
ಶಿರ್ವ ಸಹಕಾರಿ ವ್ಯವಸಾಯನಿಕ ಸಂಘ (ನಿ) ಶಿರ್ವ ಇದರ ಸುವರ್ಣ ಮಹೋತ್ಸವದ ಅಂಗವಾಗಿ 2026 ನೇ ಸಾಲಿನಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ಪ್ರೋತ್ಸಾಹ ಧನ ನೀಡಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ ಶಿರ್ವ ಸಾಂತೂರು, ಕುತ್ಯಾರು ಪಿಲಾರು ಮತ್ತು ಕಳತ್ತೂರು ಗ್ರಾಮಗಳ ವ್ಯಾಪ್ತಿಗೆ ಒಳಪಡುವ ಶಿರ್ವ ಸಹಕಾರಿ ವ್ಯವಸಾಯಿಕ ಸಂಘ (ನಿ) ಶಿರ್ವ ಇದರ ಅ ತರಗತಿ ಸದಸ್ಯರ ಕುಟುಂಬದ ಸದಸ್ಯರಲ್ಲಿ ಎಸ್‍ಎಸ್‍ಎಲ್‍ಸಿ ಮತ್ತು ಪಿಯುಸಿ ಪರೀಕ್ಷೆಯಲ್ಲಿ ಶೇಕಡ 85 ಅಥವಾ ಅದಕ್ಕಿಂತ ಹೆಚ್ಚಿನ ಅಂಕಗಳನ್ನು ಗಳಿಸಿರುವ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ.
ಅರ್ಜಿ ಸಲ್ಲಿಸಲು ಇರುವ ಅರ್ಹತೆಗಳು ಮತ್ತು ಷರತ್ತುಗಳು:
1.ವಿದ್ಯಾರ್ಥಿಯು ಮೇಲ್ಕಂಡ ಐದು ಗ್ರಾಮಗಳ ವ್ಯಾಪ್ತಿಗೆ ಸೇರಿದವರಾಗಿರಬೇಕು.
2. ವಿದ್ಯಾರ್ಥಿಯ ಕುಟುಂಬದ ಕನಿಷ್ಠ ಒಬ್ಬ ಸದಸ್ಯರು ನಮ್ಮ ಸಂಘದ ಅ ತರಗತಿ ಸದಸ್ಯರಾಗಿರಬೇಕು. 3. ಅರ್ಜಿಯನ್ನು ಸಂಘವು ನಿಗದಿಪಡಿಸಿರುವ ಲಗತ್ತಿಸಲಾದ ಆರ್ಜಿ ನಮೂನೆಯಲ್ಲಿ ಭರ್ತಿ ಮಾಡಬೇಕು.
4. ವಿದ್ಯಾರ್ಥಿಯ ಪ್ರಸ್ತುತ ವ್ಯಾಸಂಗ ಮಾಡುತ್ತಿರುವ ಅಥವಾ ಹಿಂದಿನ ಶಾಲೆಯ ಕಾಲೇಜಿನ ಪ್ರಾಂಶುಪಾಲರಿಂದ ದೃಢೀಕರಣ ಸಹಿ ಮತ್ತು ಮೊಹರು ಪಡೆಯುವುದು ಕಡ್ಡಾಯ.
5. ಪೂರ್ಣಗೊಳಿಸಿದ ಅರ್ಜಿಯನ್ನು ಅಗತ್ಯ ದಾಖಲೆಗಳೊಂದಿಗೆ ಸಂಘದ ಪ್ರಧಾನ ಕಛೇರಿ ಶಿರ್ವ, ಸಾಂತೂರು ಶಾಖೆ,ಕಳತ್ತೂರು ಶಾಖೆ ಮತ್ತು ಮಟ್ಟಾರು ಶಾಖೆಗಳಲ್ಲಿ ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30.11.2026.
ನಿಗದಿತ ನಮೂನೆಯಲ್ಲಿ ಭರ್ತಿ ಮಾಡಿದ ಅರ್ಜಿಗಳು ದಿನಾಂಕ 30-11.2026 ಒಳಗಾಗಿ ಸಂಘದ ಕಚೇರಿಗೆ ತಲುಪುವಂತೆ ಸಲ್ಲಿಸಲು ಕೋರಲಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಹಮ್ಮಿಕೊಂಡಿರುವ ಈ ಸುವರ್ಣ ಮಹೋತ್ಸವದ ವಿದ್ಯಾರ್ಥಿ ಪ್ರೋತ್ಸಾಹ ಧನ ಯೋಜನೆಯ ಸದುಪಯೋಗವನ್ನು ಅರ್ಹ ವಿದ್ಯಾರ್ಥಿಗಳು ಪಡೆದುಕೊಳ್ಳಬೇಕಾಗಿ ವಿನಂತಿ.
ಅಧ್ಯಕ್ಷರು/ಮುಖ್ಯ ಕಾರ್ಯನಿರ್ವಹಣಾಧಿಕಾರಿ ಶಿರ್ವ ಸಹಕಾರಿ ವ್ಯವಸಾಯನಿಕ ಸಂಘ ನಿಯಮಿತ (ಶಿರ್ವ)
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now