ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಮಾಹಿತಿ ತಂತ್ರಜ್ಞಾನ ಪೋಷಕ ದಿನಾಚರಣೆ

ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಮಾಹಿತಿ ತಂತ್ರಜ್ಞಾನ ಪೋಷಕ ದಿನಾಚರಣೆ
0Shares

ಆನೇಕಲ್ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ಜಿಗಣಿಯ ಬುಕ್ಕಸಾಗರ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಕಚೇರಿಯಲ್ಲಿ ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ಮತ್ತು ಬೆಂಗಳೂರು ನಗರ ಜಿಲ್ಲಾ ಸಹಕಾರ ಒಕ್ಕೂಟ, ಬಿಡಿಸಿಸಿ ವತಿಯಿಂದ ಸಹಕಾರ ಸಪ್ತಾಹ ಪ್ರಯುಕ್ತ ಸಹಕಾರ ಸಂಸ್ಥೆಗಳ ಬೆಳವಣಿಗೆಗೆ ಮಾಹಿತಿ ತಂತ್ರಜ್ಞಾನ ಪೋಷಕ ದಿನಾಚರಣೆ ಆಯೋಜಿಸಲಾಗಿತ್ತು.

ಬಿಡಿಸಿಸಿ ಬ್ಯಾಂಕ್‌ ಅಧ್ಯಕ್ಷ ಬಿ.ಸಿ.ಶಿವಲಿಂಗೇಗೌಡ, ‘ಸಹಕಾರ ಸಂಘಗಳ ಅಭಿವೃದ್ಧಿಯಲ್ಲಿ ತಂತ್ರಜ್ಞಾನದ ಪಾತ್ರ ಪ್ರಮುಖವಾಗಿದೆ. ಸಾಲ ಪಡೆದವರ ವಿವರ, ದತ್ತಾಂಶ ಸಂಗ್ರಹ ಸೇರಿದಂತೆ ವಿವಿಧ ರೀತಿಯಲ್ಲಿ ತಂತ್ರಜ್ಞಾನ ಪ್ರಮುಖ ಪಾತ್ರ ವಹಿಸುತ್ತದೆ’ ಎಂದರು.

ಬಿಡಿಸಿಸಿ ಬ್ಯಾಂಕ್‌ ಉಪಾಧ್ಯಕ್ಷ ಅಮರೇಶ್‌ ರೆಡ್ಡಿ, ನಿರ್ದೇಶಕ ಭಾರ್ಗವ್‌ ರೆಡ್ಡಿ, ಪ್ರಾಥಮಿಕ ಕೃಷಿ ಪತ್ತಿನ ಸಹಖಾರ ಸಂಘದ ಅಧ್ಯಕ್ಷರಾದ ಪಿಳ್ಳಪ್ಪ, ಹೇಮಂತ್‌ ಕುಮಾರ್, ಸದಸ್ಯರಾದ ಮಂಜುನಾಥ್, ಮೂರ್ತಿಗೌಡ, ವೆಂಕಟೇಶ್‌ ಉಪಸ್ಥಿತರಿದ್ದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now