ಕಾರ್ಕಳ: 24 ಗಂಟೆಯಲ್ಲಿ ₹5.60 ಲಕ್ಷ ಚಿನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು, ಇಬ್ಬರ ಬಂಧನ

ಕಾರ್ಕಳ: 24 ಗಂಟೆಯಲ್ಲಿ ₹5.60 ಲಕ್ಷ ಚಿನ್ನ ಕಳವು ಪ್ರಕರಣ ಭೇದಿಸಿದ ಪೊಲೀಸರು, ಇಬ್ಬರ ಬಂಧನ

0Shares

ದಿನಾಂಕ 23.04.2026 ರಂದು ಬೆಳಿಗ್ಗೆ 9.10 ಗಂಟೆಯಿಂದ ದಿನಾಂಕ 24.04.2026 ರಂದು ಸಂಜೆ 6.00 ಗಂಟೆಯ ಮದ್ಯದ ಅವಧಿಯಲ್ಲಿ ಯಾರೋ ಕಳ್ಳರು ಅವರ ವಾಸದ ಮನೆಯ ಬಾಗಿಲನ್ನು ಮೀಟಿ ತೆರೆದು ಮನೆಯೊಳಗಡೆ ಪ್ರವೇಶಿಸಿ ಕಪಾಟಿನ ಒಳಗಡೆ ಇಟ್ಟಿದ್ದ ಸುಮಾರು 24 ಗ್ರಾಂ ತೂಕದ ಚಿನ್ನದ ನೆಕ್ಲೆಸ್‌-1, ಸುಮಾರು 3 ಗ್ರಾಂ ತೂಕದ ಚಿನ್ನದ ಉಂಗುರ -3, ಸುಮಾರು 3 ಗ್ರಾಂ ತೂಕದ ಚಿನ್ನದ ಬೆಂಡೋಲೆ –1 ಜೊತೆ, ಸುಮಾರು 3 ಗ್ರಾಂ ತೂಕದ ಚಿನ್ನದ ಜುಮ್ಕಿ -1 ಜೊತೆ ಇವುಗಳನ್ನು ಕಳವು ಮಾಡಿಕೊಂಡು ಹೋಗಿದ್ದು, ಕಳವಾದ ಚಿನ್ನದ ಅಂದಾಜು ಒಟ್ಟು ಮೌಲ್ಯ ಸುಮಾರು ರೂ 2,64,000 ಲಕ್ಷ ಆಗಬಹುದು ಎಂದು ಶಂಕರ ಕುಲಾಲ್‌, ತಂದೆ; ಶೀನ ಕುಲಾಲ್‌, ಪತ್ತೊಂಜಿ ಕಟ್ಟೆ ಕಾರ್ಕಳ ಇವರು ನೀಡಿದ ಫಿರ್ಯಾದಿಯಂತೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ : 60/2026 ಕಲಂ 331(3) 331(4) 305 BNS 2023 ರಂತೆ ದಾಖಲಾಗಿರುತ್ತದೆ,

ಈ ಪ್ರಕರಣದಲ್ಲಿ ಕಾರ್ಕಳ ಉಪವಿಭಾಗದ ಪೊಲೀಸ್ ಉಪಾಧೀಕ್ಷಕರಾದ ವಿಜಯಪ್ರಸಾದ ರವರ ನೇತೃತ್ವದಲ್ಲಿ ಕಾರ್ಕಳ ನಗರ ಪೊಲೀಸ್ ಠಾಣಾ ಪೊಲೀಸ್ ನಿರೀಕ್ಷಕರಾದ ಮಂಜಪ್ಪ ಡಿ.ಆರ್ ಕಾರ್ಕಳ ನಗರ ಪೊಲೀಸ್ ಠಾಣಾ ಪಿಎಸ್‌ಐಯವರಾದ ಮುರುಳೀಧರನಾಯ್ಕ , ಶಿವಕುಮಾರ್ ಎಸ್,ಆರ್ ಹಾಗೂ ಸಿಬ್ಬಂದಿಯವರು ಕಳ್ಳತನದ ಆರೋಪಿತ ಆನಂದ ಕುಲಾಲ್‌ ಪ್ರಾಯ 40 ವರ್ಷ ತಂದೆ; ಶೀನ ಕುಲಾಲ್‌ ವಾಸ; ಪಾಲೆಜೆಡ್ಡು ಪುಷ್ಪ ನಿವಾಸ, ದರ್ಖಾಸ್‌ ಹರಿಖಂಡಿಗೆ ಅಂಚೆ, ಬೈರಂಪಳ್ಳಿ ಗ್ರಾಮ, ಉಡುಪಿ ತಾಲೂಕು. ಈತನನ್ನು ಪ್ರಕರಣ ದಾಖಲಾಗಿ 24 ಘಂಟೆಯೊಳಗಡೆ ಪತ್ತೆ ಮಾಡಿ, ಈತನು ಕಳವು ಮಾಡಿದ ಚಿನ್ನವನ್ನು ಮಾರಾಟ ಮಾಡಿದ ಜಯರಾಮ ಆಚಾರ್ಯ ಪ್ರಾಯ 54 ವರ್ಷ ತಂದೆ. ಅಪ್ಪು ಆಚಾರ್ಯ ವಾಸ, ಜಯಲಕ್ಷೀ ನಿವಾಸ ಕೈಕಂಬ ಅಜೆಕಾರು ಮರ್ಣೆ ಗ್ರಾಮ ಕಾರ್ಕಳ ತಾಲೂಕು ಇವರನ್ನು ದಸ್ತಗಿರಿ ಮಾಡಿದ್ದು, ಕಳವು ಆದ ಸುಮಾರು 5.60.000/- ರೂ ಮೌಲ್ಯದ 39.00 ಗ್ರಾಂ ತೂಕದ ಚಿನ್ನವನ್ನು ವಶಪಡಿಸಿಕೊಂಡು ಆರೋಪಿತರನ್ನು ದಸ್ತಗಿರಿ ಮಾಡಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿಸಲಾಗಿದೆ.

ನಮ್ಮ ವರದಿಗಾರರು

ವಿಲ್ಸನ್ ಡಿಸೋಜ

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now