ಸಾವಿನಲ್ಲೂ ಸಾರ್ಥಕತೆ: ಬ್ರೈನ್​ಡೆಡ್​ ಆದ ಹರಪನಹಳ್ಳಿಯ ಯುವಕನಿಂದ ಆರು ಮಂದಿಗೆ ಮರುಜೀವ

ಸಾವಿನಲ್ಲೂ ಸಾರ್ಥಕತೆ: ಬ್ರೈನ್​ಡೆಡ್​ ಆದ ಹರಪನಹಳ್ಳಿಯ ಯುವಕನಿಂದ ಆರು ಮಂದಿಗೆ ಮರುಜೀವ
0Shares

ದಾವಣಗೆರೆ: ನಗರದ ಆಂಜನೇಯ ಬಡಾವಣೆ ನಿವಾಸಿಯಾದ ನರೇಶ್, ಮೂಲತಃ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ರಾಗಿಮಸಲವಾಡ ಗ್ರಾಮದವರು.‌ ಇವರು ಮಾಡಿರುವ ಸಮಾಜ ಮುಖಿ ಕೆಲಸಕ್ಕೆ ಇದೀಗ ಇಡೀ ರಾಜ್ಯದಲ್ಲಿ ಮನೆಮಾತಾಗಿದ್ದಾರೆ. ಅಲ್ಲದೇ ಸಾವಿನಲ್ಲೂ ಅವರು ಸಾರ್ಥಕತೆ ಮೆರೆದಿದ್ದಾರೆ.‌ ಬ್ರೈನ್​​ಡೆಡ್ ಆಗಿ ಕುಟುಂಬವನ್ನು ಅಗಲಿದ ನರೇಶ್ ಅವರು ಆರು ಜನರ ಬದುಕಿಗೆ ಬೆಳಕಾಗಿದ್ದಾರೆ.

ಅಂಗಾಂಗ ದಾನ ಮಾಡಿರುವ ನರೇಶ್ ಬಡವರ ಪಾಲಿಗೆ ದಾರಿ ದೀಪವಾಗಿದ್ದಾರೆ. ಸದ್ಯ ಅವರನ್ನು ಕಳೆದುಕೊಂಡಿರುವ ಕುಟುಂಬದಲ್ಲಿ ದುಃಖ ಮಡುಗಟ್ಟಿದೆ. ಪತ್ನಿ ಹಾಗೂ ಏಳನೇ ತರಗತಿ ವ್ಯಾಸಂಗ ಮಾಡುತ್ತಿರುವ ಪುತ್ರನನ್ನು ನರೇಶ್ ಅಗಲಿದ್ದು, ಅವರ ಕುಟುಂಬ ದೇಹದ ಅಂಗಾಂಗ ದಾನ ಮಾಡಿ ಮಾದರಿಯಯಾಗಿದೆ.

0Shares

Join Our WhatsApp Group!

Stay updated with the latest news and updates by joining our WhatsApp group. Click the button below to join:

Join Now