ಗೃಹಲಕ್ಷ್ಮಿಮರುಪರಿಶೀಲನೆಗೂ ಡೆಡ್‌ಲೈನ್‌ ಘೋಷಣೆ: ವೋಟರ್ ಐಡಿ ಇಲ್ಲದಿದ್ದರೆ 2,000 ಕಟ್

ಗೃಹಲಕ್ಷ್ಮಿಮರುಪರಿಶೀಲನೆಗೂ ಡೆಡ್‌ಲೈನ್‌ ಘೋಷಣೆ: ವೋಟರ್ ಐಡಿ ಇಲ್ಲದಿದ್ದರೆ 2,000 ಕಟ್
0Shares

ಬೆಂಗಳೂರು: ಕರ್ನಾಟಕ ಸರ್ಕಾರದ ಮಹತ್ವಾಕಾಂಕ್ಷೆಯ ಗೃಹಲಕ್ಷ್ಮಿಯೋಜನೆಯು ಕುಟುಂಬದ ಯಜಮಾನಿಗೆ ಪ್ರತಿ ತಿಂಗಳು ₹2,000 ಆರ್ಥಿಕ ನೆರವು ನೀಡುವ ಮೂಲಕ ಯಶಸ್ವಿಯಾಗಿ ಕಾರ್ಯನಿರ್ವಹಿಸುತ್ತಿದೆ. ಆಗಸ್ಟ್ 2026ಕ್ಕೆ ಈ ಯೋಜನೆಯು ಮೂರು ವರ್ಷಗಳನ್ನು ಪೂರೈಸಿದ್ದು, ಇದೀಗ ರಾಜ್ಯ ಸರ್ಕಾರವು ಯೋಜನೆಯ ಮರುಪರಿಶೀಲನೆಗೆ ಮುಂದಾಗಿದೆ. ಯೋಜನೆಗೆ ಅರ್ಹರಾಗಿರುವ ನೈಜ ಫಲಾನುಭವಿಗಳಿಗೆ ಮಾತ್ರ ಈ ಸೌಲಭ್ಯ ತಲುಪಿಸುವುದು ಸರ್ಕಾರದ ಮುಖ್ಯ ಉದ್ದೇಶವಾಗಿದೆ.

ಫಲಾನುಭವಿಗಳ ನೈಜತೆಯನ್ನು ಪರಿಶೀಲಿಸಲು ಸಿಬ್ಬಂದಿಗಳು ಶೀಘ್ರದಲ್ಲೇ ಪ್ರತಿಯೊಬ್ಬರ ಮನೆ ಮನೆಗೆ ಭೇಟಿ ನೀಡಲಿದ್ದಾರೆ. ಮನೆಗೆ ಅಧಿಕಾರಿಗಳು ಆಗಮಿಸಿದಾಗ ಮಹಿಳೆಯರು ಅಗತ್ಯ ದಾಖಲೆಗಳನ್ನು ಒದಗಿಸಿ, ಸರಿಯಾದ ಮಾಹಿತಿಯನ್ನು ನೀಡಬೇಕಾಗುತ್ತದೆ. ಸೂಕ್ತ ಮಾಹಿತಿ ಹಾಗೂ ದಾಖಲೆ ಒದಗಿಸಿದವರಿಗೆ ಮಾತ್ರ ಮುಂದಿನ ದಿನಗಳಲ್ಲಿ ₹2,000 ಆರ್ಥಿಕ ನೆರವು ಮುಂದುವರಿಯಲಿದೆ. ಈ ಸಂಪೂರ್ಣ ಮರುಪರಿಶೀಲನಾ ಪ್ರಕ್ರಿಯೆಗೆ ಸರ್ಕಾರ ಕೇವಲ ಒಂದು ತಿಂಗಳ ಕಾಲಾವಕಾಶ (ಡೆಡ್‌ಲೈನ್) ನೀಡಿದೆ.

ಈ ಮರುಪರಿಶೀಲನಾ ಪ್ರಕ್ರಿಯೆಯಲ್ಲಿ ಸರ್ಕಾರ ಕೆಲವು ಕಟ್ಟುನಿಟ್ಟಿನ ನಿಯಮಗಳನ್ನು ಜಾರಿಗೆ ತರುತ್ತಿದೆ. ಅದರಂತೆ, ಮತದಾರರ ಗುರುತಿನ ಚೀಟಿ (Voter ID) ಇಲ್ಲದಿದ್ದರೆ ಅಥವಾ ಇತ್ತೀಚೆಗೆ ನಡೆದ ಎಸ್‌ಐಆ‌ರ್ (SIR) ಪ್ರಕ್ರಿಯೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ತೆಗೆದುಹಾಕಲ್ಪಟ್ಟಿದ್ದರೆ, ಅಂತಹ ಮಹಿಳೆಯರನ್ನು ಗೃಹಲಕ್ಷ್ಮಿಯೋಜನೆಯಿಂದಲೂ ಕೈಬಿಡಲಾಗುತ್ತದೆ. ವೋಟರ್ ಐಡಿ ರದ್ದಾಗಿದ್ದರೆ ಗೃಹಲಕ್ಷ್ಮಿಯ ಪ್ರತಿ ತಿಂಗಳ ₹2,000 ಹಣವೂ ಕಟ್ ಆಗಲಿದೆ ಎಂದು ಮೂಲಗಳಿಂದ ತಿಳಿದುಬಂದಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now