗಳ ಮನದಲ್ಲಿ ಬಿತ್ತಿ, ನಾಳಿನ ಉತ್ತಮ ಪ್ರಜೆಗಳನ್ನು ರೂಪಿಸುವ ಕನ್ನಡ ಶಿಕ್ಷಕರ ನಿಸ್ವಾರ್ಥ ಸೇವೆಯನ್ನು ಗುರುತಿಸಿ ಗೌರವಿಸಿದ್ದು ನಿಜಕ್ಕೂ ಶ್ಲಾಘನೀಯ.

ಈ ಶುಭ ಸಂದರ್ಭದಲ್ಲಿ ಶಿಕ್ಷಣ ಕ್ಷೇತ್ರ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಾ ಬಂದಿರುವ, ಸಮಾಜಮುಖಿ ಚಿಂತನೆ ಮತ್ತು ಜನಪರ ಕಾಳಜಿಯ ನಮ್ಮ ನಾಯಕರಾದ ಅಶೋಕ್ ಪೂಜಾರಿ ಬೀಜಾಡಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಿ ಗೌರವಿಸಲಾಯಿತು.

ಗುರುಗಳನ್ನು ಗೌರವಿಸುವ ಈ ಸದುದ್ದೇಶದ ಕಾರ್ಯಕ್ರಮದಲ್ಲಿ ಅವರ ಉಪಸ್ಥಿತಿ ಮತ್ತಷ್ಟು ಮೆರುಗು ನೀಡಿತು.

ಕನ್ನಡ ನಾಡು-ನುಡಿಯ ಏಳಿಗೆಗಾಗಿ ಶ್ರಮಿಸುತ್ತಿರುವ ಶಿಕ್ಷಕ ಬಳಗಕ್ಕೆ ಹೃತ್ಪೂರ್ವಕ ಅಭಿನಂದನೆಗಳು. ಜೊತೆಗೆ, ನಮ್ಮ ನಾಯಕರಿಗೆ ಈ ಸನ್ಮಾನ ಸಲ್ಲಿಕೆಯಾಗಿರುವುದು ನಮಗೆಲ್ಲರಿಗೂ ಹೆಮ್ಮೆ ಮತ್ತು ಸಂತಸ ತಂದಿದೆ.

ಸನ್ಮಾನಿತ ಸಾಧಕ ಶಿಕ್ಷಕರಿಗೆ ಹಾಗೂ ನಮ್ಮ ನಾಯಕರಿಗೆ ಹೃತ್ಪೂರ್ವಕ ಅಭಿನಂದನೆಗಳು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now