
ಕೋಟೆಕಾರು ವ್ಯ.ಸೇ.ಸ.ಸಂಘದಿಂದ ಭತ್ತ ಕೃಷಿಕರು ಮತ್ತು ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ವಿತರಣೆ.
ಉಳ್ಳಾಲ:ಆ-30
ಕೋಟೆಕಾರು ವ್ಯವಸಾಯ ಸಂಘವು ಕೃಷಿಯನ್ನು ಪ್ರೋತ್ಸಾಹಿಸುವ ಜೊತೆಗೆ ವಿದ್ಯಾರ್ಥಿಗಳ ಶಿಕ್ಷಣಕ್ಕೂ ಸಹಕಾರ ನೀಡುವುದರ ಮೂಲಕ ಬ್ಯಾಂಕಿಂಗ್ ಸೇವೆಯೊಂದಿಗೆ ಸಾಮಾಜಿಕ ಸೇವಾ ಕಾರ್ಯಗಳಲ್ಲೂ ಮುಂಚೂಣಿಯಲ್ಲಿದೆಯೆಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಯು.ಟಿ ಖಾದರ್ ಅಭಿಪ್ರಾಯಪಟ್ಟರು.
ಕೋಟೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ ವತಿಯಿಂದ ಕೋಟೆಕಾರಿನ ಬೀರಿಯಲ್ಲಿರುವ ಸಂಘದ ಪ್ರಧಾನ ಕಚೇರಿಯ ಸಭಾಂಗಣದಲ್ಲಿ ಭಾನುವಾರದಂದು ನಡೆದ ಭತ್ತ ಕೃಷಿಕರಿಗೆ ಪ್ರೋತ್ಸಾಹ ಧನ ವಿತರಣೆ ಮತ್ತು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವನ್ನುದ್ಧೇಶಿಸಿ ಅವರು ಮಾತನಾಡಿದರು.ದೇಶಕ್ಕೆ ಸ್ವಾತಂತ್ರ್ಯ ಸಿಕ್ಕ ಸಂಧರ್ಭದಲ್ಲಿ ಭಾರತದಲ್ಲಿದ್ದ ಮೂವತ್ತಮೂರು ಕೋಟಿ ಜನರಿಗೆ ಸರಿಯಾದ ಆಹಾರ ಸಿಗದೆ,ಹೊರ ದೇಶದಿಂದ ಕಳಪೆ ಗುಣಮಟ್ಟದ ಆಹಾರಗಳನ್ನು ಆಮದು ಮಾಡಿಸಿಕೊಳ್ಳುವ ಪರಿಸ್ಥಿತಿ ಇತ್ತು.ಆದರೆ ಇಂದು ನಮ್ಮ ದೇಶದ ಜನಸಂಖ್ಯೆ ನೂರ ನಲ್ವತ್ತುಕೋಟಿ ದಾಟಿದರೂ ಸಹ ಮೂರು ಹೊತ್ತಿಗೆ ಬೇಕಾದ ಆಹಾರವು ಇಲ್ಲೇ ಸಿಗಲು ರೈತಾಪಿ ವರ್ಗದವರ ಅವಿರತ ಪರಿಶ್ರಮವೇ ಕಾರಣವಾಗಿದೆ.ಆ ನಿಟ್ಟಿನಲ್ಲಿ ಯುವ ಜನಾಂಗಕ್ಕೆ ಕೃಷಿಯಲ್ಲಿ ಆಸಕ್ತಿ ಮೂಡಿಸುವ ಕಾರ್ಯವು ಸಂಘದ ವತಿಯಿಂದ ನಡೆಯುತ್ತಿರುವುದು ಶ್ಲಾಘನೀಯವೆಂದರು.
ಉಳ್ಳಾಲ ತಾಲೂಕು ಮಹಿಳಾ ಮಂಡಳಿಗಳ ಒಕ್ಕೂಟದ ಅಧ್ಯಕ್ಷರಾದ ದೇವಕಿ ಆರ್.ಉಳ್ಳಾಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕೋಟೆಕಾರು ವ್ಯ.ಸೇ.ಸ.ಸಂಘದ ಉಪಾಧ್ಯಕ್ಷರಾದ ಕೆ.ಬಿ ಅಬುಸಾಲಿ ಕಿನ್ಯಾ,ನಿರ್ದೇಶಕರುಗಳಾದ ಗಂಗಾಧರ್ ಯು,ಅರುಣ್ ಕುಮಾರ್ ಯು,ರಾಘವ ಆರ್.ಉಚ್ಚಿಲ್,ರಾಘವ ಸಿ ಉಚ್ಚಿಲ್,ಸುರೇಖಾ ಚಂದ್ರಹಾಸ್,ಸುನೀತ ಲೋಬೊ,ಬಾಬು ನಾಯ್ಕ ಮೊದಲಾದವರು ಉಪಸ್ಥಿತರಿದ್ದರು.
ಕೋಟೆಕಾರು ವ್ಯ.ಸೇ.ಸ.ಸಂಘದ ಅಧ್ಯಕ್ಷರಾದ ಕೃಷ್ಣ ಶೆಟ್ಟಿ ಕೆಳಗಿನ ಕೋಟೆಕಾರುಗುತ್ತು ಸ್ವಾಗತಿಸಿ,ಮುಖ್ಯ ಕಾರ್ಯನಿರ್ವಹಣಾಧಿಕಾರಿ ಹರ್ಷವರ್ಧನ್ ಉಳ್ಳಾಲ್ ಪ್ರಸ್ತಾವಣೆಗೈದರು.ಸಂತೋಷ್ ಕುಮಾರ್ ಶೆಟ್ಟಿ ಮತ್ತು ಹರೀಶ್ ಶೆಟ್ಟಿ ನೀಲಿಪಾಲು ನಿರೂಪಿಸಿ,ನವೀನ್ ಸಾಲ್ಯಾನ್ ವಂದಿಸಿದರು.
***ಕಳೆದ ಐದಾರು ವರ್ಷಗಳಿಂದ ಒಂದು ಎಕರೆಗೆ 5 ಸಾವಿರ ರೂಪಾಯಿಗಳಂತೆ ಭತ್ತ ಕೃಷಿಗೆ ಪ್ರೋತ್ಸಾಹ ಧನ ನೀಡುತ್ತಿದ್ದೇವೆ.ಅಡಿಕೆ ಬೆಳೆ ಮೈಲು ತುತ್ತು ಖರೀದಿಯಲ್ಲಿ ಪ್ರತೀ ಕೆಜಿಗೆ ನೂರು ರೂಪಾಯಿ ಸಬ್ಸಿಡಿ ನೀಡುತ್ತಿದ್ದೇವೆ.ನಮ್ಮ ಕಾರ್ಯ ವ್ಯಾಪ್ತಿಗೆ ಒಳ ಪಟ್ಟ ಹದಿನಾಲ್ಕು ಗ್ರಾಮಗಳ ಒಂದು ಸರಕಾರಿ ಶಾಲೆಯನ್ನ ಗುರುತಿಸಿ ಅಲ್ಲಿನ ಮಕ್ಕಳಿಗೆ ಉಚಿತ ಪುಸ್ತಕ,ಬ್ಯಾಗ್,ಕೊಡೆ ಇನ್ನಿತರ ಕಲಿಕಾ ಪರಿಕರಗಳನ್ನ ಪೂರೈಸುತ್ತಾ ಬಂದಿದ್ದೇವೆ.ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ನೀಡುತ್ತಿದ್ದೇವೆ.ಪತ್ರಕರ್ತರ ಸಂಘದೊಂದಿಗೆ ಪಿಲಾರುವಿನ ಹಡಿಲು ಬಿದ್ದ ಗದ್ದೆಯಲ್ಲಿ ನಾಟಿ ನಡೆಸಿ ಭತ್ತ ಬೆಳೆಸಲಾಗಿದೆ.ಸಂಘದ ಸಮಾಜಮುಖಿ ಕಾರ್ಯಗಳಿಗಾಗಿ ಈಗಾಗಲೇ ಹಲವಾರು ಪ್ರಶಸ್ತಿಗಳು ಲಭಿಸಿವೆ.
***ಕೃಷ್ಣ ಶೆಟ್ಟಿ ಕೋಟೆಕಾರು ಕೆಳಗಿನಗುತ್ತು,ಅಧ್ಯಕ್ಷರು.ಕೋ.ವ್ಯ.ಸೇ.ಸ.ಸಂಘ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now