ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್‌ನರಕ್ಷಾ ರಾಮಚಂದ್ರ ನಾಯ್ಕ್ ಅವರಿಗೆ ರಾಷ್ಟ್ರೀಯ ಮಟ್ಟದ 49ನೇ ರ‍್ಯಾಂಕ್

ಸಿಎ ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್‌ನರಕ್ಷಾ ರಾಮಚಂದ್ರ ನಾಯ್ಕ್ ಅವರಿಗೆ ರಾಷ್ಟ್ರೀಯ ಮಟ್ಟದ 49ನೇ ರ‍್ಯಾಂಕ್
0Shares

ಮೂಡುಬಿದಿರೆ: ಸೆಪ್ಟೆಂಬರ್ 2026ರಲ್ಲಿ ನಡೆದ ಚಾರ್ಟರ್ಡ್ ಅಕೌಂಟೆನ್ಸಿ (ಸಿಎ) ಇಂಟರ್‌ಮೀಡಿಯೇಟ್ ಪರೀಕ್ಷೆಯಲ್ಲಿ ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳು ಗಮನಾರ್ಹ ಸಾಧನೆ ಮೆರೆದಿದ್ದಾರೆ.
ರಕ್ಷಾ ರಾಮಚಂದ್ರ ನಾಯ್ಕ್ ಎರಡೂ ಗ್ರೂಪ್‌ಗಳಲ್ಲಿ ಮೊದಲ ಪ್ರಯತ್ನದಲ್ಲೇ 435 ಅಂಕಗಳೊಂದಿಗೆ ಉತ್ತೀರ್ಣಳಾಗಿ, ರಾಷ್ಟ್ರೀಯ ಮಟ್ಟದಲ್ಲಿ 49ನೇ ರ‍್ಯಾಂಕ್ ಪಡೆದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಆಳ್ವಾಸ್‌ನ ಶೈಕ್ಷಣಿಕ ಬೆಂಬಲ ಸಾಧನೆಗೆ ಪೂರಕ: ರಕ್ಷಾ

ಆಳ್ವಾಸ್ ಪದವಿ ಕಾಲೇಜಿನ ವೃತ್ತಿಪರ ವಾಣಿಜ್ಯ ವಿಭಾಗದಲ್ಲಿ ದ್ವಿತೀಯ ವರ್ಷದ ಬಿಕಾಂನೊಂದಿಗೆ ಸಿಎ ವ್ಯಾಸಂಗ ಮಾಡುತ್ತಿರುವ ರಕ್ಷಾ ರಾಮಚಂದ್ರ ನಾಯ್ಕ ಸಿಎ ಇಂಟರ್‌
ಮಿಡಿಯೇಟ್ ಪರೀಕ್ಷೆಯಲ್ಲಿ ರಾಷ್ಟ್ರೀಯ ಮಟ್ಟದಲ್ಲಿ 49ನೇ ರ‍್ಯಾಂಕ್‌ ಗಳಿಸಿ ಸಾಧನೆ ಮೆರೆದಿದ್ದಾರೆ.
ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಆರು ಅಣಕು ಪರೀಕ್ಷೆಗಳು (ಮಾಕ್ ಟೆಸ್ಟ್ಗಳು) ಹಾಗೂ ಅದಕ್ಕೂ ಮುನ್ನ ನಡೆಸಿದ್ದ ಸರಣಿ ಪರೀಕ್ಷೆಗಳು ಸಿಎ ಪರೀಕ್ಷೆಯ ಸಿದ್ಧತೆಯಲ್ಲಿ ಮಹತ್ವದ ಪಾತ್ರ ವಹಿಸಿವೆ.
ಕಳೆದ ಮೂರು ತಿಂಗಳುಗಳಿ0ದ ಪ್ರತಿದಿನ 10ರಿಂದ 12 ಗಂಟೆಗಳ ಕಾಲ ನಿರಂತರ ಅಧ್ಯಯನ ನಡೆಸಿದ್ದು, ಈ ಪರಿಶ್ರಮದ ಜೊತೆಗೆ ಆಳ್ವಾಸ್‌ನಲ್ಲಿ ದೊರೆತ ಶೈಕ್ಷಣಿಕ ಬೆಂಬಲ ಮತ್ತು ಪರೀಕ್ಷಾ ಸಿದ್ಧತೆಗೆ ಪೂರಕವಾದ ವ್ಯವಸ್ಥೆಗಳು ಉತ್ತಮ ಫಲಿತಾಂಶ ಗಳಿಸಲು ಸಹಕಾರಿಯಾಗಿದೆ.
ಮುಂದಿನ ಸಿಎ ಅಂತಿಮ ಪರೀಕ್ಷೆಯಲ್ಲಿಯೂ ಉತ್ತಮ ರ‍್ಯಾಂಕ್‌ನೊ0ದಿಗೆ ಉತ್ತೀರ್ಣರಾಗುವ ಹಂಬಲವನ್ನು ರಕ್ಷಾ ವ್ಯಕ್ತಪಡಿಸಿದ್ದಾರೆ.
ಅಭಿನಂದನೆ
ವೃತ್ತಿಪರ ಶಿಕ್ಷಣದಲ್ಲಿ ವಿದ್ಯಾರ್ಥಿಗಳು ಉನ್ನತ ಸಾಧನೆ ಮಾಡುವಂತೆ ಆಳ್ವಾಸ್ ಶಿಕ್ಷಣ ಸಂಸ್ಥೆ ಒದಗಿಸುತ್ತಿರುವ ನಿರಂತರ ಮಾರ್ಗದರ್ಶನ, ಪರೀಕ್ಷಾ ಸಿದ್ಧತೆಯ ವ್ಯವಸ್ಥೆ ಮತ್ತು ವಿದ್ಯಾರ್ಥಿ
ಕೇಂದ್ರಿತ ಶೈಕ್ಷಣಿಕ ಬೆಂಬಲವು ಈ ಫಲಿತಾಂಶದಲ್ಲಿ ಪ್ರತಿಫಲಿತವಾಗಿದೆ ಎಂದು ಡಾ ಎಮ್ ಮೋಹನ ಆಳ್ವ ಹೇಳಿದ್ದಾರೆ.
ವಿದ್ಯಾರ್ಥಿಗಳ ಈ ಸಾಧನೆಗೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅಭಿನಂದನೆ ಸಲ್ಲಿಸಿದ್ದಾರೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now