
ಮುಂಬೈ: ಹಿರಿಯ ಸಮಾಜ
ಸೇವಕ ಅಣ್ಣಾ ಹಜಾರೆ ಅವರು ವೈರಲ್ ಸೋಂಕು, ತೀವ್ರ ನಿರ್ಜಲೀಕರಣ ಹಾಗೂ ಮೂತ್ರಪಿಂಡದ ಸಮಸ್ಯೆಯಿಂದಾಗಿ ಸೋಮವಾರ ಮುಂಬೈನಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
89 ವರ್ಷದ ಹಜಾರೆ ಅವರಿಗೆ ತೀವ್ರ ನಿಗಾ ಘಟಕದಲ್ಲಿ (ಐಸಿಯು) ಚಿಕಿತ್ಸೆ ನೀಡಲಾಗುತ್ತಿದೆ. ವೈದ್ಯ ಗೌತಮ್ ಭನ್ಸಾಲಿ ಅವರ ನೇತೃತ್ವದಲ್ಲಿ ಚಿಕಿತ್ಸೆ ಮುಂದುವರಿದಿದೆ.
ಅಣ್ಣಾ ಹಜಾರೆ ಅವರನ್ನು ಅವರ ಗ್ರಾಮದ ಆರೈಕೆದಾರರೊಂದಿಗೆ ಹೃದಯ ಸಂಬಂಧಿತ ತುರ್ತು ಚಿಕಿತ್ಸಾ ಆಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತರಲಾಗಿದೆ. ಹಜಾರೆ ಅವರ ವಿವಿಧ ವೈದ್ಯಕೀಯ ಪರೀಕ್ಷೆಗಳು ನಡೆಯುತ್ತಿದ್ದು, ವರದಿಗಳ ಆಧಾರದ ಮೇಲೆ ಮುಂದಿನ ಚಿಕಿತ್ಸೆಯನ್ನು ನಿರ್ಧರಿಸಲಾಗುವುದು ಎಂದು ಡ್ತಾ. ಗೌತಮ್ ಭನ್ಸಾಲಿ ತಿಳಿಸಿದ್ದಾರೆ.
2011ರಲ್ಲಿ ನಡೆದ ‘ಇಂಡಿಯಾ ಎಗೇನ್ಸ್ ‘ಕರಪ್ಪನ್’ (ಭ್ರಷ್ಟಾಚಾರದ ವಿರುದ್ಧ ಭಾರತ) ಆಂದೋಲನದ ಮೂಲೆಕ ಅಣ್ಣಾ ಹಜಾರೆ ಅವರು ರಾಷ್ಟ್ರಮಟ್ಟದಲ್ಲಿ ಗಮನ ಸೆಳೆದಿದ್ದರು. ಅದಕ್ಕೂ ಮುನ್ನ ಮಹಾರಾಷ್ಟ್ರದಲ್ಲಿ ಸಾಮಾಜಿಕೆ ಸೇವೆ ಹಾಗೂ ಭ್ರಷ್ಟಾಚಾರ ವಿರೋಧಿ ಹೋರಾಟದ ಮೂಲಕ ಅವರು ಜನಪ್ರಿಯರಾಗಿದ್ದರು. ಇತ್ತೀಚಿನ ಸಿಜೆಪಿ ಹೋರಾಟದ ವೇಳೆಯೂ ಸಾಂಕೇತಿಕ ಧರಣಿ ನಡೆಸಿದ್ದರು.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now