ಐಪಿಎಲ್‌ಗೆ ಧೋನಿ ವಿದಾಯ..? CSK ತಂಡದಲ್ಲಿ ಹೊಸ ಜವಾಬ್ದಾರಿ, ಮೆಂಟರ್ ಆಗಿ ನೇಮಕ..!

ಐಪಿಎಲ್‌ಗೆ ಧೋನಿ ವಿದಾಯ..? CSK ತಂಡದಲ್ಲಿ ಹೊಸ ಜವಾಬ್ದಾರಿ, ಮೆಂಟರ್ ಆಗಿ ನೇಮಕ..!
0Shares

ಟೀಂ ಇಂಡಿಯಾದ ಮಾಜಿ ನಾಯಕ, ಲೆಜೆಂಡ್ (MS Dhoni) ಪ್ರೀಮಿಯರ್ ಲೀಗ್‌ಗೆ (IPL) ವಿದಾಯ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಚೆನ್ನೈ ಸೂಪ‌ರ್ ಕಿಂಗ್ಸ್ (CSK) ಫ್ರಾಂಚೈಸಿ ಧೋನಿಗೆ ಹೊಸ ಜವಾಬ್ದಾರಿ ನೀಡಿದ್ದು, ತಂಡದ ಮಾಜಿ ನಾಯಕನನ್ನ ಮೆಂಟರ್ ಆಗಿ ನೇಮಕ ಮಾಡಿಕೊಂಡಿದೆ. 2008ರಲ್ಲಿ ಐಪಿಎಲ್‌ನ ಮೊದಲ ಆವೃತ್ತಿಯಿಂದ ಆರಂಭವಾದ ಧೋನಿ ಮತ್ತು ಚೆನ್ನೈ ತಂಡದ ನಡುವಿನ ಸುದೀರ್ಘ ಬಾಂಧವ್ಯ ಇದೀಗ ಹೊಸ ರೂಪದಲ್ಲಿ ಮುಂದುವರಿಯಲಿದೆ.

5 ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಯಶಸ್ಸಿನಲ್ಲಿ ಧೋನಿ ಪಾತ್ರ ಅಪಾರವಾದದ್ದು. ಮೈದಾನದಲ್ಲಿ ಆಟಗಾರನಾಗಿ ಮಾತ್ರವಲ್ಲದೇ, ನಾಯಕನಾಗಿ ಮತ್ತು ತಂಡದ ಮಾರ್ಗದರ್ಶಕನಾಗಿಯೂ ಅವರು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಹಲವು ಹೊಸ ಪ್ರತಿಭೆಗಳನ್ನ ಬೆಳೆಸಿದ್ದಾರೆ.

ಐಪಿಎಲ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ನಾಯಕರಲ್ಲಿ ಒಬ್ಬರಾಗಿರುವ ಧೋನಿ, ತಮ್ಮ ನಾಯಕತ್ವದಲ್ಲಿ ಚೆನ್ನೈ ತಂಡಕ್ಕೆ 2010, 2011, 2018, 2021 ಮತ್ತು 2023ರಲ್ಲಿ ಚಾಂಪಿಯನ್ ಪಟ್ಟ ತಂದುಕೊಟ್ಟಿದ್ದಾರೆ. ಈ ಮೂಲಕ 5 ಐಪಿಎಲ್ ಟ್ರೋಫಿಗಳನ್ನು ಗೆದ್ದ ನಾಯಕರ ಪಟ್ಟಿಯಲ್ಲಿ ರೋಹಿತ್ ಶರ್ಮಾ ಅವರೊಂದಿಗೆ ಅಗ್ರಸ್ಥಾನ ಹಂಚಿಕೊಂಡಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now