ದೀಪಾವಳಿ ಪಟಾಕಿ ಮಾರಾಟದ ಲಾಭ ಅಶಕ್ತರ ಸೇವೆಗೆ ಅರ್ಪಣೆ ಕೊಳಲಗಿರಿ ಅಭಿವೃದ್ಧಿ ಸಮಿತಿ

ದೀಪಾವಳಿ ಪಟಾಕಿ ಮಾರಾಟದ ಲಾಭ ಅಶಕ್ತರ ಸೇವೆಗೆ ಅರ್ಪಣೆ ಕೊಳಲಗಿರಿ ಅಭಿವೃದ್ಧಿ ಸಮಿತಿ
0Shares

ಅಶಕ್ತರ ನೆರವಿಗೆ ಚೆಕ್ಕ್ ಹಸ್ತಾಂತರ


ಉಪ್ಪೂರು ಕೊಳಲಗಿರಿ ವಾರ್ಡ್ ಅಭಿವೃದ್ಧಿ ಸಮಿತಿಯ ಮುಂದಾಳಾತ್ವದಲ್ಲಿ.. ದೀಪಾವಳಿ ಪ್ರಯುಕ್ತ ತಮ್ಮೆಲ್ಲರ ಸಹಕಾರದಿಂದ ದೀಪಾವಳಿ ಪಟಾಕಿ ಅಂಗಡಿಯ ವ್ಯಾಪಾರ ಯಶಸ್ವಿಯಾಗಿ ನಡೆಸಿಕೊಂಡು ಇದರಿಂದ ಬಂದ ಲಾಭದಲ್ಲಿ ತಮಗೆಲ್ಲರಿಗೂ ಭರವಸೆ ನೀಡಿದ ಹಾಗೆ ಮೂರು ಬಡ ರೋಗಿಗಳ ಚಿಕಿತ್ಸೆಗಾಗಿ ಮತ್ತು ಇತ್ತೀಚೆಗೆ ನಿಧನರಾದ ಯುವಕನ ಶವ ಸಂಸ್ಕಾರ ಅಂತ್ಯಕ್ರಿಯೆಗೆ ಚೆಕ್ ನೀಡಿ ಸಹಕಾರ ನೀಡಲಾಯಿತು.

ಆರೋಗ್ಯ ಚಿಕಿತ್ಸೆಗೆ ಚೆಕ್ ಪಡೆದವರ ವಿವರ:

  1. _ ಮುಟ್ಟಿಕಲ್ ವಾಸವಾಗಿರುವ ರೋಗಿಯ ಕಿಡ್ನಿ ಡಯಾಲಿಸಿಸ್ ಚಿಕಿತ್ಸೆಗೆಂದು 6 ಚೆಕ್ಕನ್ನು ನೀಡಲಾಯಿತು.
  2. _ಪೂಜಾರಿ ಅಮ್ಮುಂಜೆ ರೋಗಿಯ ಕಿಡ್ನಿ ಡಯಾಲಿಸಿಸ್ ಚಿಕಿತ್ಸೆಗಾಗಿ 6 ಚೆಕ್ಕನ್ನು ನೀಡಲಾಯಿತು. 3. ಅಮ್ಮುಂಜೆ ರೋಡು ನಿವಾಸಿಯ ಹೃದಯದ ಆರೋಗ್ಯ ಚಿಕಿತ್ಸೆಗೆ ಚೆಕ್ಕನ್ನು ನೀಡಲಾಯಿತು.
    ಬೇರೆ ಬೇರೆ ದಿನಾಂಕದ ಚೆಕ್ಕನ್ನು ನೀಡಿದಾಗ ಆಯಾ ರೋಗಿ ಆಯಾಯ ತಿಂಗಳ ಚಿಕಿತ್ಸೆಗೆ ಮಾತ್ರ ಆ ಹಣವನ್ನು ನೇರವಾಗಿ ಬಳಸಿಕೊಳ್ಳಲು ಸುಲಭವಾಗುತ್ತದೆ ಎಂಬ ಉದ್ದೇಶವನ್ನು ಇಟ್ಟುಕೊಂಡು ಈ ರೀತಿ ಚೆಕ್ಕನ್ನು ಬೇರೆ ಬೇರೆಯಾಗಿ ನೀಡಲಾಯಿತು. ಇನ್ನು ಉಳಿದ ಹಣದಲ್ಲಿ ಒಂದು ಬಡಮನೆ ದುರಸ್ತಿ, ಅದೇ ರೀತಿ ಈ ವರ್ಷ ಎಸ್ ಎಲ್ ಸಿ ಪಿಯುಸಿ ಉತ್ತಮ ಅಂಕ ಪಡೆದು ತೀರ್ಣರಾದ ಮಕ್ಕಳಿಗೆ ವಿದ್ಯಾರ್ಥಿವೇತನ ನೀಡಲಾಗುವುದು
    ಫಲಾನುಭವಿಗಳ ಮನೆಗಳಿಗೆ ಹೋಗಿ ಚೆಕ್ ನೀಡುವ ಈ ಸಂದರ್ಭದಲ್ಲಿ ಸಂಚಾಲಕರಾದ ನನ್ನೊಂದಿಗೆ ಸಂದೀಪ್ ನಾಯಕ್, ಮುಂಬೈ ಉದ್ಯಮಿ ಮೈಕಲ್ ಡಿಸೋಜ ಕೆಳಕುದ್ರು, ಅವಿನಾಶ್ ಮುಟ್ಟಿಕಲ್ , ಅರವಿಂದ್ ಭಟ್ ಫರಾರಿ , ಶಕುಂತಲಾ ಅಮ್ಮುಂಜೆ, ಸಂದೀಪ್ ಶೆಟ್ಟಿ ಉಪಸ್ಥಿತರಿದ್ದರು. ಪಟಾಕಿ ಅಂಗಡಿ ಗೆ ಪರಿಶ್ರಮ ಮಾಡಿದಂತ ಯುವಕರಿಗೂ ಸಮಿತಿಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು
0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now