ತೆಂಕಪೇಟೆ ಉಡುಪಿ , ಜಿ ಎಸ್ ಬಿ ಯುವಕ ಮಂಡಳಿಯ 56 ನೇ ವಾರ್ಷಿಕೋತ್ಸವ

ತೆಂಕಪೇಟೆ ಉಡುಪಿ , ಜಿ ಎಸ್ ಬಿ ಯುವಕ ಮಂಡಳಿಯ 56 ನೇ ವಾರ್ಷಿಕೋತ್ಸವ
0Shares

ಶ್ರೀ ಲಕ್ಷ್ಮೀ ವೆಂಕಟೇಶ್ ದೇವಸ್ಥಾನ ತೆಂಕಪೇಟೆ ಉಡುಪಿ , ಜಿ ಎಸ್ ಬಿ ಯುವಕ ಮಂಡಳಿಯ 56 ನೇ ವಾರ್ಷಿಕೋತ್ಸವ ಇತ್ತೀಚಿಗೆ ದೇವಳದ ಕಮಲನಾಥ್ ಮಂಟಪದಲ್ಲಿ ನೆಡೆಯಿತು

ಶ್ರೀದೇವರ ಸನ್ನಿಧಿಯಲ್ಲಿ ನೆಡೆಯುವ ದೇವಳದ ವಾರ್ಷಿಕ ಉತ್ಸವ , ಹಬ್ಬ ಹರಿದಿನದ ಸಮಾರಂಭದಲ್ಲಿ ಹಲವು ವರ್ಷಗಳ ಕಾಲ ಪಾಕತಜ್ಞರಾಗಿ ಸೇವೆ ಸಲ್ಲಿಸಿ ಈಗ ನಿವೃತ್ತಿ ಜೀವನ ನೆಡೆಸುತ್ತಿರುವ ಮರ್ಣೆ ವೆಂಕಟೇಶ್ ಕಾಮತ್ ದಂಪತಿಯನ್ನು ಶಾಲು ಹೊದಿಸಿ , ಫಲ ಪುಷ್ಪ , ಶ್ರೀದೇವರ ಪ್ರಸಾದ ನೀಡಿ ಗೌರವಿಸಲಾಯಿತು

ಸಮಾರಂಭದಲ್ಲಿ ಆಡಳಿತ ಮೊಕ್ತೇಸರ ಗುಜ್ಜಾಡಿ ಪ್ರಭಾಕರ್ ನಾಯಕ್ ಅಧ್ಯಕ್ಷತೆ ವಹಿಸಿದರು , ಮುಖ್ಯ ಅಥಿತಿ ತ್ರಿಷಾ ಸಂಸ್ಥೆಯ ಸಿ ಎ ಗೋಪಾಲಕೃಷ್ಣ ಭಟ್ ನವರಾತ್ರಿಯಲ್ಲಿ ಜರಗಿದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಿಸಿ ಶುಭ ಹಾರೈಸಿದರು , ಜಿ ಎಸ್ ಬಿ ಯುವಕ ಮಂಡಳಿ ಅಧ್ಯಕ್ಷ ನಿತೇಶ್ ಶೆಣೈ , ಮಾಜಿ ಅಧ್ಯಕ್ಷ ಸುಬ್ರಮಣ್ಯ ಪೈ , ಶ್ರೀಮತಿ ವಿಜಿತಾ ಬಿ ಶೆಣೈ ಹಾಗೂ ಜಿ ಎಸ್ ಬಿ ಯುವಕ ಮಂಡಳಿ ಪದಾಧಿಕಾರಿಗಳು ಉಪಸ್ಥರಿದ್ದರು

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now