ಜೀವದ ಹಂಗು ತೊರೆದು ದುರಂತ ತಪ್ಪಿಸಿದ ಸ್ಮಿತ್ ಮಚ್ಚಾರ್ ಹಾಗೂ ಸಿಬ್ಬಂದಿಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ ಪ್ರದಾನ

ಜೀವದ ಹಂಗು ತೊರೆದು ದುರಂತ ತಪ್ಪಿಸಿದ ಸ್ಮಿತ್ ಮಚ್ಚಾರ್ ಹಾಗೂ ಸಿಬ್ಬಂದಿಗೆ ಆರ್ಡರ್ ಆಫ್ ಜಾಯೆದ್ ಪ್ರಶಸ್ತಿ ಪ್ರದಾನ
0Shares

ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನದಲ್ಲಿ ನಡೆದ ಆಕ್ರಮಣದ ವೇಳೆ ಜೀವದ ಹಂಗು ತೊರೆದು ಪ್ರಯಾಣಿಕರ ಜೀವ ಉಳಿಸಿದ್ದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಹಾಗೂ ಫ್ಲೈದುಬೈ ವಿಮಾನ ಸಿಬ್ಬಂದಿಗೆ ಯುನೈಟೆಡ್ ಅಬ್ ಎಮಿರೇಟ್ಸ್ ಸರ್ಕಾರವು ಅತ್ಯುನ್ನತ ಆರ್ಡರ್ ಆಫ್ ಜಾಯೆದ್ II (Order of Zayed II) ಪ್ರಶಸ್ತಿ ನೀಡಿ ಗೌರವಿಸಿದೆ.

ದೊಡ್ಡ ದುರಂತವನ್ನು ತಪ್ಪಿಸಿ ಪ್ರಯಾಣಿಕರ ರಕ್ಷಣೆಗಾಗಿ ಮತ್ತು ವಿಮಾನದ ಭದ್ರತೆಗಾಗಿ ಸಿಬ್ಬಂದಿ ತೋರಿದ ಅಪ್ರತಿಮ ಧೈರ್ಯ ಹಾಗೂ ವೃತ್ತಿಪರತೆಯನ್ನು ಯುಎಇ ನಾಯಕತ್ವ ಮುಕ್ತಕಂಠದಿಂದ ಕೊಂಡಾಡಿದೆ. ದುಬೈನ ಕಿರಿಯ ರಾಜಕುಮಾರ ಹಾಗೂ ಉಪ ಪ್ರಧಾನಿ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೌಮ್ ಅವರು ಮಂಗಳವಾರ ಈ ಗೌರವಗಳನ್ನು ಅಧಿಕೃತವಾಗಿ ವಿತರಿಸಿದರು.

ಘಟನೆ ನಡೆದ ತಕ್ಷಣವೇ ಎಚ್ಚೆತ್ತುಕೊಂಡಿದ್ದ ಯುಎಇ ನಾಯಕರು, ಅಕ್ಟೋಬರ್ 3ರಂದೇ ಚಿಕಿತ್ಸೆ ಪಡೆಯುತ್ತಿದ್ದ ಕ್ಯಾಪ್ಟನ್ ಸ್ಮಿತ್ ಮಚ್ಚಾರ್ ಅವರನ್ನು ಆಸ್ಪತ್ರೆಗೆ ಭೇಟಿ ಮಾಡಿ ಧೈರ್ಯ ತುಂಬಿದ್ದರು. ‘ಕ್ಯಾಪ್ಟನ್ ಸ್ಮಿತ್ ಮಚ್ಚರ್ ಅತ್ಯಂತ ಹೆಚ್ಚಿನ ಜವಾಬ್ದಾರಿ, ಕಾಳಜಿ ಮತ್ತು ಧೈರ್ಯವನ್ನು ಪ್ರದರ್ಶಿಸಿದ್ದಾರೆ. ರಾಷ್ಟ್ರದ ನಾಯಕತ್ವದಿಂದ ಅವರಿಗೆ ನಮ್ಮ ಸಂಪೂರ್ಣ ಮೆಚ್ಚುಗೆಯಿದೆ ಎಂದು ಶೇಖ್ ಹ ಹಮ್ದಾನ್ ಸಾಮಾಜಿಕ ಜಾಲತಾಣದಲ್ಲಿ ಬಣ್ಣಿಸಿದ್ದರು. ಯುಎಇಯ ಸಾಮಾನ್ಯ ನಾಗರಿಕ ವಿಮಾನಯಾನ ಪ್ರಾಧಿಕಾರ (GCAA) ಕೂಡ ಪೈಲಟ್, ಸಿಬ್ಬಂದಿ ಮತ್ತು ಪ್ರಯಾಣಿಕರ ಸಮಯೋಚಿತ ಕಾರ್ಯಾಚರಣೆಯನ್ನು ತೀವ್ರವಾಗಿ ಶ್ಲಾಘಿಸಿತ್ತು.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now