—

ದಿನಾಂಕ: 24/10/2026 ರಂದು ಶಂಭುಲಿಂಗಯ್ಯ ಎಂ ಇ ಪೊಲೀಸ್ ಉಪನಿರೀಕ್ಷಕರು(ತನಿಖೆ) ಮಣಿಪಾಲ ಇವರು ಗಸ್ತಿನಲ್ಲಿರುವಾಗ ದೊರೆತ ಮಾಹಿತಿಯಂತೆ ಯಾರೋ ಆಸಾಮಿಯು ಮಣಿಪಾಲ ವಿದ್ಯಾರತ್ನ ನಗರದ ಮಾಂಡವಿ ಎಮರಾಲ್ಡ್ ಕಟ್ಟಡದ ಹಿಂಭಾಗದ ಸಾರ್ವಜನಿಕ ರಸ್ತೆಯಲ್ಲಿ ಮಾರಣಾಂತಿಕ ಆಯುಧಗಳನ್ನು ಇಟ್ಟುಕೊಂಡು ಅನುಮಾನಾಸ್ಪದವಾಗಿ ವರ್ತಿಸುತ್ತಿರುವ ಬಗ್ಗೆ ದೊರೆತ ಮಾಹಿತಿಯಂತೆ ಮಣಿಪಾಲ ಠಾಣಾ ಸಿಬ್ಬಂದಿಯವರೊಂದಿಗೆ ಕೂಡಲೇ ಸ್ಥಳಕ್ಕೆ ತೆರಳಿ ಆಪಾದಿತನಾದ ಮಹಮ್ಮದ್ ಪರ್ವೇಜ್ ಪ್ರಾಯ 26 ವರ್ಷ ಮೊದಲ ಮಹಡಿ, ಮಾಂಡವಿ ಪ್ಯಾರಡೈಸ್, VRL ಗೊಡಾನ್ ಬಳಿ ಕಿನ್ನಿಮುಲ್ಕಿ ಉಡುಪಿ ತಾಲೂಕು ಮತ್ತು ಜಿಲ್ಲೆ ಈತನನ್ನು ವಶಕ್ಕೆ ಪಡೆದುಕೊಂಡು ಆಪಾದಿತನಿಂದ 1) ಸುಮಾರು 20 ಇಂಚು ಉದ್ದ 2 ಇಂಚು ಅಗಲದ ನೀಲಿ ಬಣ್ಣದ ಹಿಡಿಕೆಯುಳ್ಳ ಕಬ್ಬಿಣದ ಲಾಂಗ್ ,2) ಸುಮಾರು 16 ಇಂಚು ಉದ್ದ 1.5 ಇಂಚು ಅಗಲದ ಹಸಿರು ಬಣ್ಣದ ಹಿಡಿಕೆಯುಳ್ಳ ಕಬ್ಬಿಣದ ಚಾಕು ವಶಪಡಿಸಿಕೊಳ್ಳಲಾಗಿರುತ್ತದೆ. ಆರೋಪಿತನಾದ ಮಹಮ್ಮದ್ ಪರ್ರವೇಜ್ ನನ್ನ ವಿರುದ್ದ ಈಗಾಗಲೇ ಉಡುಪಿಯ ಉಡುಪಿ ನಗರ, ಶಿರ್ವ, ಸೆನ್ ಮತ್ತು ಮಂಗಳೂರು ನಗರದ ಕಾವೂರು ಪೊಲೀಸ್ ಠಾಣೆಯಲ್ಲಿ ಮಾದಕ ವಸ್ತು ಮಾರಾಟ ಹಾಗೂ ಸೇವನೆ ಬಗ್ಗೆ ಪ್ರಕರಣಗಳು ಇದ್ದು ನನಗೆ ದಾವೂದ್, ಇಸಾಕ್ ಹಾಗೂ ಗರುಡಾ ಗ್ಯಾಂಗ್ ನ ಕೆಲವರೊಂದಿಗೆ ವೈಮನಸ್ಸು ಇದ್ದು ಅವರ ಮೇಲೆ ಹಲ್ಲೆ ಮಾಡುವ ಉದ್ದೇಶದಿಂದ ಆಯುಧಗಳನ್ನು ಇಟ್ಟುಕೊಂಡಿರುತ್ತೇನೆ ಎಂದು ತಿಳಿಸಿರುತ್ತಾನೆ , ಆರೋಪಿತನು ಯಾವುದೇ ಸೂಕ್ತ ಕಾರಣವಿಲ್ಲದೇ ಮಾರಣಾಂತಿಕ ಆಯುಧಗಳನ್ನು ಅನುಮತಿ ಇಲ್ಲದೇ ಇಟ್ಟುಕೊಂಡಿರುವುದು ಕಾನೂನು ಬಾಹಿರ ಎಂದು ಶಂಭುಲಿಂಗಯ್ಯ ಎಂ ಇ ಪೊಲೀಸ್ ಉಪನಿರೀಕ್ಷಕರು(ತನಿಖೆ) ಮಣಿಪಾಲ ಇವರು ಸದ್ರಿ ಆರೋಪಿತನನ್ನು ವಶಕ್ಕೆ ಪಡೆದು, ಆರೋಪಿತನಿಂದ ಆಯುಧಗಳನ್ನು ಜಪ್ತಿಪಡಿಸಿಕೊಂಡಿದ್ದು, ಆರೋಪಿತನ ವಿರುದ್ಧ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 175/2026 u/s 4, 25(1B),(b) Arms Act-1959 ರಂತೆ ಪ್ರಕರಣ ದಾಖಲಾಗಿದ್ದು, ಆರೋಪಿತನನ್ನು ದಸ್ತಗಿರಿ ಕ್ರಮ ಜರುಗಿಸಿ ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಮಾನ್ಯ ನ್ಯಾಯಾಲಯವು ಆರೋಪಿತನಿಗೆ ನ್ಯಾಯಾಂಗ ಬಂಧನ ವಿಧಿಸಿರುತ್ತದೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now