ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದ ಬ್ಯಾಂಕಿಂಗ್ ವಿಭಾಗ ಉದ್ಘಾಟನೆ

ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರಿ ಸಂಘದ ಬ್ಯಾಂಕಿಂಗ್ ವಿಭಾಗ ಉದ್ಘಾಟನೆ
0Shares

ಉದ್ಯಾವರ : ಇಲಿಯ ಮೇಲ್ಪೇಟೆಯಲ್ಲಿ ಗ್ರಾಮದ ಗ್ರಾಮದ ಸಾರ್ವಜನಿಕರಿಗಾಗಿ ಸರಕಾರದ ಸವಲತ್ತುಗಳನ್ನು ಒದಗಿಸುತ್ತಿದ್ದ ಉದ್ಯಾವರ ಗ್ರಾಹಕರ ವಿವಿದೋದ್ದೇಶ ಸಹಕಾರ ಸಂಘ ನಿಯಮಿತ ಇದರ ಬ್ಯಾಂಕಿಂಗ್ ವಿಭಾಗವನ್ನು ಮಾಜಿ ಸಚಿವ ವಿನಯಕುಮಾರ್ ಸರಕೆ ಉದ್ಘಾಟನೆಗೊಳಿಸಿದರು.

ಬ್ಯಾಂಕಿಂಗ್ ವಿಭಾಗದ ಆಶೀರ್ವಚನ ನೆರವೇರಿಸಿದ ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯದ ಮಾಜಿ ಕುಲಪತಿಗಳಾದ ವO. ಫಾ. ಸ್ಟ್ಯಾನಿ ಲೋಬೊ ಮತ್ತು ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಸ್ಥಳೀಯ ಸಂತ ಫ್ರಾನ್ಸಿಸ್ ಕ್ಸೇವಿಯರ್ ದೇವಾಲಯದ ಪ್ರಧಾನ ಧರ್ಮ ಗುರುಗಳಾದ ವO. ಫಾ. ಅನಿಲ್ ಡಿಸೋಜಾ ನೂತನ ಬ್ಯಾಂಕಿಂಗ್ ಭಾಗಕ್ಕೆ ಮತ್ತು ನಿರ್ದೇಶಕ ಮಂಡಳಿಗೆ ಶುಭ ಹಾರೈಸಿದರು

ಇದೇ ಸಂದರ್ಭದಲ್ಲಿ ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘ ನಿಯಮಿತದ ಮಾಜಿ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದವರನ್ನು ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದವರನ್ನು ಅಭಿನಂದಿಸಲಾಯಿತು.

ವೇದಿಕೆಯಲ್ಲಿ ಬೆಳ್ವೆ ಚರ್ಚಿನ ಧರ್ಮಗುರು ವO. ಫಾ. ಲಿಯೊ ಪ್ರವೀಣ್ ಡಿಸೋಜಾ, ಉದ್ಯಾವರ ಚರ್ಚಿನ ಸಹಾಯಕ ಧರ್ಮಗುರು ವO. ಫಾ. ಸಂತೋಷ್ ಅಲ್ಮೇಡ, ಮಾಜಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರಿಯಾಜ್ ಪಳ್ಳಿ, ಪಾಲನಾ ಮಂಡಳಿಯ ಉಪಾಧ್ಯಕ್ಷ ಮೇಲ್ವಿನ್ ನೋರನ್ನ, ಎಲ್ಲ ನಿರ್ದೇಶಕರು ಉಪಸ್ಥಿತರಿದ್ದರು.

ಉದ್ಯಾವರ ಗ್ರಾಹಕರ ವಿವಿಧೋದ್ದೇಶ ಸಹಕಾರ ಸಂಘ ನಿ. ಇದರ ಅಧ್ಯಕ್ಷ ರಾಯ್ಸ್ ಫೆರ್ನಾಂಡಿಸ್ ಸ್ವಾಗತಿಸಿದರೆ, ಉಪಾಧ್ಯಕ್ಷ ಐರಿನ್ ಪಿರೇರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮುಖ್ಯ ಕಾರ್ಯನಿರ್ವಹಣಾ ಅಧಿಕಾರಿ ಗ್ಲೋರಿಯಾ ಪಿಂಟೋ ಧನ್ಯವಾದ ಸಮರ್ಪಿಸಿದರೆ, ಸ್ಟೀವನ್ ಕುಲಾಸೊ ಕಾರ್ಯಕ್ರಮ ನಿರೂಪಿಸಿದರು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now