
ಮುಂಬೈ: ಭಾರತೀಯ ಕಿರುಚಿತ್ರಗಳಲ್ಲಿ ಅತ್ಯಂತ ಜನಪ್ರಿಯವಾದದ್ದು
ಅಪರಾಧ ತನಿಖಾ ಧಾರಾವಾಹಿ ‘ಸಿ.ಐ.ಡಿ.’ (CID) ಸೃಷ್ಟಿಕರ್ತ, ಖ್ಯಾತ ನಿರ್ಮಾಪಕ ಮತ್ತು ನಿರ್ದೇಶಕ ಬಿ.ಪಿ. ಸಿಂಗ್ (Brijendra Pal Singh) ನಿಧನ ಹೊಂದಿದ್ದಾರೆ.
ಮಂಗಳವಾರ (ಅ.27) ಮುಂಜಾನೆ 77 ವರ್ಷದ ಬಿಪಿ ಸಿಂಗ್ ನಿಧನ ಹೊಂದಿದರು.
ಖ್ಯಾತ ಚಲನಚಿತ್ರ ನಿರ್ಮಾಪಕ ಅಶೋಕ್ ಪಂಡಿತ್ ಅವರು ಸಾಮಾಜಿಕ ಜಾಲತಾಣದ ಮೂಲಕ ಈ ದುಃಖದ ಸುದ್ದಿಯನ್ನು ಹಂಚಿಕೊಂಡಿದ್ದಾರೆ. ಭಾರತೀಯ ಚಲನಚಿತ್ರ ಮತ್ತು ಕಿರುತೆರೆ ನಿರ್ದೇಶಕರ ಸಂಘದ (IFTDA) ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಅವರೊಂದಿಗೆ ಕೆಲಸ ಮಾಡಿದ ನೆನಪುಗಳನ್ನು ಪಂಡಿತ್ ಮೆಲಕುಹಾಕಿದ್ದಾರೆ.
ದಿಗ್ಗಜ ನಿರ್ಮಾಪಕ-ನಿರ್ದೇಶಕ ಬಿ.ಪಿ. ಸಿಂಗ್ ಜಿ ಅವರ ಅಕಾಲಿಕ ನಿಧನದ ಸುದ್ದಿ ಕೇಳಿ ತೀವ್ರ ದುಃಖವಾಗಿದೆ. ತಮ್ಮ ‘ಸಿ.ಐ.ಡಿ’ ಮತ್ತು ‘ಆಹಟ್’ ಕಾರ್ಯಕ್ರಮಗಳ ಮೂಲಕ ಇಡೀ ದೇಶವನ್ನೇ ರಂಜಿಸಿದ ಶ್ರೇಷ್ಠ ಚಲನಚಿತ್ರ ನಿರ್ಮಾಪಕ ಅವರಾಗಿದ್ದರು. ಅವರ ಕೆಲಸವು ಮುಂಬರುವ ಪೀಳಿಗೆಗೆ ಎಂದೆಂದಿಗೂ ಸ್ಫೂರ್ತಿಯಾಗಿರುತ್ತದೆ. ಐಎಫ್ಟಿಡಿಎ ಅಧ್ಯಕ್ಷರಾಗಿದ್ದಾಗ ಅವರೊಂದಿಗೆ ನಿಕಟವಾಗಿ ಕೆಲಸ ಮಾಡುವ ಭಾಗ್ಯ ನನಗಿತ್ತು,” ಎಂದು ಅಶೋಕ್ ಪಂಡಿತ್ ಸಂತಾಪ ಸೂಚಿಸಿದ್ದಾರೆ.
ಮೃತರ ಅಂತಿಮ ಸಂಸ್ಕಾರ ಅಕ್ಟೋಬರ್ 28ರ ಬುಧವಾರ ನಡೆಯಲಿದ್ದು, ಹೆಚ್ಚಿನ ವಿವರಗಳನ್ನು ಶೀಘ್ರದಲ್ಲೇ ತಿಳಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ.
Join Our WhatsApp Group!
Stay updated with the latest news and updates by joining our WhatsApp group. Click the button below to join:
Join Now